ಬಳ್ಳಾರಿ , ಆಗಸ್ಟ್ 6: ಆಸ್ತಮ, ಕೆಮ್ಮು, ನೆಗಡಿ ಜ್ವರ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಪಡೆಯಲು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಆಗಿರುತ್ತಾರೆ. ಆದರೆ ಆಸ್ಪತ್ರೆಯ ಆವರಣದಲ್ಲಿ ಮತ್ತು ವಾರ್ಡ್ಗಳಲ್ಲಿ ಬೀದಿ ನಾಯಿಗಳದೇ ಕಾರು-ಬಾರು ಆಗಿದೆ ಆಸ್ಪತ್ರೆಗೆ ರೋಗಿಗಳ ಹಿಂದೆ ಬಂದ ಸಂಬಂಧಿಕರಿಗೆ ಮತ್ತು ಮಕ್ಕಳಿಗೆ ಕಚ್ಚುವ ಅಪಾಯವಿದೆ ಕಾರಣ ಸಂಬಂಧಿಸಿದ ಅಧಿಕಾರಿಗಳು ಈ ಬೀದಿ ನಾಯಿಗಳನ್ನು ಹೊರಹಾಕಲು ಕ್ರಮ ಕೈಗೊಳ್ಳಬೇಕೆಂದು ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿಗಳು ಬೀದಿ ನಾಯಿಗಳಿಂದ ದೂರವಿರಿ ಎಂದು ..ನಾಯಿಗಳು ಕಡೆದಲ್ಲಿ ತಕ್ಷಣ ಕಿತ್ತು ಪಡೆಯಿರಿ ಎಂದು ಹೇಳುತ್ತಿದ್ದಾರೆ ಹೊರತು …ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ನಾಯಿಗಳು ರಾಜಾರೋಹೊಸವಾಗಿ ತಿರುಗಾಡುತ್ತಾ ಇವೆ. ಇದಕ್ಕೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ನಿರ್ಲಕ್ಷವೇ ಕಾರಣವಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ಮೇಲೆ ಆಕ್ರೋಶಗೊಂಡಿದ್ದಾರೆ.
ಕಾರಣ ಈ ಬೀದಿ ನಾಯಿಗಳನ್ನು ಆಸ್ಪತ್ರೆಯ ಆವರಣದಿಂದ ಮತ್ತು ವಾರ್ಡ್ ಗಳಿಂದ ತೊಲಗಿಸಿ ಇಲ್ಲಿನ ರೋಗಿಗಳಿಗೆ ಮತ್ತು ಅವರ ಸಂಬಂಧಿಗಳಿಗೆ ನಾಯಿಗಳ ಕಾಟದ ಭಯದಿಂದ ಮುಕ್ತಿ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.