ಬಳ್ಳಾರಿ_ನಗರದ 11ನೇ ವಾರ್ಡಿನ ಗ್ರಹಂ ರಸ್ತೆಯಲ್ಲಿ ಬಳ್ಳಾರಿಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಶ್ರೀ ಶಿರಿಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ನೀರಿನ ಅರವಟಿಗೆ ಮತ್ತು ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು 3ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಉದ್ಘಾಟಿಸಿ ಜನರಿಗೆ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ 11 ನೇವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಎನ್.ಗೋವಿಂದರಾಜುಲು,ಹಾಗೂ ಟ್ರಸ್ಟ್ ಅಧ್ಯಕ್ಷರಾದ ಆರ್ ಗೋಪಾಲಕೃಷ್ಣ ,ಉಪಾಧ್ಯಕ್ಷರಾದ ಕೆ ಹೆಚ್ ರಮೇಶ್ , ಖಜಾಂಚಿ ಕೆ.ಗೋವಿಂದರಾಜು,ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.