ಬಳ್ಳಾರಿ, ಜೂ.5: ಈ ಬಾರಿಯ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಅಚ್ಚರಿಯ ಹಿನ್ನೆಡೆ ಎದುರಾಗಿದೆ. ಕಳೆದ ವರ್ಷ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಳ್ಳಾರಿಯಿಂದ ಅಖಾಡಕ್ಕಿಳಿದಿದ್ದ ಅವರು, ಅಲ್ಲಿ ಸೋಲು ಕಂಡಿದ್ದರು. ಅದಾದ ನಂತರ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಪುನಃ ಸ್ಪರ್ಧೆಗಿಳಿದಿದ್ದ ಅವರು ಮತ್ತೆ ಸೋಲು ಕಂಡಿದ್ದು, ಶ್ರೀರಾಮುಲು ಅವರ ರಾಜಕೀಯ ಜೀವನ ಅಂತ್ಯವಾಯಿತಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಅಷ್ಟಕ್ಕೂ ರಾಮುಲು ಸೋಲಿಗೆ ಕಾರಣವಾದರೂ ಏನು?
ಒಂದು ಕಾಲದಲ್ಲಿ ರಾಜ್ಯ ರಾಜಕಾರಣವನ್ನ ನಿರ್ಧಾರ ಮಾಡುವ ಶ್ರೀರಾಮುಲು ಅವರು ಇಂದು ಅವರ ರಾಜಕೀಯ ಜೀವನ ಅಂತ್ಯವಾಯಿತಾ ಎನ್ನುವ ಅನುಮಾನ ಕಾಡತೊಡಗಿದೆ. ಅಷ್ಟಕ್ಕೂ ಶ್ರೀರಾಮುಲು, ಬಳ್ಳಾರಿ ಲೋಕಸಭಾ ಕಣದಲ್ಲಿ ಒಬ್ಬ ಸ್ಟ್ರಾಂಗ್ ಕ್ಯಾಂಡಿಡೇಟ್ ಆಗಿದ್ದರೂ ಶ್ರೀರಾಮುಲು ಹೀಗೆ ತೀವ್ರ ಹಿನ್ನಡೆ ಅನುಭವಿಸಿದ್ದೇಕೆ ಎಂಬ ಪ್ರಶ್ನೆ ಖಂಡಿತವಾಗಿ ಎದ್ದೇ ಏಳುತ್ತದೆ. ಏಕೆಂದರೆ, ಶ್ರೀರಾಮುಲು ಅವರಿಗೆ ಈ ಬಾರಿ ಜನಾರ್ದನ ರೆಡ್ಡಿಯವರ ಬಿಜೆಪಿ ಸೇರ್ಪಡೆ ಹೊಸ ಶಕ್ತಿ ತಂದಿತ್ತು.
ದಶಕಗಳಷ್ಟು ಹಳೆಯ ಗೆಳೆಯರಾದ ಜನಾರ್ದನ ರೆಡ್ಡಿ ಕೂಡ ಈ ಬಾರಿ ಶ್ರೀರಾಮುಲು ಅವರ ಗೆಲುವು ಖಚಿತ ಎಂದೇ ಹೇಳಿದ್ದರು. ಆದರೆ ಜಿಲ್ಲೆಯ ಉಳಿದ ಕಮಲ ನಾಯಕರು ರಾಮುಲು ಅವರಿಗೆ ಸಾಥ್ ನೀಡಲೇ ಇಲ್ಲಾ. ಮೋದಿ ಬಂದು ಪ್ರಚಾರ ಮಾಡಿದ ವಿಜಯನಗರ ಕ್ಷೇತ್ರದಲ್ಲಿ ಕೇವಲ 165 ಮತಗಳ ಲೀಡ್ ಪಡೆದಿದ್ದಾರೆ. ಉಳಿದ ಏಳು ಕ್ಷೇತ್ರದಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಹಿನ್ನಡೆ ಅನುಭಬಿಸಿದ ಶ್ರೀರಾಮುಲು ಒಂದು ಲಕ್ಷ ಮತಗಳ ಅಂತರ ಹಿನ್ನಡೆಯಿಂದ ಸೋಲನ್ನ ಅನುಭವಿಸಿದ್ದಾರೆ. ಹೀಗಾಗಿ ಬಹುತೇಕ ರಾಜಕೀಯ ಜೀವನ ಅಂತ್ಯವಾಯಿತಾ ಎಂಬ ಕ್ರಿಟಿಸೈಸ್ ರಾಜ್ಯಾದ್ಯಂತ ಶುರುವಾಗಿದೆ. ಲಕ್ಷ ಮತಗಳ ಅಂತರದಿAದ ಗೆಲವು ಸಾಧಿಸಿದ ಇ. ತುಕಾರಾಂ ಗೆಲುವಿನ ನಗೆ ಬೀರಿದ್ದಾರೆ.
ಕ್ಷೇತ್ರವಾರು ಮತಗಳ ಅಂತರ :
ಹಡಗಲಿ ವಿಧಾನ ಸಭಾಕ್ಷೇತ್ರದಲ್ಲಿ ಕಾಂಗ್ರೆಸ್ – 76486, ಬಿಜೆಪಿ- 68229 , ಕಾಂಗ್ರೇಸ್ ಲೀಡ್ – 8257, ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ – 97103, ಬಿಜೆಪಿ – 84903- ಕಾಂಗ್ರೆಸ್ ಲೀಡ್ – 12200, ವಿಜಯನಗರ- ಕಾಂಗ್ರೆಸ್ 89955 ಬಿಜೆಪಿ – 90120 ಬಿಜೆಪಿ ಲೀಡ್ 165, ಕಂಪ್ಲಿ – ಕಾಂಗ್ರೆಸ್ – 91047 ಬಿಜೆಪಿ – 81468 ಕಾಂಗ್ರೇಸ್ ಲೀಡ್ – 9579, ಬಳ್ಳಾರಿ ಗ್ರಾಮೀಣ – ಕಾಂಗ್ರೆಸ್ -101434 ಬಿಜೆಪಿ – 75556 – ಕಾಂಗ್ರೆಸ್ ಲೀಡ್ – 25878, ಬಳ್ಳಾರಿ ನಗರ – ಕಾಂಗ್ರೆಸ್ – 94628 ಬಿಜೆಪಿ – 80247 ಕಾಂಗ್ರೇಸ್ ಲೀಡ್ – 14381, ಸಂಡೂರು – ಕಾಂಗ್ರೆಸ್ – 95936 ಬಿಜೆಪಿ -74843 ಕಾಂಗ್ರೆಸ್ ಲೀಡ್ – 21093, ಕೂಡ್ಲಿಗಿ – ಕಾಂಗ್ರೆಸ್ – 82992 ಬಿಜೆಪಿ – 74447
ಕಾಂಗ್ರೆಸ್ ಲೀಡ್ 8545, ಒಟ್ಟು 8 ಕ್ಷೇತ್ರದ ಕಾಂಗ್ರೆಸ್ ಮತಗಳು – 730845 ಬಿಜೆಪಿ ಪಡೆದ ಮತಗಳು -631858, ಕಾಂಗ್ರೆಸ್ – 98992 ಮತಗಳ ಲೀಡ್ಗಳಿಂದ ಕಾಂಗ್ರೆಸ್ ಅಭ್ಯರ್ಥಿ ಇ ತುಕಾರಾಂ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜನರು ಕಾಂಗ್ರೆಸ್ ಪರ ಮತ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳು ಮತ್ತು ಸಿದ್ದರಾಮಯ್ಯ ಆಡಳಿತವನ್ನ ಜನ ಒಪ್ಪಿದ್ದಾರೆ. ಮುಂದೆ ಸಂಸದರಾಗಿ ಇ ತುಕಾರಾಂ ಜಿಲ್ಲೆಯ ಪರ ಕೆಲಸ ಮಾಡುತ್ತಾರೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿ ಕಣವಾಗಬೇಕಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಲಕ್ಷ ಮತಗಳ ಅಂತರದಿAದ ಗೆದ್ದು ಬಿಗಿದೆ. ಸೋತ ಶ್ರೀರಾಮುಲು ರಾಜಕೀಯ ಜೀವನ ಬಹುತೇಕ ಅಂತ್ಯ ಎಂದು ಹೇಳಲಾಗುತ್ತಿದೆ. ಎಲ್ಲ ವಿಚಾರಗಳನ್ನು ಕಾದು ನೋಡಬೇಕಿದೆ.