ಬಳ್ಳಾರಿ/ವಿಜಯನಗರ, ಜೂ.03: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ದಿನವಾದ ಜೂ.03 ಸೋಮವಾರದಂದು ಬಳ್ಳಾರಿ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಿತು. ಅಂತಿಮ ವರದಿಯಂತೆ ಶೇ.67.78 ರಷ್ಟು ಮತದಾನವಾಗಿದೆ.
ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 14,981 ಪುರುಷರು, 9,198 ಮಹಿಳೆಯರು ಮತ್ತು 4 ಜನ ಇತರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 10,555 ಪುರುಷರು, 5,837 ಮಹಿಳೆಯರು ಸೇರಿದಂತೆ 16,392 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಬಹುತೇಕ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಮಾಡುವುದು ಕಂಡುಬಂತು.
ಬಳ್ಳಾರಿ ನಗರ ಕ್ಷೇತ್ರದ ಬಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ಮತದಾನ ಕೇಂದ್ರಗಳಿದ್ದು, ಪದವೀಧರ ಮತದಾರರು ಸಾಲುಗಟ್ಟಿ ಬಂದು ತಮ್ಮ ಮತದಾನ ಹಕ್ಕು ಚಲಾಯಿಸಿದರು.
ಅದರಂತೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೋಕಾ ಗ್ರಾಮ ಪಂಚಾಯತ್ ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ ಪದವೀಧರ ಯುವ ಮತದಾರರು, ಶಿಕ್ಷಕರು ತಮ್ಮ ಮತದಾನ ಹಕ್ಕು ಚಲಾಯಿಸಿ ಮತದಾನ ಶಾಹಿ ಬೆರಳು ತೋರಿಸಿ ಖುಷಿಪಟ್ಟರು.
ಮತದಾನ ಕೇಂದ್ರಗಳಿಗೆ ಬರುವ ಮತದಾರರ ಹೆಸರು, ನೋಂದಣಿ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಹುಡುಕಿ ಕಳುಹಿಸುವ ಕಾರ್ಯ ಮತಗಟ್ಟೆ ಅಧಿಕಾರಿಗಳು ಮಾಡಿದರು.
ಬಳ್ಳಾರಿ ಜಿಲ್ಲೆಯ ಒಟ್ಟು 24 ಮತಗಟ್ಟೆ ಕೇಂದ್ರಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಧಾನ ಪರಿಷತ್ತಿನ ಸದಸ್ಯ ವೈ.ಎಂ.ಸತೀಶ್ ಅವರು, ಬಳ್ಳಾರಿಯ ಮುಖ್ಯ ಅಂಚೆ ಕಚೇರಿ ಹತ್ತಿರದ ಬಾಲಕೀಯರ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 75 ರಲ್ಲಿ ಮತಚಲಾವಣೆ ಮಾಡಿದರು.
“ಇದಕ್ಕೂ ಮೊದಲು ಬಳ್ಳಾರಿಯಲ್ಲಿ ಮತದಾನ ಕೇಂದ್ರ ಇತ್ತು. ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ಪದವೀಧರರು ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವುದರಿಂದ, ನಮ್ಮ ಹತ್ತಿರದ (ಮೋಕ) ಗ್ರಾಮದಲ್ಲಿಯೇ ಮತದಾನ ಕೇಂದ್ರ ತೆರೆದಿದ್ದು, ಮತದಾನ ಮಾಡಲು ನಮಗೆ ಅನುಕೂಲವಾಗಿದೆ. ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.”
– ಚೈತನ್ಯ, ವಿಶೇಷ ಚೇತನರು, ಸಿರಿವಾರ ಗ್ರಾಮ.
ಮತ ಚಲಾಯಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ
ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ನಿಮಿತ್ತ ಮತದಾನ ದಿನವಾದ ಜೂನ್ 03 ಸೋಮವಾರದಂದು ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆ ಸಂಖ್ಯೆ 76-ಎ ರಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮತ ಚಲಾಯಿಸಿದರು.
ವಿಜಯನಗರ ಜಿಲ್ಲೆಯಲ್ಲಿ ಶೇ.73.76 ರಷ್ಟು ಮತದಾನ :
ವಿಜಯನಗರ ಜಿಲ್ಲೆಯ ಒಟ್ಟು 21 ಮತಗಟ್ಟೆಗಳಲ್ಲಿ ಜೂನ್ 3ರಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯು ಶಾಂತಯುತವಾಗಿ ನಡೆದಿದ್ದು, ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಡೆದ ಮತದಾನದ ಪ್ರಮಾಣವು ಶೇಕಡಾವಾರು 73.76ರಷ್ಟು ದಾಖಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಪರುಷರು ಹಾಗೂ ಮಹಿಳೆಯರು ಮತ್ತು ಇನ್ನೀತರರು ಸೇರಿ ಒಟ್ಟು 18,233 ಪದವೀಧರ ಮತದಾರರು ಇದ್ದು, ಒಟ್ಟು 11,895 ಪುರುಷ ಮತದಾರರ ಪೈಕಿ 9012 ಮತದಾರರು ಹಾಗೂ ಒಟ್ಟು 6336 ಮಹಿಳಾ ಮತದಾರರ ಪೈಕಿ 4436 ಮಹಿಳಾ ಮತದಾರರು ಮತ್ತು ಇತರೆ ಇಬ್ಬರು ಮತದಾರರ ಪೈಕಿ ಒಬ್ಬರು ಸೇರಿ ಒಟ್ಟು 13,449 ಮತದಾರರು ಮತದಾನ ಮಾಡಿದ್ದಾರೆ.
ಹೂವಿನಹಡಗಲಿ: ತಾಲೂಕಿನ ಒಟ್ಟು 4 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ನಡೆಯಿತು. ಜಿ.ಪಿ.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜು ರೂಂ.ನA.01 ಹೂವಿನಹಡಗಲಿ., ಜಿ.ಪಿ.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜ ರೂಂ.ನA.02 ಹೂವಿನಹಡಗಲಿ., ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಇಟ್ಟಿಗಿ., ವೀರಪ್ಪ ಕೊಗಪ್ಪ ಕೊಂಪಿ ಸರ್ಕಾರಿ ಪದವಿ ಪೂರ್ವ ಕಾಲೇಜ್, ಹಿರೇಹಡಗಲಿನಲ್ಲಿ ಮತದಾನ ನಡೆಯಿತು.
ಹಗರಿಬೊಮ್ಮನಹಳ್ಳಿ: ತಾಲೂಕಿನ 04 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರ, ಹಗರಿಬೊಮ್ಮನಹಳ್ಳಿ (ಕೊಠಡಿ-01)., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರ, ಹಗರಿಬೊಮ್ಮನಹಳ್ಳಿ (ಕೊಠಡಿ-02)., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಪಸಾಗರ ಮತ್ತು ಗ್ರಾಮ ಪಂಚಾಯತಿ ಕಚೇರಿ ತಂಬ್ರಹಳ್ಳಿನಲ್ಲಿ ಮತದಾನ ನಡೆಯಿತು.
ಕೊಟ್ಟೂರ: ತಾಲೂಕಿನ 3 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಗ್ರಾಮ ಪಂಚಾಯತಿ ಕಚೇರಿ, ಕೋಗಳಿ, ಸರಕಾರಿ ಪದವಿ ಪೂರ್ವ (ಬಾಲಕರ) ಕಾಲೇಜು, ಪೂರ್ವ ಭಾಗ, ಉಜ್ಜಿನಿ ರಸ್ತೆ, ಕೊಟ್ಟೂರು ಮತ್ತು ಸರಕಾರಿ ಪದವಿ ಪೂರ್ವ (ಬಾಲಕರ) ಕಾಲೇಜು., ಪೂರ್ವ ಭಾಗ, ಉಜ್ಜಿನಿ ರಸ್ತೆ, ಕೊಟ್ಟೂರು ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ಹೊಸಪೇಟೆ: ತಾಲೂಕಿನ 4 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಬಿ.ಎಸ್.) ಚಿತ್ತವಾಡಿಗಿ, ಹೊಸಪೇಟೆ., (ಕೊಠಡಿ ನಂ 01)., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಬಿ.ಎಸ್.) ಚಿತ್ತವಾಡಿಗಿ, ಹೊಸಪೇಟೆ. (ರೂಮ್ ನಂಬರ್ 2)., ಸರ್ಕಾರಿ ಬಾಲಕೀಯರ ಪ್ರೌಢಶಾಲೆ, ಬಸ್ಸ್ಟ್ಯಾಂಡ್ ಹತ್ತಿರ, ಕಮಲಾಪುರ ಮತ್ತು ಸರ್ಕಾರಿ ಪ್ರೌಡಶಾಲೆ, ಮರಿಯಮ್ಮನಹಳ್ಳಿನಲ್ಲಿ ಮತದಾನ ನಡೆಯಿತು.
ಕೂಡ್ಲಿಗಿ: ತಾಲೂಕಿನ 3 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ತಾಲೂಕು ಪಂಚಾಯಿತಿ ಕೂಡ್ಲಿಗಿ., ಗ್ರಾಮ ಪಂಚಾಯತಿ ಕಾರ್ಯಾಲಯ, ಗುಡೆಕೋಟೆ ಮತ್ತು ಉನ್ನತಿಕರಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿನಲ್ಲಿ ಮತದಾನ ನಡೆಯಿತು.
ಹರಪನಹಳ್ಳಿ: ತಾಲೂಕಿನ 3 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಸರ್ಕಾರಿ ಜೂನಿಯರ್ ಕಾಲೇಜ್ ಹರಪನಹಳ್ಳಿ., ಸರ್ಕಾರಿ ಜೂನಿಯರ್ ಕಾಲೇಜು ಹರಪನಹಳ್ಳಿ ಮತ್ತು ಸರ್ಕಾರಿ ಜೂನಿಯರ್ ಕಾಲೇಜು, ಹರಪನಹಳ್ಳಿ (ಜೆ.ಒ.ಸಿ. ಹಾಲ್)ನಲ್ಲಿ ಮತದಾನ ನಡೆಯಿತು.
ಮತದಾನದ ಚಿತ್ರಣ: ಹೊಸಪೇಟೆ ನಗರದಲ್ಲಿ ಬೆಳಗಿನ 10 ಗಂಟೆವರೆಗೆ ಮತಗಟ್ಟೆ ಸಂಖ್ಯೆ 154ಎನಲ್ಲಿ ಒಟ್ಟು 1470 ಮತದಾರರ ಪೈಕಿ 71 ಪುರುಷರು ಹಾಗೂ 53 ಮಹಿಳಾ ಮತದಾರರು ಮಾತ್ರ ಮತಹಕ್ಕನ್ನು ಚಲಾಯಿಸಿದ್ದರು. ಹತ್ತಿರದಲ್ಲಿನ ಮತಗಟ್ಟೆ ಸಂಖ್ಯೆ 154ರಲ್ಲಿ 827 ಪುರುಷರ ಪೈಕಿ 94 ಜನರು ಮತ್ತು 647 ಮಹಿಳೆಯರ ಪೈಕಿ 46 ಜನರು ತಮ್ಮ ಮತಹಕ್ಕನ್ನು ಚಲಾಯಿಸಿದ್ದರು. ಅದೇ ರೀತಿ ಮರಿಯಮ್ಮನಹಳ್ಳಿಯಲ್ಲಿನ ಮತಗಟ್ಟೆ ಸಂಖ್ಯೆ 156ರಲ್ಲಿ ಬೆಳಗಿನ 11.10ರವರೆಗೆ ಒಟ್ಟು 258 ಪುರುಷರ ಪೈಕಿ 65 ಜನರು ಹಾಗೂ 138 ಮಹಿಳೆಯರ ಪೈಕಿ 26 ಜನರು ತಮ್ಮ ಮತಹಕ್ಕನ್ನು ಚಲಾಯಿಸಿದ್ದು ಕಂಡು ಬಂದಿತು.