ಕಾರಟಗಿ.ಮಾ.26: ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ್ ತಂಗಡಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಪಟ್ಟಣದ ಬಿಜೆಪಿ ಕಚೇರಿಯಿಂದ ಕನಕದಾಸ ವೃತ್ತದ ವರೆಗೆ ಬೃಹತ್ ಪ್ರತಿಭಟನೆಯ ಮೂಲಕ ದಾರಿಯುವುದಕ್ಕೂ ಯುವಮೋರ್ಚಾ ಹಾಗೂ ಮಂಡಲ ಕಾರ್ಯಕರ್ತರು ಯುವಕರು ಮಂಗಳವಾರ ಪ್ರತಿಭಟನೆ ನಡೆಸಿ ತಂಗಡಿಗೆ ಅವರೇ ನೀವು ಕಪಾಳಕ್ಕೆ ಹೊಡೆಯುವವರೆಗೆ ಮೋದಿ ಮೋದಿ ಎನ್ನುತ್ತೇವೆ ಮೋದಿಗೆ ಬೆಂಬಲ ನೀಡುತ್ತೇವೆ ಎಂದು ಘೋಷಣೆ ಕೂಗಿದರು ಬಳಿಕ ಅಮರೇಶ ಯುವಮೋರ್ಚಾ ರಾಜ್ಯಉಪಾಧ್ಯಕ್ಷ ರೈತನಗರ, ಮತ್ತು ಮೌನೇಶ ದಢೇಸುಗೂರು ,ಜಿಲ್ಲಾಧ್ಯಕ್ಷ ಹಾಗೂ ಮಂಡಲ ಅಧ್ಯಕ್ಷರಾದ ಮಂಜುನಾಥ ಮಸ್ಕಿ,ಗಂಗಾವತಿ ಎಪಿಎಂಸಿ ಮಾಜಿಅಧ್ಯಕ್ಷ ದುರ್ಗಾರಾವ್, ಜಡಿಯಪ್ಪ ಮುಕ್ಕುಂದಿ, ಮುಖಂಡ ನಾಗರಾಜ ಬಿಲ್ಗಾರ್ ಮಾತನಾಡಿ, ಗೌರವಾನ್ವಿತ ದೇಶದ ಪ್ರಧಾನಿ ಮತ್ತು ಯುವಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಸಂಸ್ಕೃತಿಯೇ ಗೊತ್ತಿಲ್ಲದ ಸಚಿವ ತಂಗಡಗಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆಗೆ ಅನರ್ಹರು, ನಮ್ಮ ಕಪಾಳಕ್ಕೆ ಹೊಡೆಯುವವರೆಗೂ ನಾವು ಮೋದಿ, ಮೋದಿ ಎಂದು ಕೂಗುತ್ತೇವೆ.ಕೂಡಲೇ ಸಚಿವ ಶಿವರಾಜ್ ಅಂಗಡಿಯವರು ಕ್ಷಮೆಯಾಚಿಸಬೇಕು ಮುಖ್ಯಮಂತ್ರಿಗಳು ತಂಗಡಗಿಯನ್ನು ಸಚಿವ ಸಂಪುಟದಿಂದ ವಜಾ ಗೊಳಿಸಬೇಕು, ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಅವರು ಎಲ್ಲೆಲ್ಲಿ ಕಾಣುತ್ತಾರೋ ಅಲ್ಲಿ ಮೋದಿ ಘೋಷಣೆ ಕೂಗುತ್ತಲೇ ಇರುತ್ತೇವೆ ಎಂದು ಯುವಕರು ಪ್ರತಿಭಟನಾಕಾರರು ಸಚಿವರ ಮೇಲೆ ಕಿಡಿಕಾರಿದರು. ಕ್ಷೇತ್ರದ ಜನರು ತಮ್ಮನ್ನು ಆರಿಸಿ ತಂದಿರುವುದು
ಅಭಿವೃದ್ಧಿ ಕೆಲಸಗಳನ್ನು ಮಾಡಲೆಂದು ಅದು ಬಿಟ್ಟು ಪ್ರಧಾನಿ ಬಗ್ಗೆ ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಬೇರಡೆಯಿಂದ ನಮ್ಮ ಕ್ಷೇತ್ರಕ್ಕೆ ಬಂದವರು ಈ ರೀತಿ ಮಾತನಾಡಿದರೆ ನಾವು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಂಥವರು ಏನು ಮಾಡಬೇಕು ಮಾಡುತ್ತೇವೆ, ಈ ಲೋಕಸಭಾ ಚುನಾವಣೆಯಲ್ಲಿ ನಾವು ನಮ್ಮ ಕ್ಷೇತ್ರದ ಜನರು ಸುಮ್ಮನೆ ಕೂರುವುದಿಲ್ಲ. ನಿಮ್ಮ ಯೋಗ್ಯತೆಗೆ ತಕ್ಕ ಪಾಠ ಕಲಿಸುತ್ತೇವೆ. ಎಂದು
ವಿವಿಧ ಘಟಕಗಳ ಮೋರ್ಚಾಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸುಮಾರು 500ಕ್ಕೂ ಅಧಿಕ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಚಿವರ ಮನೆಗೆ ಮುತ್ತಿಗೆಗೆ ಯತ್ನ
ಗರ್ವದಿಂದ ಹೇಳುತ್ತೇವೆ ಮೋದಿ, ದೇಶಕ್ಕಾಗಿ ಮೋದಿ ಮತ್ತು ಮೋದಿಗಾಗಿ ನಾವು ಎನ್ನುವ ಘೊಷವಾಕ್ಯಗಳೊಂದಿಗೆ ಐದುನೂರಕ್ಕೂ ಹೆಚ್ಚು ಕಾರ್ಯಕರ್ತರು ಕನಕದಾಸ ವೃತ್ತದ ಸಚಿವ ಶಿವರಾಜ ತಂಗಡಗಿ ಮನೆ ಮುತ್ತಿಗೆ ಹಾಕಲು ತೆರಳಿದರು. ಮಾಜಿಶಾಸಕ ಬಸವರಾಜ ದಢೇಸುಗೂರು ಕಚೇರಿ ಮತ್ತು ಮಾರ್ಗ ಮದ್ಯದಲ್ಲಿ ಮೂರ್ನಾಲ್ಕು ಬಾರಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು ಆಕ್ರೋಶಗೊಂಡ ಯುವಕರು ಪೊಲೀಸರನ್ನು ಲೆಕ್ಕಿಸದೆ ಮುಂದೆ ಸಾಗಿದರು ಸಚಿವರ ನಿವಾಸಕ್ಕೆ ಹೋಗುವ ದಾರಿಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಹರಸಾಹಸ ದೊಂದಿಗೆ ತಡೆದು ನಿಲ್ಲಿಸಿದರು ಕಾನೂನು ಉಲ್ಲಂಘಿಸದಂತೆ ಎಚ್ಚರಿಕೆ ನೀಡಿ ಮನವಿ ಮಾಡಿಕೊಂಡರು ಬಳಿಕ ಪ್ರತಿಭಟನೆ ಅಲ್ಲಿಯೇ ಮೊಟಕುಗೊಳಿಸಿ ಇನ್ನು ಎರಡು ದಿನದಲ್ಲಿ ಕ್ಷಮೆಯಾಚಿಸದಿದ್ದರೆ ಅವರು ಎಲ್ಲಿ ಮೋದಿ ಮೋದಿ ಎಂದು ಘೋಷಣೆಯೊಂದಿಗೆ ಕೂಗುತ್ತೇವೆ ಎಂದರು
ಸಚಿವ ಶಿವರಾಜ ತಂಗಡಗಿ ಪದೆಪದೇ ಪ್ರಧಾನಿ ಮೋದಿ ಮತ್ತು ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದು ತನ್ನ ಯೋಗ್ಯತೆಗೆ ಧಕ್ಕೆ ತರುತ್ತದೆ, ಅವರ ಪಕ್ಷದವರೇ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ನಾವು ಪಾಠ ಕಲಿಸುತ್ತೇವೆ ಮುಂದೆ ಬರುವ ಚುನಾವಣೆಯೇ ಇವರಿಗೆ ಮುಳುವಾಗಲಿದೆ ಎಂದು ರಾಜ್ಯ ಯುವಮೋರ್ಚಾ ಅಧ್ಯಕ್ಷ ಅಮರೇಶ ರೈತನಗರ ಹೇಳಿದ್ದಾರೆ .
ಈ ಸಂದರ್ಭದಲ್ಲಿ ಕಾರಟಗಿ ಸುತ್ತಮುತ್ತಲಿನ ಸುಮಾರು 500ಕ್ಕೂ ಹೆಚ್ಚು ಯುವಕರು ಮೋರ್ಚಾ ಅಧ್ಯಕ್ಷರು ಕಾರ್ಯಕರ್ತರು ಪದಾಧಿಕಾರಿಗಳು ಪಾಲ್ಗೊಂಡಿದ್ದರು