ಬಳ್ಳಾರಿ,ಮಾ.24 : ಜಗತ್ತಿನ ಹಲವು ದೇಶಗಳು ಸೇರಿದಂತೆ ಭಾರತದಲ್ಲೂ ಕ್ಷಯ ರೋಗ ಪ್ರಕರಣಗಳು ಇಂದಿಗೂ ಕಂಡು ಬರುತ್ತಿದ್ದು, ವೈದ್ಯರ ಸಲಹೆಯಂತೆ ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇರುವವರು ತಪ್ಪದೆ ಪರೀಕ್ಷೆ ಮಾಡಿಸುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಕ್ಷೇಮ ಮುಕ್ತ ಮಾಡುವುದಕ್ಕೆ ಎಲ್ಲರೂ ವಿಶ್ರಾಂತಿ ಪಡೆಯದೆ ಸಕಾಲದಲ್ಲಿ ರೋಗ ಗುರುತಿಸುವ ಕಾರ್ಯದೊಂದಿಗೆ ಚಿಕಿತ್ಸೆಯನ್ನು ಸಂಪೂರ್ಣಗೊಳಿಸಿ ಕ್ಷಯಮುಕ್ತ ಬಳ್ಳಾರಿಯನ್ನು ಮಾಡುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಗಳು ಜಿಲ್ಲಾ ಪಂಚಾಯತ, ರಾಹುಲ್ ಎಸ್ ಸಂಕನೂರ್ ತಿಳಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ಇವರ ಆಶ್ರಯದಲ್ಲಿ ಸೌಕ್ಯಬೆಳಕು, ನಿತ್ಯ ಜೀವನ, ವಿಮುಕ್ತಿ ಇವರ ಸಹಕಾರದೊಂದಿಗೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಘಟಕವು ಹಮ್ಮಿಕೊಂಡ ವಿಶ್ವ ಕ್ಷಯ ರೋಗ ದಿನಾಚರಣೆಯ ಹಿನ್ನೆಲೆಯಲ್ಲಿ, ಹೌದು! ನಾವು ಕ್ಷೇಮವನ್ನು ಕೊನೆಗೊಳಿಸಬಹುದು ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಚಾಲನೆ ಹಾಗೂ ಉತ್ತಮ ಸೇವೆ ಸಲ್ಲಿಸಿದ ವೈದ್ಯರು ಕ್ಷೇತ್ರ ಸಿಬ್ಬಂದಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಸಂಘ ಸಂಸ್ಥೆಗಳಿಗೆ ಸನ್ಮಾನಿಸಿ ಮಾತನಾಡುತ್ತಾ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜನತೆಯು ಕ್ಷಯ ರೋಗದ ಕುರಿತು ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳದೆ ಇರುವುದು ಕಂಡುಬರುತ್ತಿದ್ದು, ಈ ದಿಶೆಯಲ್ಲಿ ಸೂಕ್ತ ಜಾಗೃತಿ ನೀಡುವ ಜೊತೆಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ದಾನಿಗಳಿಂದ (ನೀಕ್ಷಯ್ ಮಿತ್ರರಾಗಿ) ಇನ್ನು ಹೆಚ್ಚಿನ ರೀತಿಯಲ್ಲಿ ಪೌಷ್ಟಿಕ ಆಹಾರವನ್ನು ಕೊಡುವ ಜೊತೆಗೆ ರೋಗಲಕ್ಷಣವುಳ್ಳರಿಗೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಕೈಗೊಂಡು ರೋಗವನ್ನು ಪತ್ತೆಹಚ್ಚಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಿಂದ ನಗರ ಪ್ರದೇಶಗಳಲ್ಲೂ ಸಹ ಸಕಾಲದಲ್ಲಿ ತಪ್ಪದೇ ಪರೀಕ್ಷೆ ಮಾಡಿಸುವ ಮೂಲಕ ಕ್ಷಯ ಮುಕ್ತ, ಗ್ರಾಮ ಪಂಚಾಯತ್,ಕ್ಷಯಮುಕ್ತ ವಾರ್ಡ್ಗಳೊಂದಿಗೆ ಕ್ಷಯಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಸೂಚಿಸಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ ರಮೇಶಬಾಬು, ಕಳೆದ ವರ್ಷದಲ್ಲಿ 53,708 ಜನರ ತಪಾಸಣೆ ಮಾಡುವ ಗುರಿ ಹೊಂದಿದ್ದರೂ ಸಹ 66,888 ಜನರಿಗೆ ಕಫ ಪರೀಕ್ಷೆ ಮಾಡಲಾಗಿದೆ, ಇವರಲ್ಲಿ 2747 ಜನರು ಖಚಿತ ಪಟ್ಟಿದ್ದಾರೆ. ಚಿಕಿತ್ಸೆ ಪೂರ್ಣಗೊಂಡು ಗುಣಮುಖರಾಗುವ ಪ್ರಮಾಣ ಶೇಕಡ 83 ರಷ್ಟಿದ್ದು ರಾಜ್ಯಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಜಿಲ್ಲೆಗಳಲ್ಲಿ ಬಳ್ಳಾರಿ ಒಂದಾಗಿದೆ. ಪ್ರಸ್ತುತ 55 ದಾನಿಗಳಿಂದ 1068 ಜನರಿಗೆ 3668 ಕಿಟ್ಟುಗಳನ್ನು ಎಲ್ಲ ಕ್ಷಯರೋಗಿಗಳಿಗೆ ನೀಡಲಾಗಿದೆ, ಜಿಂದಾಲ್ ಸೇರದಂತೆ ಬಿಕೆಜಿ ಗ್ರುಪ್ಸ್, ಕುಮಾರಸ್ವಾಮಿ ಮೈನಿಂಗ್ಸ್, ಜೀನಿ ಪ್ರಾಡಕ್ಟ್ಸ್, ಸೇರಿದಂತೆ ಸಮಾಜ ಸೇವಕರು, ವೈದ್ಯಾಧಿಕಾರಿಗಳು, ಇತರರು ಸಹ ಮುಂದೆ ಬಂದು ರೋಗಿಗಳಿಗೆ ಬೆಂಬಲ ನೀಡುತ್ತಿರುವುದು ನಮ್ಮ ಜಿಲ್ಲೆಯಲ್ಲಿ ರೋಗದ ಪ್ರಕರಣ ಗಣನೀಯವಾಗಿಒ ಕಡಿಮೆಯಾಗಲಿಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದರು. ಪ್ರಸ್ತುತ ಜೆಎಸ್ಡಬ್ಲ್ಯು ಸಿಎಸ್ಆರ್ ಮೂಲಕ ಪೌಷ್ಟಿಕ ಆಹಾರ ಕಿಟ್ಟುಗಳನ್ನು ವಿತರಿಸಲು 50 ಲಕ್ಷ ರೂಪಾಯಿಗಳಲ್ಲಿ 6000 ಕಿಟ್ಟುಗಳನ್ನು ಒದಗಿಸಿದ್ದು ಮುಂದೆಯೂ ಸಹ ರೋಗ ಖಚಿತ ಪಟ್ಟಂತ ಎಲ್ಲರಿಗೂ ಪೌಷ್ಟಿಕ ಆಹಾರ ಕೀಟ್ ವ್ಯವಸ್ಥೆ ಮಾಡುವುದಾಗಿ ತಿಳಿಸಿರುವರು. ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ ಇಂದ್ರಾಣಿ, ಈಗಾಗಲೇ ರೋಗವನ್ನು ತ್ವರಿತವಾಗಿ ಪತ್ತೆಹಚ್ಚಲು ಸಿಬಿನ್ಯಾಟ್ ಯಂತ್ರಗಳನ್ನು ವಿಮ್ಸ್, ಜಿಲ್ಲಾ ಆಸ್ಪತ್ರೆ, ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಟ್ರುನ್ಯಾಟ್ ಮಿಷನ್ಗಳನ್ನು ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಿಲ್ಲ ಅನುಷ್ಠಾನ ಮಾಡಲಾಗಿದ್ದು ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಿರುನಾಟಕ : ರಾಮನಗೌಡ ಮತ್ತು ಸಂಗಡಿಗರು. ಕ್ಷಯವನ್ನುಇ ಕೊನೆಗೊಳಿಸಬಹು ಎಂಬ ಕೀರು ನಾಟಕವಾಡಿದರು.
ಜಾಥಾ : ಬೆಳಿಗ್ಗೆ ಟಿಬಿ ಬ್ಯಾಸಿಲೈಯನ್ನು ಕಂಡು ಹಿಡಿದ ವಿಜ್ಞಾನಿ ಸರ್ ರಾಬರ್ಟ್ ಕಾಕ್ಸ್ ರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಸಹಿ ಅಭಿಯಾನ, ಬಲೂನ ಹಾರಿ ಬಿಡುವುದರೊಂದಿಗೆ, ಜಾಥಾ ಹಮ್ಮಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಮೂಲಕ ಜಾಗೃತಿ ನೀಡಲಾಯಿತು. ಇದೆ ವೇಳೆ ಸೆಲ್ಫಿ ಸ್ಟ್ಯಾಂಡಿ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಜಾಗೃತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ ಎನ್ ಬಸಾರೆಡ್ಡಿ ಜಿಲ್ಲಾ ಶಸ್ತ್ರಚಿತ್ಸಕರು, ಶ್ರೀ ಸಂಜಯ್ ಹಂಡೂರ್ ಹಿರಿಯ ಉಪಾಧ್ಯಕ್ಷರು ಜೆಎಸ್ಡಬ್ಲ್ಯೂ, ಶ್ರೀ ಪೆದ್ದಣ್ಣ ಬಿಡಲ ಮುಖ್ಯಸ್ಥರು ಸಿಎಸ್ಆರ್, ರಾಜೇಶ್ ಭಾರತೀಯ ಯುಎಸ್ಈಎ, ಡಾ ಅಬ್ದುಲ್ಲಾ ಡಿಎಮ್ಓ,
ಡಾ ವೀರೇಂದ್ರಕುಮಾರ್ ಡಿಎಲ್ಓ, ಡಾ ಹನುಮಂತಪ್ಪ, ಆರ್ಸಿಹೆಚ್ಓ,
ಡಾ ಶ್ರೀನಿವಾಸಲು ಅದ್ಯಕ್ಷರು ಐಎಮ್ಎ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ನಿರೂಪಿಸಿ ಸ್ವಾಗತಿಸಿದರು. ಅರ್ಚನಾ, ಗಿರೀಶ್, ಸಣ್ಣ ಕೇಶವ, ವೀರೇಶ್ ವಂದನಾರ್ಪಣೆ ಕೈಗೊಂಡರು. ಸಭೆಯಲ್ಲಿ ತಾಲೂಕಾ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ಟಿಬಿ ವಿಭಾಗದ ಸಿಬ್ಬಂದಿ, ಟಿಬಿ ಚಾಂಪಿಯನ್ಸ್ ಉಪಸ್ಥಿತರಿದ್ದರು.