ಬಳ್ಳಾರಿ,ಜೂ.03 : ಬಳ್ಳಾರಿ ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ
ಶ್ರೀ ಎರ್ರಿಸ್ವಾಮಿ ತಾತನವರ ಕೆರೆ ಹೊಳೆತ್ತುವ ಸಂಕಲ್ಪ ಕಾರ್ಯಕ್ರಮಕ್ಕೆ ಪರಮ ಪೂಜ್ಯ ಶ್ರೀ ಮಹೇಶ್ವರ ಮಹಾಸ್ವಾಮಿಗಳು ಹಗರಿಬೊಮ್ಮನಹಳ್ಳಿ ಸಂಸ್ಥಾನ ಮಠದ ಸ್ವಾಮಿಗಳು ಕೆರೆ ಮಣ್ಣನ್ನು ಹೂಳೆತ್ತುವ ಸಂಕಲ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಹಿತ ನುಡಿಗಳನ್ನಾಡಿದರು.
ನೂರಾರು ವರ್ಷ ರಾಜ್ಯವನ್ನಾಳಿದ ರಾಜ ಉಳಿಯಲಿಲ್ಲ ಮೂರು ದಿನ ಹಣವಾಗಿ, ನೂರಾರು ವರ್ಷ ಬಾಲಿದ ಮರ ಉಳಿಯಿತು ಸಾವಿರಾರು ವರ್ಷ ಮನೆಯ ತೊಳೆಯಾಗಿ, ನೂರಾರು ವರ್ಷಗಳಿಂದೆ ಕೆರೆಗಳನ್ನು ನಿರ್ಮಿಸಿದ ಪೂರ್ವಿಕರು ಉಳಿದಿಲ್ಲ ಆದರೆ ಅವರು ನಿರ್ಮಿಸಿದ ಕೆರೆಗಳು ವರ್ಷಗಳಿಂದ ಸಕಲ ಸರ್ವ ಜೀವರಾಶಿಗಳನ್ನು ಉಳಿಸಿಕೊಂಡು ಬಂದಿವೆ ನಮ್ಮ ಕೆರೆ ಮತ್ತು ಬಾವಿಗಳು ಅವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಜಿಲ್ಲಾ ನಿರ್ದೇಶಕರು ರೋಹಿತಾಕ್ಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಕೆರೆ, ಕೊಳ್ಳ, ಕುಂಟೆ, ತೆರೆದ ಬಾವಿ ಮೊದಲಾದ ಜಲಾಶಯಗಳಿಗೆ ವಿಶೇಷ ಮಹತ್ವವನ್ನು ನೀಡಿದ್ದರು. ಕೆರೆಗಳನ್ನು ತೋಡಿಸುವುದು ತೆರೆದ ಬಾವಿಗಳನ್ನು ನಿರ್ಮಿಸುವುದು ಮುಂತಾದವುಗಳು ಲೋಕೋಪಕಾರಿ ಕಾರ್ಯಗಳೆಂದು ನಮ್ಮ ಪೂರ್ವಿಕರು ತಿಳಿದಿದ್ದರು.
ಮಳೆ ನೀರು, ಸಂಗ್ರಹವಾಗುವ ಇಂಗುವ ಗುಂಡಿ ಅಂತರ್ಜಲ ಹೆಚ್ಚಿಸುವಂತೆ ಮಾಡುವುದು, ಸಕಲ ಜೀವಿಗಳಿಗೆ ಆಸರೆಯಾಗುವ ತಾನವೇ ಕೆರೆಯಾಗಿದೆ. ಕೆರೆಯ ನೀರಿನಿಂದ ನೂರಾರು ಎಕರೆ ಪ್ರದೇಶಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬಹುದು ಮನುಷ್ಯರಿಗೆ ಪ್ರಾಣಿಗಳಿಗೆ ಪಕ್ಷಿಗಳಿಗೆ ಕುಡಿಯಲು ನೀರನ್ನು ಒದಗಿಸುತ್ತದೆ ಕೆರೆಗಳಲ್ಲಿ ಮೀನು ಕಪ್ಪೆ ಮೊದಲಾದ ಜಲಚರಗಳಿಗೆ ಕೆರೆಯ ಆಸರೆ ನೀಡುತ್ತದೆ ಅವುಗಳನ್ನು ಅವಲಂಬಿಸಿದ ಬಗೆಬಗೆಯ ಪಕ್ಷಿಗಳಿಗೂ ಕೆರೆಗಳೆ ಆಶ್ರಯ ಸ್ಥಾನವಾಗಿದೆ. ನಮ್ಮ ನಾಡಿನಲ್ಲಿ ಇಂತಹ ಹಲವಾರು ಕೆರೆಗಳನ್ನು ಅಭಿವೃದ್ಧಿ ಬಡಿಸುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ರಾಜ್ಯಾದ್ಯಂತ ಕೆರೆಗಳ ನಿರ್ಮಾಣ ಹಾಗೂ ಕೆರೆ ಮಣ್ಣನ್ನು ಹೊಳೆತ್ತುವ ಕಾರ್ಯಕ್ರಮವನ್ನು ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಊರಿನವರು ಸಾಬಾಗಿತ್ವದಲ್ಲಿ ನಡೆಸಲಾಗುತ್ತೆ ಎಂದು ಕಾರ್ಯಕ್ರಮವನ್ನು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶಂಭುಲಿಂಗ ಶಿವಾಚಾರ್ಯರು ಶಿವಳ್ಳಿ ಸ್ವಾಮಿ, ಎರ್ರಿಸ್ವಾಮಿ ಜೀವ ಸಮಾದಿ ಟ್ರಸ್ಟ್ ಅಧ್ಯಕ್ಷರು H.ಬಾಳನಗೌಡ,ಯೋಜನಾಧಿಕಾರಿ ವೆಂಕಟೇಶ ಪಟೆಗಾರ,ಎರ್ರಿಸ್ವಾಮಿ ಜೀವ ಸಮಾದಿ ಟ್ರಸ್ಟ್ ಖಜಾಂನ್ಸಿ P ಸಿದ್ದಲಿಂಗನಗೌಡ, ಎರ್ರಿಸ್ವಾಮಿ ಜೀವ ಸಮಾದಿ ದಾಸೋಹ ಸಂಘದ ಅಧ್ಯಕ್ಷ K C ಪಂಪನಗೌಡ, ,ದಾಸೋಹ ಸಂಘದ ಖಜಾಂನ್ಸಿ H.ಶಶಿಧರಗೌಡ, ಶ್ರೀ ಎರ್ರಿತಾತನವರ ಕೆರೆ ಸಮಿತಿಯ ಸದಸ್ಯರಾದ ಎರ್ರಿಣ, ಜಗದೀಶಯ್ಯ, ಪಂಪಾವತಿ,ಚಿಕ್ಕನಗೌಡ,ಎರ್ರಿಸ್ವಾಮಿ, ನಾಗನಗೌಡ, CH ಎರ್ರಿಸ್ವಾಮಿ, ವಲಯದ ಮೇಲ್ವಿಚಾರಕ ನಾರಾಯಣ, ಕೃಷಿ ಮೇಲ್ವಿಚಾರಕ ಮಹೇಶ್ ,ಚೇಳ್ಳಗುರ್ಕಿ ಗ್ರಾಮದ ಹಿರಿಯರು ಸಂಘದ ಸದಸ್ಯರು ಈ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.