ಬಳ್ಳಾರಿ, ಜು.05: ಜಿಲ್ಲಾ ಲಾರಿ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸುಲು ಮಿಂಚು, ಅವಿರೋಧವಾಗಿ ಆಯ್ಕೆ ಲಾರಿ ಮಾಲೀಕರ ಸಂಘದಲ್ಲಿ ಮಿಂಚಿದ್ದಾರೆ
ಅಲ್ಲದೆ ಮತ್ತೊಬ್ಬರಾದ ಮಹಾನಗರ ಪಾಲಿಕೆ ಸದಸ್ಯರಾದ ನೂರ್ ಮಹಮ್ಮದ್ ಅವರು ಉಪಾಧ್ಯಕ್ಷರಾಗಿ
ಎನ್ಎಂಟಿ ಲಾರಿಗಳ ಮಾಲೀಕ ರವರು ಮೆಹಬೂಬ್ ಬಾಷಾ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.
ಲಾರಿ ಮಾಲೀಕರ ಸಂಘದ ಕಚೇರಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ್, ಲಾರಿ ಮಾಲೀಕರ ಮತ್ತು ಡ್ರೈವರ್ ಗಳ ಮಾಜಿ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು,
ಈ ವೇಳೆ ಮಾತನಾಡಿದ ಶ್ರೀನಿವಾಸುಲು ಮಿಂಚು, ನನಗೆ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ನಾನು ನಿಮ್ಮ ಸೇವಕನಾಗಿ ಕೆಲಸ ಮಾಡುವೆ. ಯಾರನ್ನು ದ್ವೇಷ ಹಾಗೂ ರಾಜಕೀಯ ಮಾಡದೆ ಸಂಘದ ಅಭಿವೃದ್ಧಿಗಾಗಿ ಹಗಲಿರುಳು ಎನ್ನದೆ ಶ್ರಮಿಸುವೆ.
ನಮ್ಮಲ್ಲಿ ಯಾವುದೇ ಬಣ ಇಲ್ಲ, ಗುಂಪುಗಾರಿಕೆಗೆ ಯಾವತ್ತು ಬೆಂಬಲಿಸುವುದಿಲ್ಲ,
ನಾವೆಲ್ಲ ಒಂದಾಗಿ ಸಂಘವನ್ನು ಬಲಪಡಿಸೋಣ. ನಮ್ಮ ಹಿರಿಯ ನಾಯಕರು ನೀಡಿದ ಸೂಚನೆ ಮೇರೆಗೆ ಲಾರಿ ಮಾಲೀಕರು ಮತ್ತು ಚಾಲಕರು, ಕ್ಲೀನರುಗಳಿಗೆ ವಿಶ್ರಾಂತಿ ಕೊಠಡಿ ಬಾತ್ ರೂಮ್ ಹಾಗೂ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವೆ. ಸಾಗಾಣಿಕೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ನಿವಾರಣೆಗೆ ಶ್ರಮಿಸುವೆ ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿಗಳಾದ ಮಹಬೂಬ್ ಬಾಷಾ ಮಾತನಾಡಿ ಇಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಿದೆ.
ಜಿಲ್ಲೆಯಲ್ಲಿ ಬಾಡಿಗೆಗಳು ಮೊದಲು ಬಳ್ಳಾರಿ ಲಾರೀ ಮಾಲೀಕರಿಗೆ ಸಿಗಬೇಕು, ನಮ್ಮ ಹೊಟ್ಟೆ ತುಂಬಿದ ಮೇಲೆ ಬೇರೆಯವರಿಗೆ ಅವಕಾಶ ನೀಡುವಂತಾಗಬೇಕು, ಯಾರಾದರೂ ಇಲ್ಲಿ ದೌರ್ಜನ್ಯ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ
ಮಾಜಿ ಅಧ್ಯಕ್ಷ ಪೆದ್ದನ್ನ, ಅವರು ಅಧಿಕಾರವನ್ನು ಹಾಲಿ ಅಧ್ಯಕ್ಷರಿಗೆ ಹಸ್ತಾಂಸಿದರು ಈ ವೇಳೆ ಕಾಂಗ್ರೆಸ್ ಮುಖಂಡ ಬಿಆರ್ ಎಲ್ ಸೀನಾ, ಮಾಜಿ ಪ್ರಧಾನ ಕಾರ್ಯದರ್ಶಿ ಬಸವರಾಜ ಸೇರಿದಂತೆ ಅನೇಕ ಜನರಿದ್ದರು .