ಬಳ್ಳಾರಿ, ಏ 01; ಗ್ಯಾರೆಂಟಿ ಯೋಜನೆಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಸಚಿವ ಬಿ.ನಾಗೇಂದ್ರ ಹೇಳಿದರು. ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಎಐಸಿಸಿ ಹಾಗೂ ಕೆಪಿಸಿಸಿಯವರು ಸೂಕ್ತ, ಸಮಾನವಾದ ಹಾಗೂ ವಿದ್ಯಾವಂತ ಅಭ್ಯರ್ಥಿಯಾಗಿ ಸಂಡೂರು ಶಾಸಕ ಇ.ತುಕಾರಾಂ ರನ್ನು ಘೋಷಣೆ ಮಾಡಿದ್ದು, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಈ ಜಿಲ್ಲೆಯ ಎಲ್ಲಾ ಶಾಸಕರ ಮೇಲಿದೆ. ದೇಶದಲ್ಲಿ ಬಿಜೆಪಿಯ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಯಾರು ಅವರನ್ನು ಪ್ರಶ್ನೆ ಮಾಡ್ತಾರೋ ಅವರಿಗೆ ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳ ಮೂಲಕ ಹೆದರಿಸುವ ಕೆಲಸ ಆಗುತ್ತಿದೆ.ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್ರನ್ನು ತನಿಖಾ ಸಂಸ್ಥೆಗಳನ್ನು ಮುಂದಿಟ್ಟು ಕಿರುಕುಳ ಕೊಡುವ ಕೆಲಸ ನಡೆಯುತ್ತಿದೆ. ಈ ದೇಶದಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದೆ. ಈ ಸಾರಿ ನಮ್ಮ ರಾಜ್ಯದಲ್ಲಿ ೨೮ ಕ್ಕೆ ೨೮ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ ಅವರು ಈ ಸಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನ ಗ್ಯಾರಂಟಿಗಳು ಸಹಕಾರಿಯಾಗ್ತಾವೆ ಎಂದರು. ರಾಜ್ಯದಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳು ಗೆದ್ದರೆ ಇನ್ನಷ್ಟು ಗ್ಯಾರಂಟಿಗಳು ಜಾರಿಗೆ ತರುತ್ತೇವೆ ಎಂದು ಹೇಳಿದರು.ಶ್ರೀರಾಮುಲು ಪುನಃ ಸೋಲೋದು ಖಚಿತ ನಮ್ಮ ಅಭ್ಯರ್ಥಿ ಇ.ತುಕಾರಾಂ ಎಂಬುವದು ಗೊತ್ತಾಗುತ್ತಿದ್ದಂತೆ ಅವರಿಗೆ ನಡುಕಶುರುವಾಗಿದೆ ಎಂದುಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ನಾವು ಯಾವುದೇ ಕುತಂತ್ರ ಮಾಡುತ್ತಿಲ್ಲ. ಅವರನ್ನು ತಂತ್ರಗಾರಿಕೆಯಿಂದ ಸೋಲಿಸುತ್ತೇವೆ. ಈ ಸಾರಿಯೂ ಅವರು ಸೋತು ಮನೆ ಸೇರೋದು ಗ್ಯಾರಂಟಿ ಎಂದು ಸಚಿವ ನಾಗೇಂದ್ರ ಹೇಳಿದರು.ನಮ್ಮ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಪ್ರಯತ್ನ ಮಾಡಿ ಗೆಲ್ಲಿಸುತ್ತೇವೆ ತುಕಾರಾಂ ರವರು ಜೂನ್ ನಾಲ್ಕಕ್ಕೆ ಗೆಲ್ಲೋದು ಖಚಿತ ಪಾರ್ಲಿಮೆಂಟ್ ಮೆಟ್ಟಿಲು ಹತ್ತೋದು ಖಚಿತ ಎಂದು ಅವರು ಹೇಳಿದರು.
ಶಾಸಕ ಗಣೇಶ್ ಮಾತನಾಡಿ 2024 ರ ದೇಶದ ದೊಡ್ಡ ಮಟ್ಟದ ಚುನಾವಣೆ 28 ಕ್ಷೇತ್ರದಲ್ಲಿ ನಾವು ಗೆಲ್ಲಲು ರಣತಂತ್ರ ಮಾಡಿದ್ದೇವೆ,ಬಳ್ಳಾರಿ ಕ್ಷೇತ್ರ ಗೆಲ್ಲಲೆಬೇಕು ಎಂದು ಪಣತೊಟ್ಟಿದೆ. ಗೆದ್ದು ಉಡುಗೊರೆ ಯಾಗಿ ಕೊಡುವ ವಿಶ್ವಾಸವಿದೆ ಸ್ವತಂತ್ರ ಬಂದಮೇಲೆ ಸಾಕಷ್ಟು ಹೆಚ್ಚಿನ ರೀತಿಯಲ್ಲಿ ಕಾಂಗ್ರೆಸ್ ಗೆದ್ದಿದ್ದಾರೆ. ಈಗ 2024 ರಲ್ಲಿ ಗೆಲ್ಲುವ ಮೂಲಕ ಅವರನ್ನು ಕಣಕ್ಕೆ ಇಳಿಸಲು ಸಾಧ್ಯವಾಯಿತು.ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡಿ ಗೆಲುವು ಸಾಧಿಸಿ ತೋರಿಸುತ್ತವೆ.ಜೂನ್ 04 ರಂದು ಎಂಪಿ ಯಾಗಿ ದೆಹಲಿಯಲ್ಲಿ ನೋಡುತ್ತೇವೆ ಎಂದರು.2024 ರ ಚುನಾವಣೆ ಕಾಂಗ್ರೆಸ್ ಗಂಭೀರ ವಾಗಿ ತೆಗೆದುಕೊಂಡಿದೆ.ಯಾರು ಬಹಳ ಮಾತನಾಡುತ್ತಾರೊ ಅವರ ಮೇಲೆ ಇಡಿ ಸಿಬಿಐ ರೇಡ್ ಮಾಡುವ ಮೂಲಕ ಅವರ ದ್ವನಿ ಯನ್ನು ಅಡಗಿಸಲು ಬಿಜೆಪಿ ಮುಂದಾಗಿದೆ.ಗ್ಯಾರೆಂಟಿ ಮೂಲಕ ಈ ಕ್ಷೇತ್ರದಲ್ಲಿ ಗೆದ್ದೆ ಗೆಲ್ಲುವ ವಿಶ್ವಾಸ ಇದೆ ಕಂಡಿತವಾಗಿ ರಾಮುಲು ಅವರನ್ನು ಸೋಲಿಸುತ್ತೇವೆ,ಅವರಿಗೆ ಸೋಲಿನ ರುಚಿ ನೋಡಿದ್ದಾರೆ. ಬಿಜೆಪಿ ತರ ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಳ್ಳಲ್ಲ ಎಂದರು.ಐದು ಗ್ಯಾರೆಂಟಿಯ ಜೊತೆಗೆ ಇನ್ನಷ್ಟು ಗ್ಯಾರೆಂಟಿ ಜನರಿಗೆ ಬರುತ್ತದೆ ಎಂದು ಕರೆ ನೀಡಿದರು.ಯಾಕ್ಟರ್ ಬಿಜೆಪಿ ವರ್ಕರ್ಸ್ ಕಾಂಗ್ರೆಸ್ ಪಾರ್ಟಿಯ ಎಂಬುದು ಗಣೇಶ್ ಹೇಳಿದರು.
ಈ ಸಂದರ್ಭದಲ್ಲಿ ತುಕಾರಾಂ ಮಾತನಾಡಿ ರಾಮುಲು, ಶಾಂತ,ದೇವೇಂದ್ರಪ್ಪ,ಯಾವ ಹಳ್ಳಿಗಳಿಗೆ ಹೋಗಿ ಬಡವರ, ದಲಿತರ, ಕಾರ್ಮಿಕರ, ರೈತರ ಪರವಾಗಿ ಕೆಲಸ ಮಾಡಿದ್ದು, ತೋರಿಸಿ ಎಂದು ಮಾಧ್ಯಮದ ವರಿಗೆ ತಿಳಿಸಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಆಶಯದಂತೆ,ಸ್ಪರ್ಧೆ ಮಾಡಲು ಋಷಿಯಾಗಿದೆ.ಸಿದ್ದ ರಾಮಯ್ಯ ನವರ ಸರ್ಕಾರ ಕೊಟ್ಟಂತ ಆಡಳಿತ ಕೇಂದ್ರ ಸರ್ಕಾರ ನಮ್ಮ ರಾಜ್ಯ ಸರ್ಕಾರದ ಮುಂದೆ . ಪೇಲುರ್ ಆಗಿದೆ ನಮ್ಮ ಯಶಸ್ಸು ಇದರ ಮಧ್ಯೆ ಚುನಾವಣೆ ಗೆದ್ದು ಇತಿಹಾಸ ಮತ್ತೆ ಸೃಷ್ಟಿ ಮಾಡುತ್ತದೆ. ದೇಶದ ರಾಷ್ಟ್ರದ ಹಿತಾಸಕ್ತಿಗಾಗಿ ನೀವು ಕೈಜೋಡಿಸಿ ಎಂದು ತುಕಾರಾಂ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಜೆ.ಎನ್.ಗಣೇಶ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಮುಂಡ್ರಿಗಿ ನಾಗರಾಜ್, ಮೇಯರ್ ಬಿ.ಶ್ವೇತ, ಸೇರಿದಂತೆ ಪಾಲಿಕೆಯ ಸದಸ್ಯರು ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.