ಬಳ್ಳಾರಿ : ನಗರದ ತಾಳೂರು ರಸ್ತೆಯ ರೇಣುಕಾ ನಗರದ ಎಂಟನೇ ಕ್ರಾಸ್ನಲ್ಲಿರುವ ನುಡಿ ಕೆಫೆಯಲ್ಲಿ ಇಂದು ಸಂಜೆ ೪.೩೦ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರಹಮತ್ ತರಿಕೇರಿಯವರೊಂದಿಗೆ ನುಡಿ ಮಾತು – ೧, ಕನ್ನಡ ಮಾತು ತಲೆ ಎತ್ತುವ ಬಗೆ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನುಡಿ ಕೆಫೆಯ ಮಾಲಿಕ ಮತ್ತು ಮಕ್ಕಳ ಸಾಹಿತಿ ಡಾ.ಹಂದ್ಯಾಳ್ ಶಿವಲಿಂಗಪ್ಪ ತಿಳಿಸಿದ್ದಾರೆ.
ಕನ್ನಡ ಭಾಷೆಯ ಬಗ್ಗೆ ಕಿಳರಮೆಯನ್ನು ಹೊಂದಿ, ಇಂಗ್ಲೀಷ್ ಇಲ್ಲದೆ ಬದುಕಿಲ್ಲ ಎನ್ನುವ ಈ ಹೊತ್ತಿನಲ್ಲಿ ಕನ್ನಡ ಭಾಷೆಯ, ನುಡಿಯ ಬಗ್ಗೆ ಕಾರ್ಯಕ್ರಮದಲ್ಲಿ ತರಿಕೇರೆಯವರು ತಿಳಿಸಿಕೊಡಲಿದ್ದಾರೆ, ಆಸಕ್ತರು ಈ ವಿನೂತನ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ನುಡಿ ಬಳಗದ ಪರವಾಗಿ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.