ಬಳ್ಳಾರಿ, ಏ.18 : ಬಳ್ಳಾರಿಯಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿ ಇದೀಗ ಕೌಲ್ ಬಜಾರ್ ನಿಂದ ಗಾಂಧಿನಗರಕ್ಕೆ ಶಿಫ್ಟ್ ಆಗಿದ್ದು. ಅಧ್ಯಕ್ಷರು ಬದಲಾವಣೆಯಿಂದ ಕಚೇರಿಯನ್ನು ವಿಳಾಸ ಬದಲಾಯಿಸಿಕೊಳ್ಳುವ ಕಾಂಗ್ರೆಸ್ ಕಚೇರಿಗೆ ಇದೀಗ ಶಾಶ್ವತ ವಿಳಾಸ ದೊರೆಯುವ ಕೆಲಸವೂ ಆಗುತ್ತಿದೆ.
ಈ ಹಿಂದೆ ಮಹಮ್ಮದ್ ರಫೀಕ್ ಅವರು ಪಕ್ಷದ ನಗರ ಜಿಲ್ಲಾ ಅಧ್ಯಕ್ಷರಾಗಿದ್ದಾಗ ಕಂಟೋನ್ ಮೆಂಟ್ ನಲ್ಲಿ ಪಕ್ಷದ ಕಚೇರಿ ಇತ್ತು. ಅಲ್ಲಂ ಪ್ರಶಾಂತ್ ಅವರು ಅಧ್ಯಕ್ಷರಾಗುತ್ತಿದ್ದಂತೆ ಈ ಕಚೇರಿಗೆ ಬೀಗ ಹಾಕಿದರು. ಹೊಸದಾಗಿ ಅಧ್ಯಕ್ಷ ರಾದ ಅಲ್ಲಂ ಪ್ರಶಾಂತ್ ಅವರಿಗೆ ಕಚೇರಿ ಇಲ್ಲದಂತಾಗಿತ್ತು. ಅವರು ಇದೀಗ ಗಾಂಧಿನಗರದ ಎರಡನೇ ಮೂರು ಸಾವಿರ ಚದರ ಅಡಿಯ ಬಾಡಿಗೆಗೆ ಕಟ್ಟಡ ಪಡೆದು ಇಂದು ಪಕ್ಷದ ಕಚೇರಿಯನ್ನು ಆರಂಭಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮೊದಲಾದವರು ಪೂಜೆ ಮಾಡಿ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಹಿರಿಯ ಮುಖಂಡರು, ಯುವ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.