ಬಳ್ಳಾರಿ,ಮೇ.೧೭: ನಗರದ ರೆಡಿಯೋಪಾರ್ಕ್ನ ಸರ್ಕಾರಿ ಐ.ಟಿ.ಐ ಕಾಲೇಜ್ ಗ್ರೌಂಡ್ನಲ್ಲಿ ಮೇಘಾಫನ್ ಫೇರ್ ಎಕ್ಷಿಭಿಷನ್ ಆರಂಭಿಸಲಾಗಿದೆ ಎಂದು ವ್ಯವಸ್ಥಾಪಕ ರಿಯಾಜ್ ಅಮಹಮ್ಮದ್ ತಿಳಿಸಿದ್ದಾರೆ.
ಅವರು ಎಕ್ಷಿಭಿಷನ್ ಸ್ಥಳದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಈ ಎಕ್ಷಿಭಿಷನ್ನಲ್ಲಿ ಮಾತನಾಡು ಪಕ್ಷಿ ಎಂದು ಹೆಸರಾದ ಮೆಕಾವ್, ಇಗೋನೋ (ಊಸರವಳ್ಳಿ) ಸುಗರ್ ಲ್ಯಾಂಡರ್, ಇಮೋ ಪಕ್ಷಿ, ಲವ್ ಬರ್ಡ್ಸ್, ಗಿಳಿ ಸೇರಿದಂತೆ ವಿವಿಧ ರೀತಿಯ ವಿಶೇಷವಾದ ಕೋಳಿ, ನಾಯಿ, ಹಾವು, ಹೆಬ್ಬಾವು ಸೇರಿದಂತೆ ವಿಲಕ್ಷಣ ಪ್ರಾಣಿ ಪಕ್ಷಿಗಳು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.
ಅಲ್ಲದೆ ವಿವಿಧ ರಾಜ್ಯಗಳ ಕೈಮಗ್ಗಗಳಿಂದ ತಯಾರಿಸಿದ ಬಟ್ಟೆಗಳು, ವಿಶೇಷ ಉಡುಪುಗಳು, ದಿನನಿತ್ಯ ಬಳಕೆಯ ವಸ್ತುಗಳು, ಕಿಚನ್, ಗಾರ್ಡನ್ಗೆ ಬೆಕಾದ ವಸ್ತುಗಳು, ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳು, ಉಪಕರಣಗಳು ಸೇರಿದಂತೆ ನೂರಕ್ಕೂ ಹೆಚ್ಚು ಇತರೆ ಹಲವಾರು ಮಳಿಗೆಗಳನ್ನು ತೆರೆಯಲಾಗಿದೆ.
ಅಲ್ಲದೆ ಚಿಕ್ಕಮಕ್ಕಳ ಮನೋಲ್ಲಾಸಕ್ಕಾಗಿ ವಾಟರ್ ಬೋಟ್, ಮಿನಿ ಟ್ರೇನ್, ಆಟವಾಡುವ ಉಪಕರಣಗಳು, ಜಾಯಿಂಟ್ ವ್ಹೀಲ್ ಆಟಗಳು ಮತ್ತು ಪ್ರಪ್ರಥಮ ಭಾರಿಗೆ ವಿಶೇಷವಾಗಿ ಪಾಶ್ಚಿಮಾತ್ಯ ಶೈಲಿಯ (ವೆಷ್ಟçನ್ ಸ್ಟೆöÊಲ್) ಉಪಹಾರವನ್ನು ಸಹ ಪರಿಚಯಸಲಾಗಿದೆ. ಪ್ರತಿದಿನ ಸಂಜೆ ೦೫ ರಿಂದ ರಾತ್ರಿ ೧೦ ಗಂಟೆಯವರೆಗೆ ತೆರೆದಿರುತ್ತದೆ ಇದರ ಸದುಪಯೋಗವನ್ನು ನಗರದ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ವ್ಯವಸ್ಥಾಪಕ ರಿಯಾಜ್ ಅಹಮ್ಮದ್ ಮಾಲಿಕ ಚಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ ಮಹೋಹರ್, ಶ್ರೀರಾಮಚಂದ್ರಮೂರ್ತಿ, ಝಾಕೀರ್, ವೆಂಕಟೆಶ್ ಸೇರಿದಂತೆ ಸಿಬ್ಬಂದಿಗಳಿದ್ದರು.