ಕೊಟ್ಟೂರು .-ಕೊಟ್ಟೂರು ಪಟ್ಟಣದಲ್ಲಿ 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಕಾಸ್ ಲಮಾಣಿ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಗೀತಾಂಜಲಿ ಸಿಂಧೇ ಪಿಎಸ್ಐ ನೇತೃತ್ವದಲ್ಲಿ 16 ಮಾರ್ಚ್ 2024 ರಂದು ಶನಿವಾರ ಚುನಾವಣಾ ಭದ್ರತೆಗೆ ನಿಯೋಜನಗೊಂಡ ಅರೆ ಸೇನಾಪಡೆ ಹಾಗೂ ಪೊಲೀಸರ ಪಥ ಸಂಚಲನ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮತದಾರರೇ ಹೆದರದಿರಿ ನಿಮ್ಮೊಂದಿಗೆ ನಾವಿದ್ದೇವೆ ನಿರ್ಭಯವಾಗಿ ಮತ ಚಲಾಯಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂಬ ಸಂದೇಶ ಸಾರುವ ಮೂಲಕ ಈ ಪಥಸಂಚಲನವನ್ನು ಕೈಗೊಂಡಿರುವುದಾಗಿ ಪಿಎಸ್ಐ ಗೀತಾಂಜಲಿ ಸಿಂಧೇ ತಿಳಿಸಿದರು.
ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿ ಪ್ರಜಾಪ್ರಭುತ್ವ ಗಟ್ಟಿ ಆಗಬೇಕಾಗಿದೆ.ಇದರಿಂದ ನ್ಯಾಯ ಸಮ್ಮತ ಅಭ್ಯರ್ಥಿ ಆಯ್ಕೆಯಾಗುವವರು ಆಗಾಗಿ ಜನರು ನಿರ್ಭಯವಾಗಿ ಮತ ಚಲಾಯಿಸಲು ಶಾಂತಿ ಹಾಗೂ ಭದ್ರತೆ ಕೈಗೊಳ್ಳುವ ನಮ್ಮ ಆದ್ಯ ಕರ್ತವ್ಯ ಆ ನಿಟ್ಟಿನಲ್ಲಿ ಇಂದು ಕೊಟ್ಟೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರಿಗೆ ದೈರ್ಯ ತುಂಬುವ ಕೆಲಸ ಮಾಡಿ ಮತ್ತು ನಮ್ಮ ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸಬೇಕು ಎಂದು ವಿಕಾಸ್ ಲಮಾಣಿ ಸರ್ಕಲ್ ಇನ್ಸ್ಪೆಕ್ಟರ್ ತಿಳಿಸಿದರು.
ಈ ಪಥಸಂಚಲನವನ್ನು ಸೌಮ್ಯವಿಕ್ರಂ ರಾಕೇಶ್ ಬಸವರಾಜ್ ಸೋಮಣ್ಣ ಮಣಿಕಂಠ ಇನ್ನು ಮುಂತಾದ ಯುವಕರು ಹಾಗೂ ಮುಖಂಡರು ಸೇರಿ ಸ್ವಾಗತವನ್ನು ಬಯಸಿದರು.
ಈ ಸಂದರ್ಭದಲ್ಲಿ ಚಂದ್ರಮೌಳಿ,ಬಸವರಾಜ್, ಎರಿಸ್ವಾಮಿ,ವಿಷ್ಣುವರ್ಧನ,ರೇವಣಸಿದ್ದಪ್ಪ ಹಾಗೂ ಇನ್ನು ಮುಂತಾದ ಸಿಬ್ಬಂದಿ ವರ್ಗವೂ ಉಪಸ್ಥಿತರಿದ್ದರು.