ರಾಯಚೂರು, ಮಾ.12- ಅನಂತಕುಮಾರ್ ಹೆಗಡೆ ಒಬ್ಬ ಮೂರ್ಖ ಸಂಸದ ಸಂವಿಧಾನವನ್ನ ಬದಲಿ ಮಾಡುತ್ತೇವೆ ಎಂದು ಹೇಳುವ ಸಂಸದನನ್ನು ಆ ಕ್ಷೇತ್ರ ಜನ ಹೇಗೆ ಗೆಲ್ಲಿಸಿದ್ದಾರೋ ಗೊತ್ತಿಲ್ಲ ಎಂದು ಯುವಜನ ಕ್ರೀಡೆ ಸಚಿವ ಬಿ.ನಾಗೇಂದ್ರ ಹೇಳಿದರು.
ಮಂತ್ರಾಲಯದಲ್ಲಿ ವೈಭವೋತ್ಸವ ಕಾರ್ಯಕ್ರಮದ ನಿಮಿತ್ತ ರಾಯರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸಂವಿಧಾನ ಇದ್ದದ್ದಕ್ಕೆ ನಾನು ಶಾಸಕ ಮಂತ್ರಿಯಾಗಿದ್ದೇನೆ
ಪ್ರಧಾನಿ ಮೋದಿ ಅವರು ಸಹ ಸಂವಿಧಾನದಿಂದಲೇ ನಾನು ಪ್ರಧಾನಿಯಾಗಿದ್ದೇನೆ ಅಂತ ಹೇಳ್ತಾರೆ ಆದರೆ ಅವರ ಪಕ್ಷದ ಸಂಸದ ಗೆದ್ದು ಬಂದ ಕೂಡಲೇ ಸಂವಿಧಾನ ಬದಲಿಸುತ್ತೇವೆ ಅಂತಾರೆ.ಸೂರ್ಯ ಚಂದ್ರ ಸಾಕ್ಷಿಯಾಗಿ ಹೇಳುವೆ ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಇಂತಹ ಮೂರ್ಖರು ಎಷ್ಟು ಹೇಳಿದರು ಸಂವಿಧಾನ ಬದಲಾಗಲ್ಲ. ರಾಜ್ಯದಲ್ಲಿ ಇವರ ವಿರುದ್ದ ಪ್ರತಿಭಟನೆ ಮಾಡಲಾಗುತ್ತಿದೆ.ಪ್ರತಿಯೊಬ್ಬರು ಕೂಡ ಅನಂತಕುಮಾರ್ ಹೆಗಡೆಗೆ ಗೋ ಬ್ಯಾಕ್ ಅನ್ನೋ ಪರಸ್ಥಿತಿ ಬರುತ್ತೆ ಎಂದು ಟೀಕಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನ ಗೆಲ್ಲುವ ವಿಶ್ವಾಸವಿದೆ.ನಮ್ಮ ಗ್ಯಾರೆಂಟಿಗಳಿಂದ ಜನ ಸುಖ ಶಾಂತಿಯಿಂದ ಇದ್ದಾರೆ.ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ ನೇತೃತ್ವದಲ್ಲಿ ಡಬಲ್ ಇಂಜಿನ್ ಸರಕಾರಕ್ಕೆ ಗ್ಯಾರೆಂಟಿ ಯೋಜನೆಗಳಿಂದಾಗಿ ಜನ ಆಶಿರ್ವಾದ ಮಾಡಲಿದ್ದಾರೆ ಎಂದರು.
ಬಳ್ಳಾರಿಯಲ್ಲಿ ಕಾಂಗ್ರೆಸ್ ನಿಂದ ಯಾರೇ ನಿಂತರೂ ಗೆಲ್ಲಿಸಿಕೊಂಡು ಬರುವಂತೆ ಪಕ್ಷ ಜವಾಬ್ದಾರಿ ನೀಡಿದೆ. ನಮ್ಮ ಸಹೋದರ ಸಹ ಆಕಾಂಕ್ಷಿಯಾಗಿದ್ದಾರೆ ಯಾರಿಗೇ ಟಿಕೆಟ್ ನೀಡಿದರು ಗೆಲ್ಲಿಸಿಕೊಂಡು ಬರುತ್ತೇವೆ.ನಾನು ರಾಯರ ಮಠದಲ್ಲಿ ಹೇಳುತ್ತಿದ್ದೇನೆ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೆ. ಸಂವಿಧಾನ ಬದಲಾದರೆ ರಕ್ತಪಾತವಾಗುತ್ತೆ ಎನ್ನವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂವಿಧಾನ ಬದಲಾವಣೆವಾದರೆ ನೂರಕ್ಕೆ ನೂರರಷ್ಟು ರಕ್ತಪಾತವಾಗುತ್ತದೆ.
ಸಂವಿಧಾನ ಬಿಟ್ಟು ನಡೆದುಕೊಳ್ಳುವುದಾದರೆ ನಮಗೆ ವಾಕ್ ಸ್ವಾತಂತ್ರ್ಯವೂ ಇರಲ್ಲ.
ಶ್ರೀರಾಮುಲು ರಾಜ್ಯದ ಪರಿಸ್ಥಿತಿ ಗಮನಿಸುತ್ತಿದ್ದಾರೋ ಇಲ್ಲವೊ ಗೊತ್ತಿಲ್ಲ. ಇಂತಹ ಕೆಲಸ ಮಾಡಿಕೊಂಡೆ ಅವರು ಸೋತಿದ್ದಾರೆ. ಅನಂತಕುಮಾರ ಹೆಗಡೆ ಹೇಳಿಕೆ ಪಕ್ಷಕ್ಕೆ ಸಂಬಂಧವಿಲ್ಲ ಎಂದರೂ ಪಕ್ಷಕ್ಕೆ ಏಟು ಬಿದ್ದೇ ಬೀಳುತ್ತೆ. ಸಂವಿಧಾನ ವಿರೋಧಿಗಳ ಪರ ಶ್ರೀರಾಮುಲು ಹೊದರೆ ಜನ ಅವರಿಗೆ ಮತ್ತೊಮ್ಮೆ ತಕ್ಕ ಪಾಠ ಕಲಿಸುತ್ತಾರೆ.ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಇಂತಹ ಪುಟಗೋಸಿಗಳಿಂದಲೂ ಏನೂ ಆಗಲ್ಲ ಎಂದರು.
ಅಂಜನಾದ್ರಿಗೆ 2 ಸಾವಿರ ಕೋಟಿ ನೀಡಿದರೆ ಬಿಜೆಪಿಗೆ ಬೆಂಬಲಿಸುವುದಾಗಿ ಜನಾರ್ಧನರೆಡ್ಡಿ ಹೇಳಿಕೆ ವಿಚಾರ
ಗಾಲಿ ಜನಾರ್ಧನರೆಡ್ಡಿ ಈಗಾಗಲೇ ಅವರು ಒಂದು ಪಕ್ಷ ಕಟ್ಟಿದ್ದಾರೆ.ಅವರ ಪಕ್ಷದ ನಿಲುವು ಪ್ರಣಾಳಿಕೆ ನನಗೆ ಗೊತ್ತಿಲ್ಲ.
2 ಸಾವಿರ ಕೋಟಿ ಕೊಡುತ್ತಾರೆ ಅಂದರೆ ಬಿಜೆಪಿಗೆ ಹೋಗ್ತಿನಿ ಅಂದ್ರೆ ಹಾಸ್ಯಾಸ್ಪದವಾಗುತ್ತೆ. ಅಂಜನಾದ್ರಿಗೆ ಸಿದ್ದರಾಮಯ್ಯ ಸರಕಾರ ಈಗಾಗಲೇ 100 ಕೋಟಿ ರೂಪಾಯಿ ಅನುದಾನ ಕೊಟ್ಟಿದೆ ಎಂದರು.
ಸಿಎಎ ಅನುಷ್ಠಾನಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ನಮ್ಮ ಸಂವಿಧಾನ, ಆಹಾರ ಶೈಲಿ ,ಜೀವನ ಪದ್ದತಿಯನ್ನೇ ಬದಲಿ ಮಾಡಲು ಹೊರಟಿದೆ ಮತದಾರರು ಎಚ್ಚೆತ್ತುಕೊಳ್ಳಬೇಕು. ಇದನ್ನ ಇದೇ ರೀತಿ ಬಿಟ್ಟುಬಿಟ್ಟರೆ ತುಘಲಕ್ ದರ್ಬಾರ್ ನಡೆಯುತ್ತೆ ಎಂದರು.