ಬಳ್ಳಾರಿ, ಜು,06 : ನಮಗೆ ತಿಂಗಳಿಗೊಮ್ಮೆ ಇಷ್ಟು ಕೊಟ್ಟು ಬಿಡಿ ನೀವೇನಾದ್ರೂ ಮಾಡಿಕೊಳ್ಳಿ ಎಂಬ ಅಧಕ್ಷರುಗಳೇ ಹೆಚ್ಚಾಗಿದ್ದರಿಂದ ಇಲ್ಲಿನ ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ(ಬುಡಾ) ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಲು ಕಾರಣವಾಗಿದೆ. ಅದಕ್ಕಾಗಿ ಈ ಬಗ್ಗೆ ಪರಿಶೀಲನೆ ಮತ್ತು ತನಿಖೆಗೆ ನಗರಾಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಒತ್ತಾಯಿಸುತ್ತಿರುವುದಾಗಿ ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ. ಇಲ್ಲಿ ಇತಿಮೀತಿ ಮೀರಿ ನಡಾವಳಿ ಮಾಡಲಾಗಿದೆ. ಕಚೇರಿಯನ್ನು ವ್ಯಾಪಾರೀಕರಣದ ಕೇಂದ್ರವಾಗಿ ಮಾಡಲಾಗಿದೆ. ಒಂದು ಸಭೆಗೆ ಒಂದು ಎರೆಡು ಕೋಟಿ ಸಂಗ್ರಹಿಸುವ ಮಟ್ಟಕ್ಕೆ ಹೋಗಿದೆ. ಲಂಚದ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಸಿಲುಕಿದ ಈ ಹಿಂದಿನ ಆಯುಕ್ತ ರಮೇಶ್ ಅವರು ಬಂದ ಮೇಲೆ ಕಳೆದ ಒಂದು ವರೆ ವರ್ಷದಿಂದ ಕಾನೂನು ರೀತಿ ನಡೆದುಕೊಳ್ಳದೆ.
ಡೆವಲಪರ್ ಗಳಿಗೆ ಧಮಕಿ ಮತ್ತು ಬ್ಲಾಕ್ ಮೇಲ್ ಮಾಡುತ್ತಿದ್ದರು. ಟಿಎಸ್ ನಂ ಜಮೀನನ್ನು ಸಬ್ ಡಿವಿಷನ್ ಮಾಡಬಾರದು, ಆದರೂ ಮಾಡುತ್ತಾರೆ. ಇದರಿಂದ ರಸ್ತೆ, ಪಾರ್ಕ್ ಬರದೆ, ನೂರಕ್ಕೂ ಹೆಚ್ಚು ಏಕ ನಿವೇಶನ ಲೇಔಟ್ ಮಾಡಿದ್ದಾರೆ. ಈ ಹಿಂದೆ ಆಯುಕ್ತರಾಗಿದ್ದ ರಮೇಶ್ ಅವರು 12 ಜನ ಡೆವಲಪರ್ಗಳನ್ನೇ ವಸೂಲಿಗಾಗಿ ಪಿಎಗಳನ್ನಾಗಿ ಮಾಡಿಕೊಂಡಿದ್ದರು. ಹಣ ಕೊಟ್ಟವರ ಕಡತಗಳಷ್ಟೇ ಸಭೆಗೆ ತರುತ್ತಿದ್ದರು ಎಂದು ಆರೋಪಿಸಿದರು