ಬಳ್ಳಾರಿ,ಜೂ.11: ಇದೇ ತಿಂಗಳು 04 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿರುವ ನೀಟ್ ಫಲಿತಾಂಶದಲ್ಲಿ ಆಕಾಶ್ ಬೈಜೂಸ್ 16 ವಿದ್ಯಾರ್ಥಿಗಳು 720/720 ಅಂಕಗಳನ್ನು ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ, ಮತ್ತು ಉರ್ಕರ್ಷಸಿಂಗ್ 680, ಮೃಣ್ಮಯಿ ಪಾಟಿಲ್ 327, ಮಹಮ್ಮದ್ ಅಶ್ಪಾಕ್ 615, ವರುಣ್ ಗೌಡ ಎಚ್.ಜಿ 615, ಟಿ ಶಿವುಕುಮಾರ್ 606, ಡಿ.ವಿ ಸಂತೋಸ್ 594, ಮತ್ತು ಕೀರ್ತಿ ಪೋಳೂರು 587 ಅಂಕಗಳನ್ನು ಗಳಿಸಿ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಬದ್ರ ಬುನಾದಿಯನ್ನು ಹಾಕಿಕೊಂಡಿದ್ದಾರೆ, ಇದಕ್ಕೇಲ್ಲಾ ಕಾರಣ ನಮ್ಮ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ ಎಂದು ಹೇಳಿದರು ತಪ್ಪಾಗಲಾರದು ಇದು ನಮ್ಮ ಹೆಮ್ಮೆಯ ವಿಷಯ ಅವರನ್ನು ಅಭಿನಂಧಿಸುತ್ತೇವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ಧೇಶಕರು ಮತ್ತು ಸಿ.ಇ.ಒ ದೀಫಕ್ ಮೆಹ್ರೋತ್ರಾ ತಿಳಿಸಿದರು.
ಅವರು ಇಂದು ನಗರದ ಪಾರ್ವತಿನಗರದ ಮುಖ್ಯರಸ್ತೆಯಲ್ಲಿರುವ ಆಕಾಶ್ ಬೈಜೂಸ್ ನೀಟ್ ಕೋಚಿಂಗ್ ಸೆಂಟರ್ ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಸಮಾತನಾಡಿ, ಶಿಸ್ತುಬದ್ಧ ಅಧ್ಯಯನ, ಕಠಿಣ ಪ್ರಶ್ರಮ, ಸಮರ್ಪಣಾ ಭಾವದಿಂದ ಕಟ್ಟುನಿಟ್ಟಾದ ಅನುಸರಣೆಯಿಂದ ನಮ್ಮ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಗೈದಿದ್ದಾರೆ, ಇದು ಸಂಸ್ಥೆಗೆ ಗೌರವದ ಸಂಗತಿ ಎಂದರು. ನಮ್ಮ ಅಧ್ಯಯನಕ್ಕೆ ಆಕಾಶ್ ಸಂಸ್ಥೆ ನಮಗೆ ಉತ್ತಮ ತರಬೇತಿ ನೀಡಿ ನೀಟ್ ಪರೀಕ್ಷೆ ಎದುರಿಸಲು ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದ್ದಕ್ಕಾಗಿ ನಾವು ಇಷ್ಟು ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಟಾಪರ್ಸ್ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಥೆ ಕಳೆದ 35 ವರ್ಷಗಳ ಹಿಂದೆ ಆರಂಭವಾಗಿ ಇಡೀ ದೇಶದಲ್ಲಿ 315 ತರಬೇತಿ ಕೇಂದ್ರಗಳನ್ನು ಹೊಂದಿ ಅದರಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ, ನಮ್ಮ ಸಂಸ್ಥೇಯ ಅನುಭವಿ ಬೋಧಕರ ತಂಡವನ್ನು ಹೊಂದಿದ್ದು ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲು ಎಲ್ಲಾ ರೀತಿಯ ತರಬೇತಿ ಮತ್ತು ಸಹಾಯ ಮಾಡುವುದರಿಂದ ವಿದ್ಯಾರ್ಥಿಗಳ ನಿಜವಾದ ಸಾಮಾರ್ಥ್ಯವನ್ನು ಹೊರತಂದು ಅವರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲಾಗುತ್ತಿದೆ, ಎಂದರು. ಈ ಸಂದರ್ಭದಲ್ಲಿ ಆಕಾಶ್ ಸಂಸ್ಥೆಯ ರಾಜೇಶ್ ಕುಮಾರ್ ,ಸಿನೀಯರ್ ಅಸಿಸ್ಟೆಂಟ್ ಅಭಿಷೇಕ್ ಎಂ.ಕೆ, ಬ್ರಾಂಚ್ ಹೆಡ್ ಕೃಷ್ಣ ಚೈತನ್ಯ, ಸಿರಿಗೇರಿ ಪ್ರಜ್ಚಲ್ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.