ಬಾಗಲಕೋಟ, ಮಾ.19 : ಬೇಸಿಗೆ ಪ್ರಾರಂಭದಲ್ಲಿ ನಂದವಾಡಗಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಲ್ಲದೆ ಜನ ರೊಚ್ಚಿಗೆದ್ದು ಗ್ರಾಮ ಪಂಚಾಯತಿ ಮುಂದೆ ಮಹಿಳೆರಿಂದ ಹೋರಾಟ.
ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು. ಅಧಿಕಾರಿಗಳ ಬೇಜವಾಬ್ದಾರಿ ತನವೋ ಅಥವಾ ಜನಪ್ರತಿನಿಧಿಗಳ ನಿಷ್ಕಾಳಜಿಯೋ ಗೊತ್ತಿಲ್ಲ ಆದ್ರೆ ಬಡಪಾಯಿಗಳು ಗೋಳು ಕೇಳುತ್ತಿಲ್ಲ.ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
ಖಾಲಿ ಕೊಡ ಹಿಡಿದುಕೊಂಡು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಮಹಿಳೆಯರು. ಸಮಾರು ಹದಿನೈದು ದಿನದಿಂದ ಗ್ರಾಮಕ್ಕೆ ಕುಡಿಯುವ ನೀರಿಲ್ಲದೆ ಪರದಾಡುತಿದ್ದರು.ಯಾವಬ್ಬ ಅಧಿಕಾರಿ ಇತ್ತಕಡೆ ಗಮನ ಕೊಡದೆ ಜನರ ಜೀವನದ ಜೋತೆ ಚೆಲ್ಲಾಟ ಆಡುತ್ತಿರುವ ಅಧಿಕಾರಿಗಳಿಗೆ ಮಹಿಳೆಯರು ತಮ್ಮ ಕಠೋರವಾದ ಮಾತಿನ ಮೂಲಕ ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೂಡಿ ಪ್ರತಿಭಟನೆ ನಡೆಸಿದರು.
ದುಡಿಯುವ ಜನರಿಗೆ ದುಡಿಮೆ ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.ದನ ಕರುಗಳಿಗೆ ನಮ್ಗೂ ಕುಡಿಯುವದಕ್ಕು ನೀರಿಲ್ಲ.ಜಿಲ್ಲಾಧಿಕಾರಿಗಳ ಆದೇಶ ಕಡತದಲ್ಲಿ ಮಾತ್ರ ಇವೆ ಅವು ಯಾವು ವಾಸ್ತವದಲ್ಲಿ ಇಲ್ಲ ಎಂಬುದೂ ಈ ನಮ್ಮ ಗ್ರಾಮ ತಾಜಾ ಉದಾಹರಣೆ ಯಾಗಿದೆ. ಎಂದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.
ಈ ಗ್ರಾಮದಲ್ಲಿ ಚುನಾಯಿತ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ. ತಮ್ಮ ದರ್ಪದ ಮೂಲಕ ಉತ್ತರ ನೀಡುತ್ತಾ.ಗ್ರಾಮದ ಜನರಿಗೆ ಕುಡಿಯುವ ನೀರು ಇಲ್ಲದೆ ದುಡುಮೆ ಬಿಟ್ಟು ನೀರಿಗಾಗಿ ಹೋರಾಡು ವಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.ಎಂದು ಮಹಿಳೆಯರು ಗ್ರಾಮ ಪಂಚಾಯತಿ ಚುನಾಯಿತ ಅಧ್ಯಕ್ಷ, ಸದಸ್ಯರಿಗೆ ಶಾಪ ಹಾಕಿ ತಮ್ಮ ಅಳಿಲು ತೊಂಡಿಕೊಂಡರು .
ಪಂಚಾಯತಿ ಮುಂದೆ ಪ್ರತಿಭಟನೆ ಮಾಡುತ್ತಾ ನೀರು ಕೊಡಿ ಎಂದು ಘೋಷಣೆ ಕೂಗಿದರು.
ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಗ್ರಾಮದಲ್ಲಿ ನೀರಿನ ಅನುಕೂಲ ಮಾಡಿಕೊಡಿ ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಜಡೆದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ನಮ್ಮ ಸುವರ್ಣ ವಾಹಿನಿ ಕನ್ನಡ ದಿನ ಪತ್ರಿಕೆಯ ಪೆನ್ನು ಹರಿತವಾಗುವುದು. ಎಚ್ಚರ ಎಚ್ಚರ.