ಸಂಡೂರು,ಏ.10 : ಹೊಸದೊರೊಜಿ ಗ್ರಾಮದ ಹೊರ ವಲಯದಲ್ಲಿರುವ ಕರ್ನಾಟಕದ ಎರಡನೇ ಹಾಗೂ ಬಳ್ಳಾರಿ ಜಿಲ್ಲೆಯ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಾತ್ರವಾಗಿದ ದರೋಜಿಯ ಐತಿಹಾಸಿಕ ಕೆರೆ ಸುಮಾರು 200 ವರ್ಷಗಳ ಇತಿಹಾಸಿಕ ಹೊಂದಿರುವ ಬೃಹತ್ ಕೆರೆ ಈ ಭಾಗದ ರೈತರ ಜೀವನಾಡಿಯೂ ಆಗಿದೆ.
ಕೆರೆಯ ಏರಿಯ ಸುಂದರವಾದ ದೃಶ್ಯ ಅರೆ ಹರಿಸಿನಿಂದ ಕಂಗೊಳಿಸುವ ಬತ್ತ ಗದ್ದೆಗಳು ಬೆಟ್ಟದ ಅಂಚಿನಲ್ಲಿರುವ ಕೋಡಿ ವೀರಭದ್ರೇಶ್ವರ ದೇವಸ್ಥಾನದ ಸೇರಿದಂತೆ ಸುತ್ತಲಿನ ಪ್ರಕೃತಿ ಸೊಬಗು ಸನಿಯಲು ಬಳ್ಳಾರಿ ವಿಜಯನಗರ ಜಿಲ್ಲೆಯ ನೂರಾರು ಪ್ರವಾಸಿಗಳು ನಿರಂತರವಾಗಿ ಭೇಟಿ ನೀಡುತ್ತಾರೆ.
2840 ಎಕ್ಕರೆ ನಿರ್ಮಾಣ ಇರುವ ವಿಠಲವಾದ ಕೆರೆಯ 11 ಗ್ರಾಮಗಳ 3222 ಎಕರೆ ನೀರು ಒದಗಿಸುತ್ತದೆ .ಸಂಡೂರು ತಾಲೂಕಿನ ಕೆಲ ಗ್ರಾಮಗಳ ಹರಿಯುವ ನಾಲ್ಕು ಹಳ್ಳಿಗಳ ನೀರು ತಡೆಯುವ ಅಂತರ್ಜಲ ಪ್ರಮಾಣ ಹೆಚ್ಚಿಸುವ ಕೃಷಿ ಮೀನುಗಾರಿಕೆ ಜನ ಜಾನುವಾರುಗಳು ದೇಹ ತನಸುವ ಹಾಗೂ ಈ ಪ್ರದೇಶವನ್ನು ಹಸಿರು ವಲಯವನ್ನಾಗಿಸುವ ಉದ್ದೇಶದಿಂದ 1,7 97ರಲ್ಲಿ ಈ ಕೆರೆಯನ್ನು ನಿರ್ಮಿಸಲಾಗಿದೆ ಕೆರೆ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಪ್ರವಾಸಿ ಮಂದಿರ ಎತ್ತರದ ಶಿಕ್ಷಣ ಗೋಪುರ ಜಂಬವ ಉದ್ಯಾನ ನಿರ್ಮಿಸಲಾಗಿದ್ದು ಇವು
ಕೆರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುವೆ ಬಣ್ಣ ಬಣ್ಣದ ಹಕ್ಕಿಗಳು ಕಲಾವರ ಹಸಿರುಟ್ಟ ಪರಿಸರ ವನಪ್ರಾಣಿಗಳಿಗೆ ಆಸರೆಯಾದ ಬಿಳಿ ಕಲ್ಲಿನ ಬೆಟ್ಟಗಳ ಸಾಲುನ್ನು ವೀಕ್ಷಣೆ ಗೋಪುರದ ಮೂಲಕ ಕಂಡು ಆನಂದಿಸಬಹುದು.
ಕೆರೆಗೆ ಕಲುಷಿತ ನೀರು
ಹೊಸದೊರೋಜಿ ಕೆರೆಯಲ್ಲಿ ಹುಳು ತುಂಬಿದ್ದು ನೀರಿನ ಪ್ರಮಾಣ ಕ್ಷಿಣಿಸಿದ್ದು. ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಹರಿಸಲಾಗುತ್ತಿದೆ ಪಕ್ಷಿಗಳು ಮೀನುಗಳು ಮಿಶ್ರಿತ ನೀರಿನಿಂದ ಸತ್ತು ಹೋಗುತ್ತದೆ ಹಾಗೂ ರೈತರ ಬೆಳೆಗಳ ಇಳುವರಿ ಕುಂಟಿತಗೊಂಡು ಭೂಮಿ ಬರಡಾಗುತ್ತಿದೆ ಜಿಲ್ಲಾಡಳಿತವು ಈ ಬಗ್ಗೆ ಶೀಘ್ರಕ್ರಮ ಕೈಗೊಳ್ಳಬೇಕು ಎಂದು ದರೋಜಿ ಕೆರೆಯ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ಕಾಳಪ್ಪ ಒತ್ತಾಯಿಸಿದರು.