ಬಳ್ಳಾರಿ,ಮಾ.26 : ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110 ಕೆ.ವಿ ಮೋಕಾ- ಮೀನಹಳ್ಳಿ ಮಾರ್ಗದಲ್ಲಿ ಲಿಲೋ ನಿರ್ಮಾಣ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಾ.28 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರ ವರೆಗೆ ಗ್ರಾಮೀಣ ಪ್ರದೇಶಗಳ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನ್ ಬಾಬು ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
110/11 ಕೆ.ವಿ ವಿದ್ಯುತ್ ಉಪ-ಕೇಂದ್ರ ಮೋಕಾ ಮಾರ್ಗದ ಮೋಕಾ ಉಪ-ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ವಿದ್ಯುತ್ ಮಾರ್ಗಗಳು, 110/11 ಕೆ.ವಿ ವಿದ್ಯುತ್ ಉಪ-ಕೇಂದ್ರ ಮೀನಹಳ್ಳಿ ಮಾರ್ಗದ ಮೀನಹಳ್ಳಿ ಉಪ-ಕೇಂದ್ರದಿಂದ ಹೊರಡುವ ಎಲ್ಲಾ ಕೆ.ವಿ ವಿದ್ಯುತ್ ಮಾರ್ಗಗಳು, 33/11 ವಿದ್ಯುತ್ ಉಪ-ಕೇಂದ್ರ ಯರ್ರಗುಡಿ ಮಾರ್ಗದ ಯರ್ರಗುಡಿ ಉಪ-ಕೇಂದ್ರದಿಂದ ಹೊರಡುವ ಎಲ್ಲಾ 11.ಕೆ.ವಿ ವಿದ್ಯುತ್ ಮಾರ್ಗಗಳು, ಮೆ.ಜಾನಕಿ ಕಾಪೆರ್Çೀ.ಪೆ.ಲಿ, ಮೆ.ಬಸಾಯಿ ಸ್ಟೀಲ್ ಪ್ರೈ.ಲಿ, ಮೆ.ಕ್ಲೀನ್ ಮ್ಯಾಕ್ಸ್ ಸೋಲಾರ್, ಮೆ.ಕ್ಲೀನ್ ಸೋಲಾರ್, ಮೆ.ಕ್ಲೀನ್ ಸೋಲಾರ್, ಮೆ. ಮೌರ್ಯ ಸೀಲಾಮ್ ಸೋಲಾರ್ ಐ.ಪಿ.ಪಿ ಮಾರ್ಗಗಳು ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——-