ಬಳ್ಳಾರಿ,ಮಾ,೩೧: ನಗರದಲ್ಲಿ ಎಂಜಿಅರ್ ತಂಡ ಸಂಸ್ಥಾಪಕರಾದ ಎಂ ಗೋವಿಂದರಾಜುಲುರವರು ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಹೆರಿಯನ್ನು ಆಯೋಜಿಸಿದ್ದರು.
ಹಲವಾರು ವರ್ಷಗಳಿಂದ ಹಿಂದೂ ಮುಸ್ಲಿಂ ಮತ್ತು ಕ್ರೈಸ್ತರು ಎಂಬ ಭೇದ ಭಾವವಿಲ್ಲದೆ ನಾವೆಲ್ಲ ಒಂದೇ ಎಂಬ ಮನೋಭಾವದೊಂದಿಗೆ ಅಣ್ಣ ತಮ್ಮಂದಿರAತೆ ಸಹಬಾಳ್ವೆ ನಡೆಸುತ್ತಿದ್ದೇವೆ, ಸತತ ಒಂದು ತಿಂಗಳ ಕಾಲ ಉಪವಾಸ (ರೋಜಾ) ಇರುವ ಮುಸ್ಲಿಂ ಸಹೋದರರಿಗಾಗಿ ನಮ್ಮ ಎಂ.ಜಿ.ಆರ್ ಸಂಸ್ಥೆಯಿAದ ರಂಜಾನ್ ಸಹರಿ ಬೆಳಿಗ್ಗೆ ೪.೦೦ ಗಂಟೆ ಸಮಯದಲ್ಲಿ ಎಂದು ತಿಳಿಸಿದರು.
ಅವರು ಇಂದು ನಗರದ ರೇಡಿಯೋ ಪಾರ್ಕ್ನ ಅವರ ನಿವಾಸದಲ್ಲಿ ತಮ್ಮ ಎನ್.ಜಿ.ಒ ಸಂಸ್ಥೆಯಿAದ ಆಯೋಜಿಸಿದ್ದ ಸಹೆರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಸ್ಲಿ ಧರ್ಮಗುರುಗಳಾದ (ಖಾಜಿಸಾಬ್) ಮಾತನಾಡಿ, ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳು ಮತ್ತು ವಿಶ್ವಾದ್ಯಂತ ಮುಸ್ಲಿಮರು ಉಪವಾಸದ ತಿಂಗಳಾಗಿ ಆಚರಿಸುತ್ತಾರೆ. ರಂಜಾನ್ನ ಆಧ್ಯಾತ್ಮಿಕ ಮಹತ್ವವು ಸ್ವಯಂ ಶಿಸ್ತು, ವೈಯಕ್ತಿಕ ಬೆಳವಣಿಗೆ ಮತ್ತು ದೇವರ ಮೇಲೆ ಹೆಚ್ಚಿನ ಭಕ್ತಿಯ ಕೇಂದ್ರೀಕರಿಸುತ್ತದೆ ಎಂದು ಹೇಳಿದರು.
ಆರಾಧನೆ, ದಾನ ಮತ್ತು ಸ್ವಯಂ ನಿಯಂತ್ರಣದ ಮೂಲಕ, ಮುಸ್ಲಿಮರು ಅಲ್ಲಾಹಗೆ ಹತ್ತಿರವಾಗಲು ಅವರ ಹೃದಯಗಳನ್ನು ಶುದ್ಧೀಕರಿಸಲು ಮತ್ತು ಹೆಚ್ಚು ಸಹಾನುಭೂತಿ ಮತ್ತು ಜಾಗರೂಕ ವ್ಯಕ್ತಿಗಳಾಗಲು ಶ್ರಮಿಸುತ್ತಾರೆ. ವಯಸ್ಕ ಮುಸ್ಲಿಮರು, ಅನಾರೋಗ್ಯದಿಂದ ಬಳಲುತ್ತಿರುವವರು, ಪ್ರಯಾಣಿಸುವವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹೊರತುಪಡಿಸಿ, ಆಹಾರ, ಪಾನೀಯ ಮತ್ತು ಇತರ ದೈಹಿಕ ಅಗತ್ಯಗಳಿಂದ ದೂರವಿರಬೇಕು, ಫಜ್ರ್ (ಬೆಳಗ್ಗೆ) ನಿಂದ ಮಗ್ರಿಬ್ (ಸೂರ್ಯಾಸ್ತ) ತಿಂಗಳಾದ್ಯAತ ಪ್ರತಿ ದಿನ ಉಪವಾಸ ವ್ರತವನ್ನು ಮಾಡಲೇಬೇಕೆಂದು ಪವಿತ್ರ ಕುರಾನ್ ಹೇಳುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಉಮರ್ ರಿಜ್ವಾನ್ ಮಾತನಾಡಿ, ಎಂ.ಜಿ.ಆರ್ ತಂಡದ ಸಂಸ್ಥಾಪಕರಾದ ಗೋವಿಂದರಾಜುಲು ಮತ್ತವರ ತಂಡದವರು ಇಂದು ಸಹೆರಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೊಸದೆನಲ್ಲ, ಕೇವಲ ಮುಸ್ಲಿಂ ಜನಾಂಗದವರಿಗೆ ಮಾತ್ರವಲ್ಲ, ಹಿಂದುಗಳಿಗೆ ಗಣಪತಿ ಹಬ್ಬದಲ್ಲಿ, ಕ್ರೈಸ್ತರಿಗೆ ಕ್ರಿಸಮಸ್ ಹಬ್ಬದಲ್ಲಿಯೂ ಸಹ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅವರಿಗೂ ನೆರವಾಗುತ್ತಾರೆ, ಹಾಗೂ ಕೋವಿಡ್ ಸಮಯದಲ್ಲಿ ಸಮಾಜಕ್ಕೆ ಮತ್ತು ನಿರ್ಗತಿಕರಿಗೆ ಇವರ ಕೊಡುಗೆ ಅಪಾರವಾದುದು ಎಂದರು.
ಈ ಸಹೆರಿ ಕಾರ್ಯಕ್ರಮದಲ್ಲಿ ಎಂ.ಜಿ.ಆರ್ ಸಂಸ್ತೆಯ ಸದಸ್ಯರುಗಳು, ಮುಸ್ಲಿಂ ಮುಖಂಡರುಗಳು ಮತ್ತು ಇತರರಿದ್ದರು. ಸುಮಾರು ಸಾವಿರಾರು ಜನ ಉಪವಾಸ ನಿರತರು ಮತ್ತು ಧರ್ಮಗುರುಗಳು ಉಪಹಾರವನ್ನು ಸೇವಿಸಿ ಎಂ.ಜಿ.ಆರ್ ತಂಡದವರಿಗೆ ಅಲ್ಲಾಹನು ಆರೋಗ್ಯ, ಆಯುಷ್ಯ ಕರುಣಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಹಾರೈಸಿ ದುವಾ ಮಾಡಿದರು.