ಬಳ್ಳಾರಿ, ಜೂ.01: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಮತ್ತು ಅಧಿಕಾರಿ ಆತ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬಾರದೆಂದು ನಗರದಲ್ಲಿ ಶಾಸಕ ಭರತ್ ರೆಡ್ಡಿ ನೇತೃತ್ವದಲ್ಲಿ ಇಂದು ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ನಾಗೇಂದ್ರ ಅಭಿಮಾನಿಗಳ ಬಳಗ, ಕಾಂಗ್ರೆಸ್ ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಬೃಹತ್ ಪಾದಯಾತ್ರೆ ನಡೆಸಿ. ಈ ಕುರಿತು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಮೆರವಣಿಗೆಗೂ ಮುನ್ನ ಶ್ರೀ ಕನಕ ದುರ್ಗಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ, ಅಭಿಮಾನಿಗಳು 101ಟೆಂಗಿನ ಕಾಯಿ ಒಡೆದರು. ದುರ್ಗಮ್ಮ ದೇವಸ್ಥಾನ ದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ಭರತ್ ರೆಡ್ಡಿ, ಸಚಿವ ನಾಗೇಂದ್ರ ಅವರನ್ನು ಬೆಂಬಲಿಸಿ ಮೌನ ಜಾಥಾ ಮಾಡಿದ್ದೇವೆ.
ಸಚಿವ ನಾಗೇಂದ್ರ ಅವರ ಮೇಲೆ ಬಿಜೆಪಿ ಮಾಡುತ್ತಿರುವ ಆರೋಪ ನಿರಾಧಾರ. ಪ್ರಜ್ವಲ್ ರೇವಣ್ಣ ವಿಷಯ ಡೈವೊರ್ಟ್ ಮಾಡಲು ಬಿಜೆಪಿಯವರು ಸಚಿವ ನಾಗೇಂದ್ರ ಅವರ ವಿಷಯ ಮುಂದೆ ತರುತ್ತಿದ್ದಾರೆ.
ಪ್ರಕರಣದಲ್ಲಿ ನಾಗೇಂದ್ರ ಅವರ ಯಾವುದೇ ಹಸ್ತಕ್ಷೇಪ ಇಲ್ಲ. ವಿನಾಕಾರಣ ವಿರೋಧ ಪಕ್ಷದ ನಾಯಕರಗಳು ನಾಗೇಂದ್ರ ಅವರ ರಾಜಿನಾಮೆ ಕೇಳುತ್ತಿದ್ದಾರೆ. ಇದು ದುರುದ್ದೇಶದಿಂದ ಕೂಡಿರುವ ಆರೋಪ. ಈಶ್ವರಪ್ಪ ಅವರ ಪ್ರಕರಣ ಇದು ಎರಡು ಬೇರೆಬೇರೆ ಎಂದರು.
ಸಿಎಂಗೆ ಬರೆದ ಮನವಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ಯಾವುದೇ ಹಸ್ತಕ್ಷೇಪ ಇಲ್ಲದೇ ಇದ್ದರೂ ಅನಾವಶ್ಯಕವಾಗಿ ಸಚಿವರ ಹೆಸರನ್ನು ಎಳೆದು ತಂದು, ರಾಜೀನಾಮೆಗೆ ಒತ್ತಡ ತರುವ ಮೂಲಕ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳೆಯುತ್ತಿರುವ ಬಿಜೆಪಿ ಪಕ್ಷದ ನಡೆಯನ್ನು ಬಳ್ಳಾರಿ ಜಿಲ್ಲೆಯ ನಾಗರೀಕರು ಹಾಗೂ ನಾಡಿನ ಬಿ.ನಾಗೇಂದ್ರ ಅವರ ಅಭಿಮಾನಗಳ ಪರವಾಗಿ ನಾವು ಖಂಡಿಸುತ್ತೇವೆ.
ವಾಸ್ತವದಲ್ಲಿ ಮೃತ ಚಂದ್ರಶೇಖರ್ ಅವರು ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಸಚಿವ ನಾಗೇಂದ್ರ ಅವರ ಹೆಸರು ಎಲ್ಲೂ ಉಲ್ಲೇಖಗೊಳ್ಳದೇ ಇದ್ದರೂ, ಬಿಜೆಪಿ ಪಕ್ಷದವರು ಅನಾವಶ್ಯಕವಾಗಿ ಪ್ರಕರಣದಲ್ಲಿ ನಾಗೇಂದ್ರರವರನ್ನು ಸಿಲಿಕಿಸುವ ಪ್ರಯತ್ನಕ್ಕೆ ಮುಂದಾಗಿರುತ್ತದೆ. ಸದರಿ ಪ್ರಕರಣವನ್ನು ರಾಜ್ಯ ಸರ್ಕಾರವು ಈಗಾಗಲೇ ತನಿಖೆಗಾಗಿ ಸಿ ಐ ಡಿ ಮತ್ತು ಎಸ್ ಐ ಟಿ ತನಿಖಾ ಸಂಸ್ಥೆಗಳಿಗೆ ವಹಿಸಿದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದ್ದು, ನಿಜವಾದ ಅಪಾರಧಿಗಳು ಯಾರೆಂಬುದು ಸಹ ಇನ್ನೂ ದೃಢ ಪಟ್ಟರುವುದಿಲ್ಲ.
ಇಂತಹ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಚಿವ ನಾಗೇಂದ್ರ ರವರ ಹೆಸರು ಮತ್ತು ಅವರ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಬಿಜೆಪಿ ಪಕ್ಷದ ಯಾವುದೇ ಒತ್ತಡಗಳಿಗೆ ತಾವುಗಳು ಮಣಿಯದೆ ಸಚಿವ ನಾಗೇಂದ್ರ ರವರ ರಾಜೀನಾಮೆಯನ್ನು ಪಡೆಯುವುದು ಸೂಕ್ತ ಎನಿಸುವುದಿಲ್ಲ.
ವಾಸ್ತವದಲ್ಲಿ ರಾಜ್ಯ ಸರ್ಕಾರವು ವಹಿಸಿರುವ ಖಾತೆಗಳನ್ನು ಸಚಿವ ನಾಗೇಂದ್ರ ರವರು ಬಹಳ ಸಮರ್ಥವಾಗಿ ನಿಭಾಯಿಸುತ್ತಿದ್ದು, ಸಚಿವರು ಇಲಾಖೆಗಳ ಜವಬ್ದಾರಿಯನ್ನು ವಹಿಸಿಕೊಂಡಾಗಿನಿಂದ ನೂತನ ಯೋಜನೆಗಳ ಮೂಲಕ ಇಲಾಖೆಗಳಿಗೆ ಹೊಸ ಕಾಯಕಲ್ಪ ತುಂಬುತ್ತಿದ್ದು, ಇದನ್ನು ಕಂಡು ಸಹಿಸದ ಕೆಲವು ಕಾಣದ ಕೈಗಳು ಹಾಗೂ ಅವರ ರಾಜಕೀಯ ವಿರೋಧಿಗಳು ಸಚಿವ ನಾಗೇಂದ್ರ ರವರ ಹೆಸರಿಗೆ ಕಳಂಕ ತರುತ್ತಿರುತ್ತಾರೆ.
ಆದ್ದರಿಂದ ತನಿಖಾ ಕಾರ್ಯ ಸಂಪೂರ್ಣ ಮುಗಿಯುವವರೆಗೆ ಬಿಜೆಪಿ ಹಾಗೂ ಇನ್ನಿತರೆ ಯಾವುದೇ ಕಾಣದ ಕೈಗಳ ಒತ್ತಡಗಳಿಗೆ ತಾವುಗಳು ಮಣಿಯದೆ, ಸಚಿವ ನಾಗೇಂದ್ರ ಅವರ ರಾಜಿನಾಮೆ ಪಡೆಯದೆ. ಯಾವುದೇ ಕ್ರಮಗಳನ್ನು ಜರುಗಿಸಬಾರದೆಂದು ಮನವಿ ಮಾಡಿದೆ.
ಜಾಥಾದಲ್ಲಿ ಮೇಯರ್ ಶ್ವೇತ ಬಿ. ಸೋಮು, ಪಾಲಿಕೆ ಸದಸ್ಯರಾದ ಪ್ರಭಂಜನ್, ರಾಮಾಂಜನೇಯಲು, ಮುಲ್ಲಂಗಿ ನಂದೀಶ್, ನೂರ್ ಮುಹಮ್ಮದ್, ವಿವೇಕ್ (ವಿಕ್ಕಿ) ಮೊದಲಾದವರು, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಬಿ.ರಾಂಪ್ರಸಾದ್, ಗ್ರಾಮೀಣ ಕ್ಷೇತ್ರದ ಬಗರ ಹುಕುಂ ಸಾಗುವಳಿಯ ಸಕ್ರಮ ಸಮಿತಿಯ ಅಧ್ಯಕ್ಷ ತಿಮ್ಮನಗೌಡ, ಮುಖಂಡರಾದ ಪಿ.ಜಗನ್ನಾಥ, ಯರ್ರಗುಡಿ ಮುದಿಮಲ್ಲಯ್ಯ, ಯತೀಂದ್ರಗೌಡ, ಬೆಣಕಲ್ ಬಸವರಾಜ್ ಗೌಡ, ಗೋನಾಳ್ ನಾಗಭೂಷಣಗೌಡ, ಜಾನೆಕುಂಟೆ ಬಸವರಾಜ್ (ಕುಮ್ಮಿ), ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಸಾವಿರಾರು ಸಚಿವ ಬಿ.ನಾಗೇಂದ್ರ ಅವರು ಅಭಿಮಾನಿಗಳು ಪಾಲ್ಗೊಂಡಿದ್ದರು.