ಬಳ್ಳಾರಿ: ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ನಿಮಿತ್ತ ಬಳ್ಳಾರಿ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ನಗರದ ಗಾಂಧಿಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಭಾರತೀಯ ದಂತ ವೈದ್ಯರ ಸಂಘದ ಕೋರಿಕೆ ಮೇರೆಗೆ ಪಾಲಿಕೆ ಮೂರನೇ ವಾರ್ಡ್ ಸದಸ್ಯ ಎಂ.ಪ್ರಭAಜನ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಉಚಿತ ದಂತ ತಪಾಸಣಾ ಶಿಬಿರವನ್ನು ಪಾಲಿಕೆ ಮೇಯರ್ ಬಿ.ಶ್ವೇತಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮೇಯರ್ ಬಿ.ಶ್ವೇತಾ, ಮಾ.೮ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ. ಮಹಿಳಾ ಪೌರ ಕಾರ್ಮಿಕರು ಯಾವುದೇ ಬೇಧಭಾವ ಇಲ್ಲದೇ ನಗರದಲ್ಲಿ ಸ್ವಚ್ಛತಾ ಸೇವೆ ಮಾಡುವ ಮೂಲಕ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅಂತಹ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವಲ್ಲಿ ನಾವೆಲ್ಲರೂ ಮುಂದೆ ಬರಬೇಕು ಎಂದು ತಿಳಿಸಿದರು.
ಶಿಬಿರದ ಆಯೋಜಕ, ಪಾಲಿಕೆ ಸದಸ್ಯ ಎಂ.ಪ್ರಭAಜನ್ ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ಕೇವಲ ನಗರವನ್ನು ಮಾತ್ರ ಸ್ವಚ್ಛ ಮಾಡುತ್ತಿಲ್ಲ. ಅವರ ಸ್ವಚ್ಛತಾ ಕೆಲಸದಲ್ಲಿ ನಮ್ಮೆಲ್ಲರ ಆರೋಗ್ಯವಿದೆ. ನಾವಿಂದು ಉತ್ತಮವಾಗಿ ಆರೋಗ್ಯವಾಗಿದ್ದೇವೆ ಎಂದರೆ ಅದಕ್ಕೆ ಪೌರ ಕಾರ್ಮಿಕರ ಕೊಡುಗೆ ಕಾರಣ. ಪೌರ ಕಾರ್ಮಿಕರು, ಮಹಿಳಾ ಪೌರ ಕಾರ್ಮಿಕರು ಸಮಸ್ಯೆಗಳಿಗೆ ಸ್ಪಂದಿಸಲು, ಸಹಾಯ, ಸಹಕಾರ ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ನಡೆದ ದಂತ ತಪಾಸಣಾ ಶಿಬಿರದಲ್ಲಿ ಭಾರತೀಯ ದಂತ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ಮಧುಸೂದನ್, ಕಾರ್ಯದರ್ಶಿ ಡಾ. ಶ್ರೀಧರ್, ಖಜಾಂಚಿ ಡಾ. ರಾಜೀವ್, ಸಂಘದ ರಾಜ್ಯಘಟಕದ ಸದಸ್ಯರಾದ ಡಾ. ಭಾವನಾ, ಡಾ. ವಾಣಿಶ್ರೀ, ಡಾ. ಶ್ವೇತಾ ಅವರು, ಮಹಿಳಾ ಪೌರ ಪೌರಕಾರ್ಮಿಕರಿಗೆ ದಂತ ತಪಾಸಣೆ ಮಾಡಿದರು. ಒಟ್ಟು ೩೦೦ ಜನ ಮಹಿಳಾ ಪೌರ ಕಾರ್ಮಿಕರು ದಂತ ತಪಾಸಣೆಗೆ ಒಳಗಾಗಿದ್ದು, ಈ ಪೈಕಿ ೧೭೦ ಮಹಿಳೆಯರಲ್ಲಿ ದಂತ ಸಮಸ್ಯೆಗಳು ಕಂಡುಬAದಿತು. ಇವರಿಗೆ ಔಷಧ, ಹಲ್ಲುಜ್ಜಲು ಪೇಸ್ಟ್, ಮುಲಾಮು, ಮಾತ್ರೆಗಳನ್ನು ವಿತರಿಸಲಾಯಿತು. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಮಾಡುವುದಾಗಿ ವೈದ್ಯರು ತಿಳಿಸಿದರು.
ಇದೇ ವೇಳೆ ಇಬ್ಬರು ಹಿರಿಯ ಪೌರ ಕಾರ್ಮಿಕ ಮಹಿಳೆಯರಿಗೆ ಸನ್ಮಾನಿಸಲಾಯಿತು. ಈ ವೇಳೆ ಉಪಮೇಯರ್ ಬಿ.ಜಾನಕಿ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಸದಸ್ಯರಾದ ಮಿಂಚುಶ್ರೀನಿವಾಸ್, ಮುಖಂಡರಾದ ಬಿ.ಆರ್.ಎಲ್.ಶ್ರೀನಿವಾಸ್, ಗೋವಿಂದರಾಜುಲು ಸೇರಿ ಹಲವರು ಇದ್ದರು.