ಬಳ್ಳಾರಿ, ಜೂ.30: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದಿಂದ ಮಾಜಿ ಸಚಿವ ಬಿ.ನಾಗೇಂದ್ರ ಅವರು ಮುಕ್ತರಾಗಿ ಮತ್ತೆ ಸಚಿವರಾಗಬೇಕೆಂದು ಹಾರೈಸಿ ಅವರ ಅಭಿಮಾನಿ ಎಂ.ಜಿ ಕನಕ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಾನಕ್ಕೆ ಬಿ.ನಾಗೇಂದ್ರ ಅವರ ಭಾವಚಿತ್ರವನ್ನು ಹಿಡಿದುಕೊಂಡು ತೆರಳಿ, ಮುಡಿ ಅರ್ಪಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನಿಗಮದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ಕೆಲ ಖಾಸಗಿ ವ್ಯಕ್ತಿಗಳು ಸೇರಿಕೊಂಡು ದುರ್ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಗರಣದಲ್ಲಿ ತಾವು ಭಾಗಿಯಾಗದಿದ್ದರೂ ಬಿ.ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತನಿಖೆ ನ್ಯಾಯಯುತವಾಗಿ ನಡೆದು, ಈ ಪ್ರಕರಣದಲ್ಲಿ ತಮ್ಮ ನೆಚ್ಚಿನ ನಾಯಕ ಬಿ.ನಾಗೇಂದ್ರ ಅವರು ಆರೋಪಮುಕ್ತರಾಗಿ ಹೊರ ಬರುತ್ತಾರೆಂಬ ವಿಶ್ವಾಸವನ್ನು ಎಂ.ಜಿ ಕನಕ ಅವರು ವ್ಯಕ್ತಪಡಿಸಿದ್ದಾರೆ.