ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜು.೩: ಜಿಲ್ಲೆಯ ನೂತನ ಎಸ್ಪಿಯಾಗಿ ಬುಧವಾರ ಸಾಯಂಕಾಲ ಡಾ.ಶೋಭಾರಾಣಿ ವಿ.ಜೆ.ಅವರು ಪದಗ್ರಹಣ ಮಾಡಿದ್ದಾರೆ. ರಂಜಿತ್ ಕುಮಾರ್ ಬಂಡಾರು ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಬೆಂಗಳೂರಿನ ಬೃಹತ್ ಮಹಾನಗರ ಪಾಲಿಕೆಯ ಕಾರ್ಯತಂಡದ ಹೆಚ್ಚುವರಿ ಡಿಜಿಪಿಯಾಗಿದ್ದ ಡಾ.ಶೋಭಾರಾಣಿ ಅವರನ್ನು ಬಳ್ಳಾರಿ ಎಸ್ಪಿಯಾಗಿ ನೇಮಿಸಿ ಸರ್ಕಾರ ಮಂಗಳವಾರ ಆದೇಶ ನೀಡಿತ್ತು.
೨೦೦೮ ರಲ್ಲಿ ಕೆಎಸ್ಪಿಎಸ್ ಉತ್ತೀರ್ಣರಾಗಿರುವ ಇವರು ಮೂಲತಃ ನೆಲಮಂಗಲದವರು. ಕೃಷ್ಣದೇವರಾಯ ಕಾಲೇಜ್ ಆಫ್ ಡೆಂಟಲ್ ಸೈನ್ಸ್ , ಬೆಂಗಳೂರಿನಲ್ಲಿ ದಂತ ವೈದ್ಯಕೀಯದಲ್ಲಿ ಪದವಿ ಪಡೆದಿದ್ದು. ೨೦೧೬ ರ ಐಪಿಎಸ್ ಬ್ಯಾಚಿನವರು. ಮಂಡ್ಯ ಡಿವೈಎಸ್ಪಿಯಾಗಿ, ಕಬ್ಬನ್ ಪಾರ್ಕ್ ಎಸಿಪಿಯಾಗಿ, ಹಾಸನದ ಅಡಿಷನಲ್ ಎಸ್ಪಿಯಾಗಿ, ಬೆಂಗಳೂರಿನ ಸಂಚಾರಿ ವಿಭಾಗದ ಡಿಸಿಪಿಯಾಗಿ, ತುಮಕೂರು, ಮಂಡ್ಯ ಅಡಿಷನಲ್ ಎಸ್ಪಿಯಾಗಿ, ಬೆಸ್ಕಾಂ ವಿಜಿಲೆನ್ಸ್, ಮತ್ತು ಸೆಂಟ್ರಲ್ ಎಸಿಬಿ ಸೆಂಟ್ರಲ್ ರೇಂಜ್, ಬಿಎಂಟಿಎಫ್ ಬೆಂಗಳೂರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಪ್ರಸ್ತುತ ಬಳ್ಳಾರಿ ಜಿಲ್ಲೆಯ ಮೊದಲ ಮಹಿಳಾ ಎಸ್ಪಿಯಾಗಿ ಡಾ||ಶೋಭಾರಾಣಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಕೆ.ಪಿ.ರವಿಕುಮಾರ್, ಮತ್ತಿತರ ಸಿಬ್ಬಂದಿ ನೂತನ ಎಸ್ಪಿಗೆ ಶುಭಾಶಯ ತಿಳಿಸಿದರು. ಇದುವರೆಗೆ ಬಳ್ಳಾರಿ ಜಿಲ್ಲೆಯ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ರಂಜಿತ್ ಕುಮಾರ್ ಬಂಡಾರು ರವರಿಗೆ ವರ್ಗಾವಣೆಯ ಸ್ಥಳವನ್ನು ತೋರಿಸದೇ ಇರುವುದು ಅಚ್ಚರಿ ಮೂಡಿಸಿದೆ.