ಕುರುಗೋಡು. ಮಾ, 24: ಕುರುಗೋಡು ಪಟ್ಟಣದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ಈ ದಿನದಂದು ಹೋಳಿ ಹುಣ್ಣಿಮೆ ಕುರುಗೋಡು ದೊಡ್ಡ ಬಸವೇಶ್ವರ ಮಹಾರಥೋತ್ಸವ,
ಶ್ರೀ ದೊಡ್ಡಬಸವೇಶ್ವರ ಸ್ವಾಮಿ
ರಥವನ್ನು ವಿದಿ ವಿಧಾನಗಳ ಮೂಲಕ ಪೂಜೆ ಸಲ್ಲಿಸುವುದರ ಮುಖಾಂತರ ಇಂದು ಸಂಜೆ 5.30ರ ವೇಳೆಗೆ
ಸಾವಿರಾರು ಭಕ್ತರು ಭಾಗವಹಿಸಿ ರಥವನ್ನು ಎಳೆಯಲಾರಂಭಿಸಿತು
ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದಿಂದ ಎದುರು ಬಸವಣ್ಣವರಿಗೆ ರಥವನ್ನು ಎಳೆದುಕೊಂಡು ಹೋಗಿ ಬರಲಾಯಿತು.
ಮಹಾ ರಥೋತ್ಸವಕ್ಕೆ ಸಾವಿರಾರು ಜನರು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿ ಅದ್ದೂರಿಯಾಗಿ ರಥೋತ್ಸವ ಜರಗಿತು.ಈ ಒಂದು ರಥೋತ್ಸವದಲ್ಲಿ ಪೊಲೀಸ್ ಬಂದೋಬಸ್ತ್ ಕಾರ್ಯನಿರ್ವಹಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತ ಕ್ರಮಗಳನ್ನು ವಹಿಸಿದ್ದರು, ಕುರುಗೋಡು
ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಹೋಗಿ ಬಂದು ಮತ್ತೆ ದೇವಸ್ಥಾನದ ಮುಂದೆ ನಿಲ್ಲಿಸಲಾಯಿತು.