ಬಳ್ಳಾರಿ, ಜು.04: ಆಂಧ್ರದ ಕರ್ನೂಲು ಜಿಲ್ಲೆಯ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳವರ ಸನ್ನಿಧಾನಕ್ಕೆ ಗುರುವಾರ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಭೇಟಿ ನೀಡಿ ಗುರು ರಾಯರ ವೃಂದಾವನದ ದರ್ಶನ ಪಡೆದರು.
ಈ ವೇಳೆ ಮಾವಿನ ಹಣ್ಣುಗಳ (ಫಲ ಅರ್ಪಣೆ) ಅರ್ಪಣೆ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಕಾಂಗ್ರೆಸ್ ಮುಖಂಡರಾದ ರಾಂಪ್ರಸಾದ್, ಎಪಿಎಂಸಿ ನೂತನ ಅಧ್ಯಕ್ಷ ಕಟ್ಟೇಮನೆ ನಾಗೇಂದ್ರ, ಮೋಕಾ ನಾಗರಾಜ್, ಎಸ್.ಆರ್.ನಾರಾಯಣ ರೆಡ್ಡಿ, ಉದ್ಯಮಿ ವೀರಾ ರೆಡ್ಡಿ, ಆಪ್ತರಾದ ರತ್ನಬಾಬು, ಎಲ್.ಎನ್.ಶಾಸ್ತ್ರಿ ಸೇರಿದಂತೆ ಹಲವರು ಹಾಜರಿದ್ದರು.