ಕೊಟ್ಟೂರು ಮಾ 14: ಪಟ್ಟಣದ ಪೊಲೀಸ್ ಠಾಣೆಯಲ್ಲಿ “ವಿದ್ಯಾರ್ಥಿ ಪೊಲೀಸ್ ಅನುಭವ ಕಲಿಕೆ” ಎಂಬ ಶೀರ್ಷಿಕೆ ಅಡಿಯಲ್ಲಿ ಪಿ.ಎಸ್. ಐ. ಗೀತಾಂಜಲಿ ಶಿಂಧೆ ಅವರು ವಿದ್ಯಾರ್ಥಿಗಳ ಜೊತೆ ಸಂವಾದಗಳ ಮೂಲಕ ತರಬೇತಿ ನಡೆಸಿದರು .
ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಇಂದು ಬೆಳಿಗ್ಗೆ ಇಂದು ಪಿ ಯು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪೊಲೀಸ್ ರವರ ಕರ್ತವ್ಯ, ಅವರ ನಿಯಮ ನಿಬಂಧನೆಗಳು, ಅವರಮೇಲೆ ರಾಜಕಾರಣಿಗಳಿಂದ, ಪ್ರಭಾವಿ ವ್ಯಕ್ತಿಗಳಿಂದ, ಬರುವ ಮಾನಸಿಕ ಒತ್ತಡಗಳನ್ನು ಪೊಲೀಸ್ ರಾಗಿ ನಾವು ಯಾವ ರೀತಿ ಎದರಿಸಬಹುದು ಅಥವಾ ತಡೆಯಬಹುದು, ಯಾವ ಅಪರಾಧಗಳಿಗೆ ಯಾವ ಯಾವ, ಸೆಕ್ಷನ್ ಅಡಿಯಲ್ಲಿ ಎಫ್ ಐ ಆರ್ ಹಾಕಬಹುದು, ಅದರ ಪರಿಣಾಮಗಳೇನು, ಸಣ್ಣಪುಟ್ಟ ವ್ಯಾಜ್ಯ ಮತ್ತು ದೂರುಗಳನ್ನು ಯಾವರೀತಿ ಎರಡು ಪಂಗಡದವರನ್ನು ಕೂಡಿಸಿಕೊಂಡು ಸಮಾಧಾನ ಮಾಡಿ ರಾಜಿಮಾಡಬಹುದು ಎಂದು ಕೆಲವು ಸ್ವಂತ ಅನುಭವ ಹಾಗೂ ಪೊಲೀಸ್ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಪೊಲೀಸ್ ಕರ್ತವ್ಯ ಮಾಹಿತಿ ನೀಡುವ ಮೂಲಕ “ಇಂದು ಪಿ.ಯು. ಕಾಲೇಜು ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಮಕ್ಕಳಲ್ಲಿರುವ ಅನೇಕ ಸಮಸ್ಯೆಗಳಿಗೆ ಪಿ.ಎಸ್. ಐ. ಗೀತಾಂಜಲಿ ಶಿಂಧೆ ಸ್ವ ಅನುಭವಗಳನ್ನೆ ಪಾಠ ಮಾಡಿ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳ ಪ್ರಶ್ನೆಗೆ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉನ್ಯಾಸಕರು ಹಾಗೂ ಪೊಲೀಸ್ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು.