ಸಿರುಗುಪ್ಪ,ಜು.15: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಐದು ವರ್ಷಗಳ ಅವಧಿಯ ಚುನಾವಣೆಯ ನಿಮಿತ್ತ ಶ್ರೀ ಶ್ರೀ ಶ್ರೀ ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡದಿಂದ ಉತ್ತನೂರು, ದರೂರು ಕರೂರು ಮುಂತಾದ ಗ್ರಾಮಗಳಲ್ಲಿ ಪ್ರಮುಖ ವೀರಶೈವ ಮುಖಂಡರು ಹಾಗೂ ಮತದಾರರನ್ನು ಭೇಟಿಯಾಗಿ ತಂಡದ ಧೇಯೋದ್ದೇಶಗಳನ್ನು ತಿಳಿಸಿ, ನಮ್ಮ ತಂಡಕ್ಕೆ ಯಾಕೆ ಮತ ನೀಡಬೇಕೆಂದು ಮತದಾರರಿಗೆ ಸವಿವರವಾಗಿ ತಿಳಿಸಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಊರಿನ ಮುಖಂಡರು ಪಂಪನಗೌಡ, ವೀರನಗೌಡ, ಮಲ್ಲನಗೌಡ ,ನರಸನಗೌಡ, ಪ್ರಕಾಶ್ ಗೌಡ ,ಊರಿನ ಎಲ್ಲಾ ಲಿಂಗಾಯಿತ ಮುಖಂಡರುಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.
ತಂಡದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನದ ಆಕಾಂಕ್ಷಿಗಳಾದ ದಾಸಾಪುರ ಡಿ ಅರುಣ್ ಕುಮಾರ್, ಸಿರುಗುಪ್ಪ ತಾಲೂಕಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಯಾದ ಗುಂಡಿಗನೂರು ಪ್ರಕಾಶ್ ಗೌಡ್ರು, ಸಿರಿಗೇರಿ ನಾಗರಾಜಸ್ವಾಮಿ, ಎಸ್ ಶರಣಬಸವನಗೌಡ, ವಿಶ್ವನಾಥ್ ಗೌಡ, ಶ್ರೀಧರ್ ಗೌಡ, ಟಿ ವೀರನಗೌಡ, ಎಂ ಡಿ ಮಂಜಪ್ಪ, ಮುಂತಾದ ಪ್ರಮುಖ ವೀರಶೈವ ಲಿಂಗಾಯತ ಮುಖಂಡರುಗಳು ಉಪಸ್ಥಿತರಿದ್ದರು ಎಂದು ಜಿಲ್ಲಾ ಕಾರ್ಯಕಾರಿ ಸಮಿತಿಯ ಮಹಿಳಾ ಅಭ್ಯರ್ಥಿಯಾದ ಛಾಯಾ ಮಂಜುನಾಥ್ ರವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.