ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ 13 ನೇ ವಾರ್ಡಿನಲ್ಲಿ 3 ಬೋರವೆಲ್ ಕೊರೆಸಲಾಯಿತು.ಅದರಲ್ಲಿ ಎರಡು ಬೋರ್ವೆಲ್ ಗಳಲ್ಲಿ ನೀರು ಬಿದ್ದಿದ್ದು. ವಾರ್ಡಿನ ಜನರಲ್ಲಿ ಸಂತಸ ಮೂಡಿದೆ.13 ನೇ ವಾರ್ಡಿನ್ ಸದಸ್ಯರಾದ ರಮೇಶ್ ಮಸೀಬಿನಾಳ ಮಾತನಾಡಿ ನಾನು ಈ ವಾರ್ಡಿನ ಸದಸ್ಯನಾದ ಮೇಲೆ ಕಳೆದ ಎರಡು ವರ್ಷದಲ್ಲಿ 6 ರಿಂದ 7 ಸಿಸಿ ರಸ್ತೆಗಳು ಮಾಡಿಸಿದ್ದೇನೆ 2,3 ಓಣಿಗಳಲ್ಲಿ ವಿದ್ಯುತ್ ಸಪರ್ಕ ಮತ್ತು ಸರಿಯಾಗಿ ಚರಂಡಿ ವ್ಯವಸ್ಥೆ ಇದ್ದಿದಲ್ಲ. ಅವೆಲ್ಲವನ್ನೂ ಸರಿ ಮಾಡಿದ್ದೇನೆ, ಕುಡಿಯುವ ನೀರಿನ ವ್ಯವಸ್ಥೆ ವಾರ್ಡಿನಲ್ಲಿ ಸಂಪೂರ್ಣವಾಗಿ 13 ನೇ ವಾರ್ಡಲ್ಲಿ ನೀರಿನ ಸಮಸ್ಯೆ ಇದಿದ್ದಕ್ಕೆ ಈ ಬೋರವೇಲ್ ಗಳು ಹಾಕಿ ಜನತೆಯ ಅನುಕೂಲ ಮಾಡಿದ್ದೆನೆ.ಹಾಗೂ ಇನೊಂದು ದೊಡ್ಡ ಸಮಸ್ಯೆ ಅಂದ್ರೆ ಮಹಿಳೆಯರಿಗೆ ಶೌಚಾಲಯ ಸಮಸ್ಯೆ ಇದೆ ಅದನ್ನು ಈಗಾಗಲೇ ಬಹಳಷ್ಟು ಬಾರಿ ಮುಖ್ಯಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅವರಿಂದ ಯಾವುದೇ ರೀತಿ ಸ್ಪಂದನೆ ನನಗೆ ಸಿಕ್ಕಿಲ್ಲ, ಕೂಡಲೇ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಕೊಡಬೇಕು ಇಲ್ಲವಾದಲ್ಲಿ ವಾರ್ಡಿನ ಜನತೆ ಜೊತೆ ಪಟ್ಟಣ ಪಂಚಾಯತ್ ಮುಂದೆ ಧರಣಿ ಸತ್ಯಾಗ್ರಹ ಮಾಡುತೇನೆ ಎಂದು ಮುಖ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡಿನಲ್ಲಿ ತಾವು ಮಾಡಿರುವ ಕೆಲಸದ ಬಗ್ಗೆ ಹೇಳಿದರು.
ಈ ಸಂದರ್ಭದಲ್ಲಿ ಈರಣ್ಣ ಒಂಟೆತಿನ, ಸದಯ್ಯ ಇಂಡಿ, ಸಲಬಯ್ಯ ಸದಯಾನಮಠ, ಸುರೇಶ ಒಂಟೆತಿನ,ಮುತ್ತು ಜಾಲಗಾರ, ಬುಡ್ಡಾ ಬೆಪಾರಿ, ಮಂಜು ಒಂಟೆತಿನ, ಈರಯ್ಯ ಇಂಡಿಮಠ,
ಯಾಸಿನ್ ಹಚ್ಯಾಳ ಬಸವರಾಜ್ ವಂಟೆತ್ತಿನ , ಶಂಕ್ರಪ್ಪ ಜಂಬಗಿ, ಅಪ್ಪಸಾಹೇಬ ವಾಡಿದಮನಿ, ಇತರರು ಇದ್ದರು.