ಬಳ್ಳಾರಿ ಮಾ 17.- ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಎಂಬ ರೋಗಾಣುನಿಂದ ಹರಡುವ ಶತಮಾನಗಳಿಂದಲೂ ಸಮುದಾಯದಲ್ಲಿ ಇರುವ ಕ್ಷಯರೋಗವನ್ನು ನಿರ್ಮೂಲನೆ ಮಾಡಲು, ಯಾರಿಗಾದರೂ ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳಿದ್ದವರು ತಮ್ಮ ಗಮನಕ್ಕೆ ಬಂದಲ್ಲಿ ಅಂತವರಿಗೆ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆ ಮಾಡಿಸುವ ಮೂಲಕ ರೋಗವನ್ನು ಬೇಗನೆ ಪತ್ತೆ ಹಚ್ಚಲು ಪ್ರಯತ್ನಿಸೋಣವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ ರಮೇಶ್ ಬಾಬು ತಿಳಿಸಿದರು.
ಜಿಲ್ಲಾಡಳಿತ, ಪಂಚಾಯತ್, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸ್ಪತ್ರೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಘಟಕಗಳ ಮೂಲಕ ವಿಮ್ಸ್ನಿಂದ ಜಿಲ್ಲಾ ಆಸ್ಪತ್ರೆವರೆಗೆ ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಕ್ಷಯರೋಗವು ಸಂಪೂರ್ಣಾಗಿ ಮರೆಯಾಗುವುದು ಎಂಬ ಘೋಷವಾಕ್ಯದೊಂದಿಗೆ ಜರುಗಿದ 05 ಕಿಲೋಮಿಟರ್ ಮ್ಯಾರಾಥಾನ್ನಲ್ಲಿ ವಿಜೇತ ವೈದ್ಯಕೀಯ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ, ಒಮ್ಮೆ ರೋಗ ಪತ್ತೆಯಾದರೆ ಅವರ ಚಿಕಿತ್ಸಾ ಅವಧಿಯು ಮುಗಿಯುವವರೆಗೆ ಮೇಲ್ವಿಚಾರಣೆ, ರೋಗಿಗೆ ಬೆಂಬಲ, ಹಾಗೂ ದಾನಿಗಳಿಂದ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಹಾಗೂ ಅದರಲ್ಲೂ ಮಕ್ಕಳಿಗೆ ಕ್ಷಯರೋಗ ಇದ್ದಲ್ಲಿ ಪಾಲಕರ, ಸುತ್ತಲಿನ ಮನೆಗಳ ಮತ್ತು ಮಗುವಿಗೆ ಒಡನಾಟವಿರುವವರ ಪರೀಕ್ಷೆ ಮಾಡಲು ಕ್ರಮವಹಿಸಬೇಕು. ಈ ದಿಶೆಯಲ್ಲಿ ವೈದ್ಯ ವಿಧ್ಯಾರ್ಥಿಗಳಾದ ತಾವು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅಥಿಗಳಾಗಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎನ್ ಬಸರೆಡ್ಡಿ ಮಾತನಾಡಿ, ರೋಗ ಖಚಿತ ಪಟ್ಟವರನ್ನು ಚಿಕಿತ್ಸೆ ಮುಗಿಯುವವರೆಗೂ ಮೇಲ್ವಿಚಾರಣೆ ಕೈಗೊಳ್ಳುವುದು ಎಲ್ಲರ ಜವಾಬ್ದಾರಿ, ಚಿಕಿತ್ಸೆ ನಿರ್ಲಕ್ಷಿಸಿದಲ್ಲಿ ರೋಗಿಯು ಬಹುಔಷಧಿ ರೋಗ ನಿರೋಧಕ ಕ್ಷಯರೋಗಿಯಾಗಿ ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆಯ ಬೇಕಾಗುತ್ತದೆ. ಅಲ್ಲದೆ ಅದರಲ್ಲೂ ವೈದ್ಯ ವೃತ್ತಿ ಮಾಡುವವರು ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿ ಸನ್ನಿವೇಶಕ್ಕೆ ಒಳಗಾಗುತ್ತಾರೆ, ಈ ಹಿನ್ನಲೆ ಮುಂಜಾಗೃತೆ ವಹಿಸಿ ಯಾರಾದರೂ ಚಿಕಿತ್ಸೆ ಪಡೆಯಲು ನಿರಾಕರಿಸಿದರೆ ಸ್ಥಳೀಯ ಸಹಕಾರದೊಂದಿಗೆ ಚಿಕಿತ್ಸೆ ಪೂರ್ಣಗೊಳಿಸಬೇಕು, ಮುಖ್ಯವಾಗಿ ಕ್ಷಯರೋಗವನ್ನು ಸಾಮಾನ್ಯ ಖಾಯಿಲೆ ಎಂಬ ರೀತಿಯಲ್ಲಿ ಕಾಣುವ ಮೂಲಕ ಕಳಂಕ- ತಾರತಮ್ಯವನ್ನು ತೊಲಗಿಸುವ ಪ್ರಯತ್ನವನ್ನು ಮಾಡಲು ವಿನಂತಿಸಿದರು. ಮ್ಯಾರಾಥಾನ್ ವಿಜೇತರು:.
ಮಹಿಳಾ ವಿಭಾಗ:
ಡಾ ವಂದನಾ,
ಡಾ ನಿಸರ್ಗ,
ಡಾ ರಂಜೀತಾ ಪಾಟೀಲ್,
ಪುರುಷರು ವಿಭಾಗ,
ಡಾ ಜೈಕುಮಾರ್ ಟಿ,
ಡಾ ಅಖೀಲ್,
ಡಾ ಮಲ್ಲನಗೌಡ,
ಜಾಥಾ ಚಾಲನೆ ಬೆಳಿಗ್ಗೆ 6-30 ಕ್ಕೆ ವಿಮ್ಸ್ ಆವರಣದಲ್ಲಿ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥರು ಡಾ ಕೃಷ್ಣ ಜಾಥಾಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಮ್ಸ್ ತಜ್ಞ ವೈದ್ಯರಾದ ಡಾ ಮಲ್ಲಿಕಾರ್ಜುನ, ಡಾ ರಘುವೀರ, ಡಾ ಅನೀಲಕುಮಾರ ಜೋಸೇಪ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ವೈದ್ಯ ವಿಧ್ಯಾರ್ಥಿ ಸಂಘದ ಡಾ ಲೋಕೇಶ್, ಡಾ ಗೌರಿ, ಡಾ ಪ್ರಸನ್ನ, ಡಾ ಸಂತೋಷ ಹಾವೇರಿ, ಕ್ಷಯರೋಗ ಕಾರ್ಯಕ್ರಮದ ವಿಭಾಗದ ಪಂಪಾಪತಿ, ಓಬಳರೆಡ್ಡಿ, ಬಸವರಾಜ ರಾಜಗುರು, ಪ್ರದೀಪ್, ಚಂದ್ರಶೇಖರ, ಅಂದಾನಪ್ಪ ಅಂಡಿಗೇರಿ, ರಾಮಾಂಜನೇಯಲು ಎಲ್ಲ ನೂರಾರು ವೈದ್ಯ ವಿಧ್ಯಾರ್ಥಿಗಳು ಹಾಜರಿದ್ದರು.