ಬಳ್ಳಾರಿ, ಜು. 03 : ತಾಲ್ಲೂಕಿನ ಕೆ.ವೀರಾಪುರ, ಕಾರೆಕಲ್ಲು, ಶಿಡಗಿನಮೊಳ, ಮೀನಳ್ಳಿ, ಜೊಳದರಾಶಿ, ಚಳ್ಳಗುರ್ಕಿ ಈ ಆರು ಗ್ರಾಮದ ರೈತರು ಮಳೆತಾಶ್ರಿತ ಭೂಮಿ ಹೊಂದಿದ್ದು ನಮಗೆ ಮಳೆಬಂದರೆ ಬೆಳೆ ಇಲ್ಲವಾದರೆ ಬರಗಾಲ ನಾವು ವರ್ಷದಿಂದ ವರ್ಷಕ್ಕೆ ವ್ಯವಸಾಯದಲ್ಲಿ ನಷ್ಟ ಅನುಭವಿಸಿ ಆರ್ಥಿಕವಾಗಿ ಕುಗ್ಗಿದೇವೆ ಅದಕ್ಕೆ ನಮಗೆ ಸಮಯಕ್ಕೆ ಸಿಕ್ಕಿದ್ದು ಪ್ರದಾನ ಮಂತ್ರಿ ಫಸಲು ಭೀಮ ಯೊಜನೆ ಇದರಲ್ಲಿ ನಾವು ನಮ್ಮ ಬೆಳೆಗಳಿಗೆ ವಿಮೆ ಕಟ್ಟಿದರೆ ನಮಗೆ ಸ್ವಲ್ಪ ಅನುಕೂಲ ಅಸಗುತ್ತದೆ ಎಂದು ನಗರದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಮ್ಮ ಸುದ್ದಿವಾಹಿನಿ ಜೊತೆ ಮಾತನಾಡಿದ ಕೆ.ವೀರಾಪುರದ ಎಸ್.ಬಿ.ನಾಗರಾಜ ನಮ್ಮ ರೈತರೆಲ್ಲರೂ ವಿಮೆ ಕಟ್ಟಿದ್ದಾರೆ ಕಳೆದ ವರ್ಷ ನಾವು ಬಿತ್ತಿದ ಬೀಜದ ಹಣವು ನಮಗೆ ಸಿಕ್ಕಿಲ್ಲ ಆದರೂ ನಮಗೆ ಸರಿಯಾದ ವಿಮೆ ಪರಿಹಾರ ಬಂದಿಲ್ಲ ಕಾರಣ ನಮ್ಮ ಕೆಲವು ಗ್ರಾಮಗಳು ಅಂದರೆ ಕೆ.ವೀರಾಪುರ, ಕಾರೇಕಲ್ಲು ಮೊಕ ಹೋಬಳಿ ಚಳ್ಳಗುರ್ಕಿ, ಜೋಳದರಾಶಿ, ಮೀನಳ್ಳಿ, ಶಿಡಗಿನಮೊಳ, ಈ ನಾಲ್ಕು ಹಳ್ಳಿಗಳು ರೂಪನಗುಡಿ ಹೋಬಳಿಗೆ ಸೇರುತ್ತವೆ ಅದಕ್ಕೆ ಮೋಕ ಹೋಬಳಿ ಯಲ್ಲಿ ಶೇಕಡ 75% ರೂಪನಗುಡಿ ಹೋಬಳಿ ಯಲ್ಲಿ ಸುಮಾರು ಶೇಕಡ 60% ನೀರಾವರಿ ಯಾಶ್ರಿತ ಭೂಮಿಯಾಗಿದ್ದು ಇದೇ ಕಾರಣಕ್ಕೆ ನಮ್ಮ ಈ ಅರು ಹಳ್ಳಿಗಳ್ಳಿಗೆ ಯಾವುದೆ ಸವಲತ್ತುಗಳು ದೊರಕುತ್ತಿಲ್ಲ ಅದಕ್ಕೆ ನಮ್ಮ ಈ ಆರು ಹಳ್ಳಿಗಳಿಗೆ ಸಿಗುವ ವಿಮಾ ಮೊತ್ತ ಮತ್ತೆ ನಷ್ಟು ಪರಿಹಾರ ಶಿಘ್ರದಲೆ ಬಿಡುಗಡೆ ಮಡಬೇಕೆಂದು ಮನವಿ ಮಾಡಿದರು.
ಎರಡು ವರ್ಷಗಳ ಹಿಂದೆ ಅತಿವೃತ್ತಿಯಿಂದ ಆದ ನಷ್ಟಕೆ ನಮಗೆ 13499 ರೂಪಾಯಿಗಳು ಬಂದಿದು ಅದೇ ನೀರಾವರಿ ಯಾಶ್ರಿತ ರೈತರಿಗೆ 27000 ಬಂದಿದೆ, ಒಂದು ವೇಳೆ ವಿಮೆ ಮೊತ್ತಕ್ಕೆ ನಮ್ಮದು ನಿರಾವರಿ ಯಾದರೆ ನಷ್ಟಪರಿಹಾರಕ್ಕೆ ಏಕೆ ಇಲ್ಲ ಇದಕ್ಕೆ ಕಾರಣ ಕೃಷಿ ಮತ್ತು ಕಂದಯ ಇಲಾಖೆ ಅದಕ್ಕೆ ಈ ಆರು ಹಳ್ಳಿಗಳಿಗೆ ವಿಷಶವಾಗಿ ಪರಿಶಿಲಿಸ ಬೆಕೆಂದು ಕೃಷಿ ಮತ್ತು ಕಂದಾಯ ಇಲಾಖೆಯರಿಗೆ ತಿಳಿಸಿ
ಮತ್ತೆ ನಮ್ಮ ಈ ಆರು ಹಳಿಗಳಿಗೆ ಶಾಶ್ವತ ನಷ್ಟು ಪರಿಹಾರವನ್ನು ಬರುವಹಾಗೆ ಮಾಡಲು ಸರ್ಕಾರಕ್ಕೆ ತಿಳಿಸಿ ಒತ್ತಯ ಮಾಡ ಬೇಕು,
ಏಕೆಂದರೆ ಒಂಬ ರೈತ ಸತ್ತರೆ ಹತ್ತು ಸಾವಿರ ಜನಗಳಿಗೆ ಅನ್ನದ ಅಭಾವ ಹುಂಟಾಗುತೈತೆ ಅದಕ್ಕೆ ವಿಷೇಶ ತನಿಕೆ ರಚಿಸಿ ರೈತರನು ರಕ್ಷಿಸಬೇಕೆಂದರು. ಈ ಸಂದರ್ಭದಲ್ಲಿ ವೈ.ಬಸವಂತರೆಡ್ಡಿ ,ಎಚ್. ಜೋತಿಪ್ರಕಾಶಗೌಡ ,ಎಂ.ಪಿ.ಅರ್ಜುನ ರೆಡ್ಡಿ ,ಕಾಜಸಾಬ್,ಮತ್ತು ಚಳ್ಳಗುರ್ಕಿಯ ದೊಡ್ಡ ಬಸಪ್ಪ ತಿಮ್ಮನಗೌಡ, ಎರ್ರೆಣ್ಣ ,ಮಲ್ಲಕಾರ್ಜುನ ಹಾಜರಿದ್ದರು.