ಬಳ್ಳಾರಿ,ಜೂ.19 :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪರಮ ಪೂಜ್ಯ ರಾಜರ್ಷಿ ಡಾ/ ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ/ ಹೇಮಾವತಿ. ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಪ್ರಗತಿ ಬಂದು ಸ್ವ- ಸಹಾಯ ಸಂಘಗಳ ಒಕ್ಕೂಟ ಹಾಗೂ ಐ- ದೃಷ್ಟಿ ಆಸ್ಪತ್ರೆ ಹೊಸಪೇಟೆ ಇವರ ಸಹಭಾಗಿತ್ವದಲ್ಲಿ ಇಂದು ಬಳ್ಳಾರಿ-1 ಯೋಜನಾ ಕಛೇರಿಯ ಗಾಂಧಿನಗರ ವಲಯದ ಅಹಂಬಾವಿ ಕಾರ್ಯಕ್ಷೇತ್ರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಸಂದೀಪ್ ಐತಾಳ್ ಪ್ರಾದೇಶಿಕ ವ್ಯವಸ್ಥಾಪಕರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಬಳ್ಳಾರಿ ಜಿಲ್ಲಾ ನಿರ್ದೇಶಕರು ರೋಹಿತಾಕ್ಷ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಣ್ಣು ಮಾನವನ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಎಲ್ಲಾ ವಸ್ತುಗಳನ್ನು ನೋಡಲು ಮತ್ತು ಅದರ ಸುಂದರತೆಯನ್ನು ಅನುಭವಿಸಲು ಕಣ್ಣು ನಮಗೆ ಅತ್ಯಂತ ಮುಖ್ಯವಾದ ಅಂಗವಾಗಿದೆ.
ಮಾನವ ದೇಹದಲ್ಲಿ ಐದು ಸಂವೇದನಾ ಅಂಗಗಳಿವೆ ಅವುಗಳು ಕಣ್ಣು, ಮೂಗು, ಕಿವಿ, ಚರ್ಮ ಮತ್ತು ನಾಲಿಗೆ. ಮಾನವ ಕಣ್ಣುಗಳು ಮತ್ತು ಕಿವಿಗಳು ದ್ವಿಪಕ್ಷೀಯ ಸಮ್ಮಿತಿಯನ್ನು ಹೊಂದಿವೆ ಮತ್ತು ಮಾನವ ಮುಖದ ಎರಡೂ ಬದಿಗಳಲ್ಲಿವೆ. ಮಾನವನ ಕಣ್ಣು ಮತ್ತು ಕಿವಿಗಳು ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ಹೊಂದಿವೆ. ಇದರಿಂದಾಗಿ
ಸಾಕಷ್ಟು ಕಣ್ಣಿನ ಆರೈಕೆ ಅಥವಾ ನಿಮ್ಮ ಕಣ್ಣುಗಳಿಗೆ ಸರಿಯಾದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿಮ್ಮ ನಿಮ್ಮ ಗ್ರಾಮಗಳಲ್ಲಿ ವೈದ್ಯರ ತಂಡದೊಂದಿಗೆ ಬಂದು ಕಣ್ಣಿನ ತಪಾಸಣೆ ಮಾಡಲಾಗುತ್ತಿದೆ ಇದನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಸದುಪಯೋಗ ಪಡೆದು ಕೊಳ್ಳಬೇಕೆಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಯೋಜನಾಧಿಕಾರಿಗಳು ವೆಂಕಟೇಶ ಪಟಗಾರ್ , ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಲೀಲಾವತಿ,
ಗಾಂಧಿನಗರ ವಲಯದ ಮೇಲ್ವಿಚಾರಕರು ತಿಮ್ಮಪ್ಪ , ಜ್ಞಾನ ವಿಕಾಸ ಸಮನ್ವಯ ಅಧಿಕಾರಿಗಳು ಆಶಾ, ದೇವಿ ನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಭಾಗ್ಯಮ್ಮ, ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.