ಬಳ್ಳಾರಿ, ಮೇ.17: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಲವು ಗ್ರಾಮಗಳ ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದು. ಅವನ್ನು ದುರಸ್ಥಿ ಮಾಡಿಸಿ ಚಾಲನೆ ಮಾಡಲು ತುಂಗಭದ್ರ ರೈತ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮತ್ತು ಗ್ರಾಮಗಳ ರೈತರು ಸಿರುಗುಪ್ಪ ತಾಲೂಕಿನ ಇಬ್ರಾಂಪುರ , ಮಣ್ಣೂರು ಸುಗೂರು ಮತ್ತು ಕುರಿಗನೂರು ಗ್ರಾಮಗಳ ಏತ ನೀರಾವರಿ ಕಾಮಗಾರಿಗಳು ಸ್ಥಗಿತಗೊಂಡಿದ್ದು ಇದು ರೈತರಿಗೆ ಅತ್ಯಂತ ತೊಂದರೆಯಾಗಿದೆ. ಅದಕ್ಕಾಗಿ ಜಿಲ್ಲಾ ಸಣ್ಣ ನೀರಾವರಿ ಮುಖ್ಯ ಅಭಿಯಂತರರಿಗೆ, ಆದೇಶ ನೀಡಿ, ತಕ್ಷಣ, ಈ ಏತ ನೀರಾವರಿ ಕಾಮಗಾರಿಗಳನ್ನು ದುರಸ್ಥಿ ಮಾಡಿಸಿಕೊಡಬೇಕೆಂದು ಡಿಸಿ ಮಿಶ್ರಾ ಅವರಿಗೆ ಇಂದು ಮನವಿ ಸಲ್ಲಿಸಲಾಗಿದೆ .
ಈ ವೇಳೆ ಇಬ್ರಾಂಪುರ ವೀರನಗೌಡ , ಖರ್ಚಿಗನೂರು ಬಸವನಗೌಡ, ಸಾಗರ್ ಗೌಡ, ಮೊದಲಾದವರು ಇದ್ದರು.