ಬಳ್ಳಾರಿ,ಏ.10: 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಶಿಷ್ಠ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಭರ್ಜರಿ ಜಯಭೇರಿ ಸಾಧಿಸಿದ್ದಾರೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ಜರುಗಿದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಶಿಷ್ಠ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಜಯಭೇರಿ ಸಾಧಿಸುವ ಮೂಲಕ ಕಾಲೇಜು ಪ್ರಾರಂಭಗೊAಡ ನಾಲ್ಕನೇಯ ವರ್ಷದಲ್ಲೇ ಬಳ್ಳಾರಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ನೀಡಿ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತಿಹಿಡಿದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಕೆ. ರಮೇಶ ರಡ್ಡಿಯವರು ತಿಳಿಸಿದರು.
ಚಿನ್ಮಯಿ, 600ಕ್ಕೆ 587 ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ, ಅದೇ ರೀತಿ ಇನ್ನು ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯುವದರ ಮೂಲಕ ಕಾಲೇಜಿನ ಹೆಸರನ್ನು ಉತ್ತುಂಗದ ಶಿಖರಕ್ಕೆ ಎತ್ತಿ ಹಿಡಿದ್ದಾರೆ ಎಂದು ಹೇಳಿದರು.
ಸಾಯಿ ದೇವಾ ಹರ್ಷಿಣಿ -585 / 600, ಸಿ. ಸಂಜನಾ -580 / 600, ಡಿ ಉತ್ಕರ್ಷ್ – 580 / 600
ಹಫಿಜಾ580 / 600,ರಿತೇಶ್ ಕುದ್ರಿಮೋತಿ 580 / 600, ಹಾಸಿನಿ ಆರ್577 / 600, ಸಿ ಬಿ ಶರತ್ ರೆಡ್ಡಿ575 / 600 ,ರಾಧಿಕಾ ಆರ್ ಕಾಂಡ್ರೇ, 575 / 600, ರುಮಾ ಅಹ್ಮದ್ ಕಟ್ಟಬಾಡಿ 575 / 600,
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಈ ಯಶಸ್ವಿಗೆ ಕಾರಣರಾದ ಕಾಲೇಜಿನ ಉಪನ್ಯಾಸಕರಿಗೆ, ಆಡಳಿತ ಮಂಡಳಿಯವರಿಗೆ, ಸಿಬ್ಬಂದಿಯವರಿಗೆ ಮತ್ತು ಕಾಲೇಜಿನ ಕೀರ್ತಿ ಬೇಳಗಲು ಎಲ್ಲಾ ರೀತಿಯಿಂದ ಸಹಕಾರ ನೀಡಿದ ಪಾಲಕರು ಮತ್ತು ಪೋಷಕರಿಗೆ, ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಕೆ ರಮೇಶ ರಡ್ಡಿಯವರು ಅಭಿನಂದನೆಯನ್ನು ತಿಳಿಸಿದರು.