ಬಳ್ಳಾರಿ.ಏ.26: ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಇರುವ ಸಂವಿಧಾನವನ್ನು ಬಿ.ಜೆ.ಪಿ ಯಲ್ಲ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ, ಒಂದು ವೇಳೆ ಬಿ.ಜೆ.ಪಿ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದೆ, ಆದರೆ ಅದು ಸಾಧ್ಯವಿಲ್ಲ, ಸಂವಿಧಾನ ಸಕಲರಿಗೂ ರಕ್ಷಣೆ ಮತ್ತು ಅಧಿಕಾರ ನೀಡುತ್ತದೆ, ಇದಕ್ಕಾಗಿ ನಮ್ಮ ಪೂರ್ವಜರು ಮತ್ತು ಜನಸಾಮಾನ್ಯರು ಹೋರಾಟ ಮಾಡಿ ಸಂವಿಧಾನವನ್ನು ರಚಿಸಿಲಾಗಿತ್ತು, ದೇಶದಲ್ಲಿ ನಡೆಯುವ ಚುನಾವಣೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟಿçÃಯ ಅಧ್ಯಕ್ಷರಾದ ರಾಹುಲ್ ಗಾಂಧಿ ಹೇಳಿದರು.
ಅವರು ಇಂದು ನಗರದ ಡಾ.ರಾಜ್ಕುಮಾರ್ ರಸ್ತೆಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿ, ಬಿ.ಜೆ.ಪಿ ಸರ್ಕಾರದ ಪ್ರಧಾನಿ ಮೋದಿ ಇಲ್ಲಿವರೆಗೂ ದೇಶದ ಜನರಿಗೆ ಏನೂ ಕೊಡಲು ಸಾಧ್ಯವಾಗಿಲ್ಲ, ಅಂಬಾನಿ ಅದಾನಿ ಸೇರಿದಂತೆ ಕೇವಲ 22 ಜನರಿಗೆ ದೇಶದ ಆಸ್ತಿಯನ್ನು ಖಾಸಗೀಕರಣದ ನೆಪದಲ್ಲಿ ನೀಡಿದ್ದಾರೆ, ಅವರ ಸುಮಾರು ಹದಿನಾರು ಲಕ್ಷ ಕೋಟಿ ಮನ್ನಾ ಮಾಡಿದ್ದಾರೆ, ದೇಶದ ಬಡಜನರಿಗೆ ಖಾಲಿ ಚೆಂಬನ್ನು ಕೋಟ್ಟಿದ್ದಾರೆ ಎಂದು ಖಾಲಿ ಚೆಂಬನ್ನು ಪ್ರದರ್ಶಿಸಿ ಬಿ.ಜೆ.ಪಿ ಪಕ್ಷವನ್ನು ಲೇವಡಿ ಮಾಡಿದರು.
ರಾಜ್ಯದಲ್ಲಿ ಬಡವರಿಗಾಗಿ ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ನೀಡಿ ಬಡವರ ಮನೆಯ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿದ್ದಾರೆ, ನಮ್ಮ ಪಕ್ಷದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಗಲ್ಲಿ ಗಲ್ಲಿಗಳಲ್ಲಿರುವ ಬಡವರನ್ನು ಹುಡುಕಿ ಆ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳಿಗೆ 8500 ರೂಪಾಯಿಗಳನ್ನು ಕೊಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಟ್ಟು ಹಣ 10,500 ರೂಪಾಯಿಗಳಷ್ಟು ಹಣವನ್ನು ಕೋಟ್ಯಾಂತರ ತಾಯಂದಿರ ಖಾತೆಗೆ ಜಮೆ ಮಾಡಿ ಅವರ ಜೀವನವನ್ನು ಇನ್ನಷ್ಟು ಅತ್ಯುತ್ತಮ ಸ್ಥಿತಿಗೆ ತರುತ್ತೇವೆ, ಮತ್ತು ಕಾರ್ಮಿಕರಿಗೆ ನರೇಗಾ ಕೂಲಿಯನ್ನು 400 ರೂಪಾಯಿಗಳಿಗೆ ಹೆಚ್ಚಿಸಲಾಗುವುದು, ರೈತರಿಗಾಗಿ ಎಂ.ಎಸ್.ಪಿ ಯೋಜನೆ ಜಾರಿಗೊಳಿಸುವುದರ ಜೊತೆಗೆ, ರೈತರ ಸಾಲವನ್ನು ಮನ್ನಾ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಯುವಕರ ಆಸೆಗೆ ತಣ್ಣೀರೆರಿಚಿದ ಅಗ್ನಿವೀರ್ ಯೊಜನೆಯನ್ನು ರದ್ದುಗೊಳಿಸಿ ಕೋಟಿ ಕೋಟಿ ಯುವಕರಿಗೆ ಉದ್ಯೋಗ ಒದಗಿಸಲಾಗುವುದು ಆಶ್ವಾಸನೆ ಕೊಟ್ಟರು, ಅಲ್ಲದೆ ದೇಶದಲ್ಲಿ ಸಧ್ಯ ತಪ್ಪು ಜಿ.ಎಸ್.ಟಿ ಚಾಲ್ತಿಯಲ್ಲಿದೆ, ಅದನ್ನು ಸಾರ್ವಜನಿಕರಿಗೆ ಮತ್ತು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಸರಳಗೊಳಿಸಲಾಗುವುದು, ಮತು ಅತ್ಯಂತ ಮುಖ್ಯವಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು, ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಮುಗಿದ ತಕ್ಷಣ ಅಪ್ರೆಂಟ್ಶಿಪ್ ತರಬೇತಿ ನೀಡಿ ತಿಂಗಳಿಗೆ ಕನಿಷ್ಠ ಎಂಟು ಸಾವಿರದಂತೆ ಒಂದು ವರ್ಷಗಳ ಕಾಲ ವೇತನ ನೀಡಿ ನಿರುದ್ಯೋಗವನ್ನು ದೂರ ಮಾಡುತ್ತೇವೆ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿಯನ್ನು ಕಲ್ಪಿಸುತ್ತೇವೆ ಎಂದು ತಿಳಿಸಿದರು.
ರಾಜ್ಯ ತೆರಿಗೆ ರೂಪದಲ್ಲಿ ಕೊಟ್ಟ ಒಂದು ನೂರ ರೂಪಾಯಿಗಳ ಪೈಕಿ ನಮಗೆ ಬರಬೇಕಾದ ಹಣವನ್ನು ನೀಡದೆ, ಕೇವಲ 13 ರೂಪಾಯಿಗಳನ್ನಷ್ಟೆ ನೀಡಿ ರಾಜ್ಯ ಅನ್ಯಾ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಅತ್ಯಂತ ಮುಖ್ಯವಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ನಾನು ಆಶ್ವಾಸನೆ ಕೊಟ್ಟ ಐದು ಸಾವಿರ ಕೋಟಿ ವೆಚ್ಚದ ಜೀನ್ಸ್ಪಾರ್ಕ್ ಅತಿ ಶೀಘ್ರದಲ್ಲೇ ಆರಂಭಿಸಲಾಗುವುದು, ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಈಗಾಗಲೇ ಯೋಜನೆ ರೂಪರೇಷೇಗಳನ್ನು ಸಿದ್ಧಪಡಿಸಿದ್ದಾರೆ, ಬಳ್ಳಾರಿಯನ್ನು ವಿಶ್ವದ ಜೀನ್ಸ್ ರಾಜಧಾನಿಯನ್ನಾಗಿ ಮಾಡೇ ಮಾಡುತ್ತೇನೆಂದು ಭರವಸೆಯನ್ನು ನೀಡಿದರು.
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಇ ತುಕಾರಾಮ್ ರಾಹುಲ್ ಗಾಂಧಿಯ ಹಿಂದೆ ಕಾರ್ಯಕ್ರಮದುದ್ದಕ್ಕೂ ಬೆದರು ಬೊಂಬೆಯAತೆ ನಿಂತಿದ್ದರು.
ಈ ಸಂದರ್ಭದಲ್ಲಿ ಸಚಿವ ಶಿವರಾಜ್ ತಂಗಡಿ, ಜಮೀನ್ ಅಹಮ್ಮದ್ ಖಾನ್, ಮಾಜಿ ಸಚಿವ ಪರಮೇಶ್ವರ ನಾಯಕ್ ಮಾತನಾಡಿದರು. ಮಧ್ಯೆ ಮಧ್ಯೆ ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ ಮಾತನಾಡಿ ಕಾರ್ಯಕರ್ತರನ್ನು ತಮ್ಮ ಮೊನಚು ಮಾತುಗಳ ಮೂಲಕ ಹುರಿದುಂಬಿಸಿದರು. ಸಮಾವೇಶದಲ್ಲಿ ಸುರ್ಜೇವಾಲ್, ಬಿ.ಕೆ ಹರಿಪ್ರಸಾದ್, ಅಲ್ಲಂ ವೀರಭದ್ರಪ್ಪ, ಸಚಿವ ಸಂತೋಷ್ ಲಾಡ್, ನಗರ ಶಾಸಕ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ ಎನ್ ಗಣೇಶ್, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್, ಹೊಸಪೇಟೆ ಶಾಸಕ ಎಚ್.ಆರ್ ಗವಿಯಪ್ಪ, ಹರಪನಹಳ್ಳಿ ಶಾಸಕರಾ ಲತಾ ಮಲ್ಲಿಕಾರ್ಜುನ, ಮುಖಂಡರಾದ ಸಂಯುಕ್ತರಾಣಿ, ಸೇರಿದಂತೆ ಹಲವಾರು ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.