ಬಳ್ಳಾರಿ, ಏ.13: ಜಿಲ್ಲೆಯ ಸಂಡೂರು ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಲೋಕಸಭಾ ಚುನಾವಣೆಯವ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮತ್ತವರ ಅವಲಂಬಿತರ ಹೆಸರಲ್ಲಿ ಯಾವುದೇ ಕೃಷಿ, ಕೃಷಿಯೇತರ ಭೂಮಿ ಇಲ್ಲ. ಆದರೆ ಅವರ ಬಳಿ ಒಟ್ಟಾರೆ 3.52 ಕೋಟಿ ರೂ ಆದ್ತಿ ಇದೆ.
ತುಕರಾಂ ಅವರ ತಂದೆ ಈ.ಓಬಣ್ಣ ಹೆಸರಲ್ಲಿ 8.21 ಎಕರೆ ಜಮೀನಿದೆ. ಮತ್ತವರ ಪತ್ನಿ ಅನ್ನಪೂರ್ಣ ಹೆಸರಲ್ಲಿ ಒಟ್ಟು 10.7 ಕೋಟಿ ರೂ. ಮೌಲ್ಯದ ನಿವೇಶನ, ವಸತಿ ಕಟ್ಟಗಳು ಸೇರಿ ಸ್ಥಿರಾಸ್ತಿ, ಚರಾಸ್ತಿ ಇದೆ. ಈ ಪೈಕಿ ತುಕಾರಾಂ ಸೇರಿದ್ದ ಜಾವಾ, ಟಯೋಟಾ ಇನ್ನೋವಾ ಕಾರು, 12.62 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 1.54 ಕೋಟಿ ರೂ. ಮೌಲ್ಯದ ಚರಾಸ್ತಿ, 47.66 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಪತ್ನಿ ಅನ್ನಪೂರ್ಣ ಹೆಸರಲ್ಲಿ ದ್ವಿಚಕ್ರ ವಾಹನ, 13.57 ಲಕ್ಷ ರು. ಮೌಲ್ಯದ 560 ಗ್ರಾಂ ಚಿನ್ನಾಭರಣ ಸೇರಿ 37 ಲಕ್ಷ ರು. ಮೌಲ್ಯದ ಚರಾಸ್ತಿ, 63 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಇಬ್ಬರೂ ಸೇರಿ 1.23 ಕೋಟಿ ರೂ. ಸಾಲ ಹೊಂದಿದ್ದಾರೆ.
ಇವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ