ಬಳ್ಳಾರಿ, ಜು. 06: ಬಳ್ಳಾರಿ ಲಾರಿ ಮಾಲೀಕರ ಸಂಘದ ನೂತನ ಅಧ್ಯಕ್ಷ ಮಿಂಚು ಶ್ರೀನಿವಾಸ್ ಅವರು ಶನಿವಾರ ಸಂಜೆ ಬಸ್ ನಿಲ್ದಾಣದ ಬಳಿ ಇರುವ ಲಾರಿ ಟರ್ಮಿನಲ್ ಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಿನ್ನೆಯಷ್ಟೇ ಅಧಿಕಾರ ಸ್ವೀಕರಿಸಿರುವ ಅವರು ಇಂದು ಕಾರ್ಯಾಚಟುವಟಿಕೆ ಆರಂಭಿಸಿದ್ದಾರೆ. ಸಂಘದ ಪದಾಧಿಕಾರಿಗಳು, ಪಾಲಿಕೆಯ ಅಭಿಯಂತರ ಶ್ರೀನಾಥ್ ಹಾಗೂ 3ನೇ ವಾರ್ಡ್ ಪಾಲಿಕೆ ಸದಸ್ಯ ಎಂ. ಪ್ರಭಂಜನಕುಮಾರ್ ಅವರು ಟರ್ಮಿನಲ್ ನ ಆದ್ಯತ ಸಂಚರಿಸಿ ಮೂಲಭೂತ ಸಮಸ್ಯೆಗಳ ಬಗ್ಗೆ ಲಾರಿ ಮಾಲೀಕರಿಂದ ಮಾಹಿತಿ ಪಡೆದರು.
ರಸ್ತೆ, ಚರಂಡಿ, ಒಳ ಚರಂಡಿಯನ್ನು ಸ್ವಚ್ಛಗೊಳಿಸಿ, ಸಮರ್ಪಕವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡಲಾಯಿತು.
ಪಾಲಿಕೆ ವತಿಯಿಂದ ತಕ್ಷಣ ಕ್ರಮ ಜರುಗಿಸುವುದಾಗಿ ಪಾಲಿಕೆ ಅಭಿಯಂತರ ಶ್ರೀನಾಥ್ ಭರವಸೆ ನೀಡಿದರು.
ಪಾಲಿಕೆ ಸದಸ್ಯ, ಸಂಘದ ಉಪಾಧ್ಯಕ್ಷ ನೂರ್ ಮೊಹಮ್ಮದ್, ಪ್ರದಾನ್ ಕಾರ್ಯದರ್ಶಿ ಮೆಹಬೂಬಸಾಬ್ ಫಯಾಜ್ ಬಾಬು ಪ್ರವೀಣ್ ವೆಂಕಟೇಶ್ ಲಷ್ಮಿ ನಾರಾಯಣ ಇನ್ನು ಹಲವರು ಹಾಜರಿದ್ದರು.