ಸಿರುಗುಪ್ಪ,ಜು,15 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ 21 ರಂದು ನಡೆಯಲಿರುವ ಚುನಾವಣೆ ಪ್ರಚಾರ ಕಾರ್ಯವು ತಾಲೂಕಿನ ತೆಕ್ಕಲಕೋಟೆಯ ಶ್ರೀ ಶರಣಬಸವೇಶ್ವರ ಸಭಾ ಮಂಟಪದಲ್ಲಿ ಸೋಮವಾರ ನಡೆಯಿತು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದ್ವಿತೀಯ ಬಾರಿಗೆ ಆಯ್ಕೆ ಬಯಸಿ ಸ್ಪರ್ಧಿಸಿರುವ ಚಾನಾಳು ಶೇಖರ್ ಇವರ ಹಾನಗಲ್ಲ ಗುರು ಶ್ರೀ ಕುಮಾರೇಶ್ವರ ತಂಡಕ್ಕೆ ಭರ್ಜರಿ ಬೆಂಬಲ ವ್ಯಕ್ತವಾಯಿತು.
ಕಳೆದ ಅವಧಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಅತ್ಯುತ್ತಮವಾಗಿ ಕರ್ತವ್ಯ ನಿಭಾಯಿಸಿ ಮಹಾಸಭಾವನ್ನು ಉತ್ತಮ ವೇಗದಲ್ಲಿ ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿರುವ ಇದೇ ಜಾನಾಳು ಶೇಖರ ತಂಡಕ್ಕೆ ತೆಕ್ಕಲಕೋಟೆಯ ಬಹುತೇಕ ಮತದಾರರು ಬೆಂಬಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಾನಾಳು ಶೇಖರ್ ಮಾತನಾಡಿ ನಿಮ್ಮೆಲ್ಲರ ವಿಶ್ವಾಸ ಮತ್ತು ಬೆಂಬಲದಿಂದಾಗಿ ಹೆಚ್ಚಿನ ಕೆಲಸ ಮಾಡಲು ಶಕ್ತನಾಗಿದ್ದೇನೆ ಈ ಬಾರಿ ಇನ್ನು ಹೆಚ್ಚಿನ ಕಾರ್ಯರೂಪಗಳ ಗುರಿ ಹೊಂದಿದ್ದೇವೆ ಎಲ್ಲರೂ ಸೇರಿ ಮಹಾಸಭಾ ಕಾರ್ಯಗಳನ್ನು ಗುರು ಕುಮಾರೇಶ್ವರ ಆಶೀರ್ವಾದ ಪಡೆದು ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೋರಿ ವಿರೂಪಾಕ್ಷಪ್ಪ,ರೂಪನಗುಡಿ ಬಸವರಾಜ, ತೆಕ್ಕಲಕೋಟೆ ಸಿದ್ದಯ್ಯ ತಾತನವರು, ಜಿಎಂ ವಿರೇಶ ತೆಕ್ಕಲಕೋಟೆ, ಮಲ್ಲಿಕಾರ್ಜುನ ,ಎಂ ಆರ್ ಬಸವನಗೌಡ, ವೀರನಗೌಡ ,ಇಬ್ರಾಂಪುರ ಕರೇಗೌಡ ಮುಂತಾದ ಮುಖಂಡರು ಇದ್ದರು.