ವಿಜಯಪುರ: ಪಂಚಾಯತಿಗೆ ಬರುವ ಅಧಿಕಾರಿಗಳಿಗೆ ,ಸಾರ್ವಜನಿಕರಿಗೆ ಗಬ್ಬೆದ್ದು ನಾರುತ್ತಿರುವ ಗಟಾರ ಸ್ವಾಗತ ಮಾಡಿಕೊಳ್ಳುತ್ತದೆ. ಸ್ವಚ್ಛತೆಗೂ ನಮಗೂ ಸಂಬಂಧವೆ ವಿಲ್ಲದಂತೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ಪಂಚಾಯತ ಮಟ್ಟದ ಅಧಿಕಾರಿಗಳು ಜನರ ಆರೋಗ್ಯ ಹಿತ ದೃಷ್ಟಿಯಿಂದ ಜಾಗೃತರಾಗಿ ಸ್ವಚ್ಛತೆ ಮಾಡದೆ ಕಣ್ಮುಚ್ಚಿ ಕುಳಿತ್ತಿದ್ದಾರೆ .ಇವರಿಂದ ಗ್ರಾಮದ ಅಭಿವೃದ್ದಿ ಸಾಧ್ಯವೆ ಇಲ್ಲವೆನಿಸುತ್ತದೆ ಎಂದು ಗ್ರಾಮದ ಜನರು.
ಇದು ವಿಜಯಪೂರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಚಿಮ್ಮಲಗಿ ಗ್ರಾಮ ಪಂಚಾಯತಿ ಕಚೇರಿ ಎದುರಿನಲ್ಲಿಯೇ ಚರಂಡಿ ಗಬ್ಬು ನಾರುತ್ತಿದ್ದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಗ್ರಾಮದ ಊರಿನ ಅಗಸಿಯ ಕಟ್ಟೆಯ ಮೇಲೆ ದಿನಾಲೂ ಹತ್ತಾರು ಜನ ಕುಳಿತು ಕೊಳ್ಳುತ್ತಾರೆ. ಗಟಾರು ತುಂಬಿ ದುರ್ವಾಸನೆ ಹೊಡಿಯುತ್ತಿವೆ.ದಿನಾಲೂ ಪಂಚಾಯತಿಗೆ ಬರುವ ಸಾರ್ವಜನಿಕರು ಚರಂಡಿ ದುರ್ವಾಸನೆಯಿಂದ ಪಿಡಿಓಗೆ, ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ತಮ್ಮ ಆಡಳಿತ ಕಛೇರಿ ಮುಂದೆ ಗಟಾರ ಸ್ವಚ್ಛತೆ ಕಾಣದೆ ಹುಲ್ಲು, ಕಸ , ಮುಳ್ಳು ಕಂಠಿಗಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿದ್ದು ಇನ್ನುಳಿದ ಪ್ರದೇಶಗಳ ಗತಿ ಅದೋಗತಿ ಎನ್ನುವಂತಾಗಿದೆ.
ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು,ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡದೆ ಅನುದಾನಕ್ಕೆ ಮಾತ್ರ ಹೋರಾಟ ಮಾಡುತ್ತಿದ್ದಾರೆ. ಎಂಬುದಾಗಿ ಅಲ್ಲಿನ ನಾಗರಿಕರು ಹಾದಿಬೀದಿಯಲ್ಲಿ ವ್ಯಂಗ ಮಾಡುತ್ತಿದ್ದಾರೆ.
ಗ್ರಾಪಂ ಎಚ್ಚೆತ್ತು ಗಮನಹರಿಸಿ ಗಟಾರು ಸ್ವಚ್ಚ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.ಗ್ರಾಮದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಸ್ವಚ್ಛ, ಸುಂದರ ಹಾಗೂ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಮುಂದಾಗುತ್ತಾರಾ ? ಅಥವಾ ಇಲ್ಲಯೋ ಕಾಯ್ದು ನೋಡಬೇಕು.