ಬಳ್ಳಾರಿ, ಜೂ.05 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಟೈಗರ್ ಹಿಲ್ಸ್ ಪ್ರೌಢ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಯೋಜನಾಧಿಕಾರಿಗಳು ವೆಂಕಟೇಶ್ ಪಟಗಾರ್ ಉದ್ಘಾಟಿಸಿ ಮಾತಾನಾಡಿದರು.
ಪ್ರಕೃತಿಮಾತೆ ನಮ್ಮೆಲ್ಲರನ್ನೂ ಸಲಹುವ ತಾಯಿ. ಭೂಮಿಯು ಜಗತ್ತಿನ ಸಕಲ ಜೀವಿಗಳು ವಾಸಿಸುವ ವಿಶಾಲವಾದ ಮನೆ ಎಂದರೂ ತಪ್ಪಾಗಲಿಕ್ಕಿಲ್ಲ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಭೂದೇವಿಯು ನಮ್ಮನ್ನು ತನ್ನ ಮಡಲಿಲ್ಲಿಟ್ಟುಕೊಂಡು ಜೋಪಾನ ಮಾಡುತ್ತಾಳೆ.
ಭೂದೇವಿ ನಮ್ಮನ್ನು ಅಪ್ಪಿ, ಮುದ್ದಾಡಿ ಪೋಷಿಸುತ್ತಾಳೆ. ಭೂಮಿತಾಯಿಯು ನಮ್ಮ ಬದುಕಿಗೆ ಅವಶ್ಯವಿರುವ ಎಲ್ಲವನ್ನೂ ನೀಡುತ್ತಾಳೆ. ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ.,ಆದರೆ ಮಾನವ ಮಾತ್ರ ಪ್ರಕೃತಿಯ ವಿಚಾರದಲ್ಲಿ ತದ್ವಿರುದ್ಧವಾಗಿದ್ದಾನೆ.
ಮಾನವರು ನೈಸರ್ಗಿಕ ಸಂಪನ್ಮೂಲವನ್ನು ದಿನೇ ದಿನೇ ನಾಶ ಮಾಡುತ್ತಿದ್ದಾನೆ ಕಾಡುಗಳನ್ನು ಕಡಿದು ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಹೆಚ್ಚಲು ಕಾರಣರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಪರಿಸರ ಹಾನಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದಕ್ಕೆ ಈ ವರ್ಷದ ಬಿಸಿಲಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಇನ್ನುಮುಂದಾದರು ನಾವು ಎಚ್ಚೆತ್ತುಕೊಳ್ಳಬೇಕು.
ಭೂದೇವಿಯನ್ನು ರಕ್ಷಿಸುವ ಕಾಯಕದಲ್ಲಿ ಇಂದಿನಿಂದಲೇ ತೊಡಗಬೇಕು. ಪ್ರತಿಯೊಬ್ಬರೂ ನಿಮ್ಮ ನಿಮ್ಮ ಮನೆಯ ಆವರಣದಲ್ಲಿ ಅಥವಾ ಪ್ರತಿ ವರ್ಷಕೊಂದು ನಿಮ್ಮ ಶಾಲೆಯ ಆವರಣದಲ್ಲಿ ನಾಟಿ ಮಾಡುವುದಾಗಿ ಪ್ರತಿಜ್ಞೆ ಮಾಡಿ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯನಾಶ ಮತ್ತು ಜೀವವೈವಿಧ್ಯದ ನಷ್ಟದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದು ಪರಿಸರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರು ಮಹೇಶ್, ಟೈಗರ್ ಹಿಲ್ಸ್ ಪ್ರೌಢ ಇಂಗ್ಲಿಷ್ ಮಾಧ್ಯಮ ಶಾಲೆ HM ಮೋಹನ್, ಶಾಲೆಯ ಎಲ್ಲಾ ಶಿಕ್ಷಕರು
ವಲಯದ ಮೇಲ್ವಿಚಾರಕರು ರತ್ನಾ, ಆಂದ್ರಾಳ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶೋಭಾ,ಉಮಾ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.