ಕಲಬುರಗಿಯಿಂದ ಪ್ರಧಾನಿ ಮೋದಿ ಚುನಾವಣಾ ಸಭೆ ಆರಂಭ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ನಮ್ಮ ಅಪೋಜಿಷನ್ ಲೀಡರ್ ಅಂದ್ರೆ ಭಯ. ಅದಕ್ಕೊಸ್ಕರ ಅಲ್ಲಿಂದಲೇ ಪ್ರಾರಂಭ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಸೇರಿ 20 ಸೀಟ್ ಗೆಲ್ಲುತ್ತೇವೆ ಎಂದು ತಿಳಿಸಿದರು.
ಇತ್ತಿಚೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿತ್ತು. ಕರ್ನಾಟಕದ 7 ಲೋಕಸಭಾ ಕ್ಷೇತ್ರಗಳು ಸೇರಿ ಒಟ್ಟು 39 ಕ್ಷೇತ್ರಗಳಿಗೆ ಕದನ ಕಲಿಗಳನ್ನು ಘೋಷಿಸಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಹೆಸರು ಘೋಷಣೆ ಆಗಿದ್ರೆ. ಶಿವಮೊಗ್ಗದಿಂದ ಗೀತಾ ಶಿವರಾಜ್ಕುಮಾರ್ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಇನ್ನು ಬಿಜೆಪಿ ಬಿಟ್ಟು ಘರ್ವಾಪ್ಸಿ ಮಾಡಿದ್ದ ಮುದ್ದ ಹನುಮೇಗೌಡರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಆಗಿದೆ.
ಇನ್ನು ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯದಲ್ಲಿ ವೆಂಕಟರಮಣೇಗೌಡ ಅಂದ್ರೆ ಸ್ಟಾರ್ ಚಂದ್ರು ಟಿಕೆಟ್ ಗಿಟ್ಟಿಸಿದ್ರೆ. ವಿಜಯಪುರದಲ್ಲಿ ರಾಜು ಅಲಗೂರಗೆ ಟಿಕೆಟ್ ನೀಡಲಾಗಿದೆ. ಇನ್ನು ಹಾವೇರಿಯಿಂದ ಆನಂದ್ ಗಡ್ಡದೇವರ ಮಠ ಸ್ಪರ್ಧೆ ಮಾಡಲಿದ್ರೆ. ಹಾಸನದಿಂದ ಶ್ರೇಯಸ್ ಪಟೇಲ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.