ಬಳ್ಳಾರಿ.ಆ.08 : ಮಾನವ ಬಂಧುತ್ವ ವೇದಿಕೆ,ಬಸವಪರ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಸಂಗನಕಲ್ಲು ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಬಸವ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಹಾಗೂ ಸಂವಿಧಾನ ಪೀಠಿಕೆ ಓದುವರ ಮುಖಾಂತರ ವಚನಗಳ ಗಾಯನ ಮಾಡುವುದರೊಂದಿಗೆ ಬಸವ ಪಂಚಮಿ ಪ್ರಾರಂಭಿಸುವ ಮೂಲಕ
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ರಾಷ್ಟ್ರೀಯ ಬಸವದಳ ರವಿಶಂಕರ್ ರವರು ಉದ್ಘಾಟನಾ ಭಾಷಣಗಳನ್ನು ಮಾಡಿ ತಮ್ಮ ನುಡಿಗಳನ್ನು ಹಂಚಿಕೊಂಡರು. 2010 ರಲ್ಲಿಯೇ ಮಾತೆ ಮಹಾದೇವಿಯ ಸತೀಶ್ ಜಾರಕಿಹೊಳಿ ಅವ್ರು ವೈಚಾರಿಕ ಚಿಂತನೆ ಹಾದಿಯಲ್ಲಿ ಸಾಗಬೇಕು ಎಂದು ಈ ಹಿಂದೆಯು ಬಸವಶರಣೆ ಮಾತೆ ಮಹದೇವಿ ಅವರು ಹೇಳಿದ್ದರು ಎಂಬುವುದನ್ನು ನೆನಪಿಸಿದರು.
ಸತೀಶ್ ಜಾರಕಿಹೊಳಿ ರವರು ಸಮಾಜದ ಡೊಂಕು ತಿದ್ದುವ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಸರಿ ಸುಮಾರಾಗಿ 2000 ಸ್ಥಳಗಳ ಏಕಕಾಲದಲ್ಲಿ ಬಸವ ಪಂಚಮಿಯನ್ನು ಆಚರಿಸುತ್ತದೆ ಅದರ ಪ್ರಯುಕ್ತವಾಗಿ ಶಾಲಾ, ಕಾಲೇಜು, ಹಾಗು ಬಡ ಮಕ್ಕಳು ಅಪೌಷ್ಟಿಕತೆಯಿಂದ ನರಳುಬಾರದು ಎಂದು ಮಕ್ಕಳಿಗೆ ಹಾಲು ಮತ್ತು ಹಣ್ಣು, ಹಂಪಲಗಳು, ಸಿಹಿತಿನಿಸುಗಳನ್ನು ಅವರ ಜೊತೆಯಲ್ಲಿ ಸವಿಯುವುದರ ಮುಖಾಂತರ ಮಾನವ ಬಂಧುತ್ವ ವೇದಿಕೆಯ ಕೆಲಸ ತುಂಬಾ ಅನನ್ಯವಾದದ್ದು ಎಂದು ಹೇಳಿದರು.
ಬಳ್ಳಾರಿಯಲ್ಲಿಯೂ ಸಹ ಮಾನವ ಬಂಧುತ್ವ ವೇದಿಕೆಯು ತುಂಬಾ ಅನೇಕ ವೈಚಾರಿಕತೆ ಹಾಗೂ ಮೌಡ್ಯ ವೈಜ್ಞಾನಿಕ ಚಿಂತನೆಗಳ ಕಾರ್ಯಕ್ರಮಗಳನ್ನು ಶರಣ ವಿಜಯಕುಮಾರ್ ಮತ್ತು ಅವರ ಸ್ನೇಹಿತರು ಅವರ ಪದಾಧಿಕಾರಿಗಳು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ತುಂಬಾ ಸಂತೋಷಕಾರವಾದ ವಿಷಯ. ಅದೇ ರೀತಿಯಲ್ಲಿ ನಮ್ಮ ಮಕ್ಕಳು ಸಹ ಮನೆಯಲ್ಲಿ ಬುದ್ಧ ಬಸವ ಅಂಬೇಡ್ಕರ್ ರವರ ಮತ್ತು ಸಂವಿಧಾನ ಮಹಾ ಗ್ರಂಥ ಮತ್ತು ಅವರ ಫೋಟೋಗಳನ್ನು ಹಾಕಿಕೊಂಡು ಹಾಗೂ ವಚನಗಳನ್ನು ಪಠಣ ಮಾಡಬೇಕು, ಕನ್ನಡಿಗರ ಧರ್ಮ ಮತ್ತು ಕನ್ನಡ ಭಾಷೆ ಅಧ್ಯಯನ ಮಾಡದಂತೆ ಆಗುತ್ತದೆ. ಸಂವಿಧಾನವನ್ನು ಅಧ್ಯಯನ ಮಾಡುವುದು ಮುಖೇನ ನಾವು ಯಶಸ್ವಿಯಾಗುತ್ತೇವೆ ಎಂದು ರಾಷ್ಟ್ರೀಯ ಬಸದಳ ಬಳ್ಳಾರಿ ಮುಖ್ಯಸ್ಥರಾದ ರವಿಶಂಕರ್ ರವರು ಈ ಸಂದರ್ಭದಲ್ಲಿ ಹೇಳಿದರು.
ರಾಷ್ಟ್ರೀಯ ಬಸವದಳ ಮುಖಂಡರಾದ ನಾಗರಾಜ ಅವರು ಸಹ ಈ ಸಂದರ್ಭದಲ್ಲಿ ಮಾತನಾಡಿ ಇಂದಿನ ಕಾಲದಲ್ಲಿ ವಿದ್ಯಾವಂತರಲ್ಲಿ ಮೌಡ್ಯವು ಅತಿ ಹೆಚ್ಚಾಗಿ ಕಂಡು ಬರುತ್ತಿರುವುದು ತುಂಬಾ ವಿಷಾದಕರ ಎಂದು ಹೇಳಿದರು.
ಕಲ್ಬುರ್ಗಿ ವಿಭಾಗೀಯ ದಸಂಸ ಸಂಚಾಲಕರು ಗಂಗಾಧರ್ ಅವರು ಮಾತನಾಡಿ ಇಂದಿನ ಯುಗದಲ್ಲಿ ಇಂತಹ ಕಾರ್ಯಕ್ರಮ ಸಮಾಜಕ್ಕೆ ಮತ್ತು ಮಕ್ಕಳಿಗೆ ತುಂಬಾ ಅವಶ್ಯಕತೆ ಮನುವಾದ ನಮ್ಮನ್ನು ಕಪಿಮುಷ್ಠಿಯಲ್ಲಿ ಹಿಡಿದಿಟ್ಟಿದೆ ಅದರಿಂದ ಹೊರ ಬರಬೇಕಾದರೆ ಬುದ್ಧ ಬಸವ ಅಂಬೇಡ್ಕರ್ ವಿಚಾರಗಳು ತುಂಬಾ ಅತಿಮುಖ್ಯ. ಇಂದು ನಮ್ಮ ನಾಡಿನಲ್ಲಿ ಈ ನಿಟ್ಟಿನಲ್ಲಿ ಅಂತಹ ಒಂದು ವಿಚಾರ ಮತ್ತು ಸಂಘಟನೆಯನ್ನು ಮಾನವ ಬಂಧುತ್ವ ವೇದಿಕೆ ಎಂಬ ಹೆಸರಿನಲ್ಲಿ ಬೆಳಕು ಚೆಲ್ಲುತ್ತಿರುವ ಈ ಯುಗದ ಅಸಾಮಾನ್ಯ ಪುರುಷ ಸತೀಶ್ ಜಾರಕಿಹೊಳಿ ಎಂದು ಹೇಳಿದರು.
ಮುಖ್ಯ ಉಪಾಧ್ಯಾಯರು ವೆಂಕಟೇಶ್ ಮಾತನಾಡಿ ಇದೊಂದು ತುಂಬಾ ಅದ್ಭುತವಾದ ಕಾರ್ಯಕ್ರಮ ಮಕ್ಕಳಿಗೆ ಇಂಥ ಕಾರ್ಯಕ್ರಮ ತುಂಬಾ ಅವಶ್ಯಕತೆ ನಾವು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದು ಸಹ ಸಂಘಟನೆಗಳ ಮುಖಾಂತರ ಮೌಡ್ಯ ಮತ್ತು ವೈಜ್ಞಾನಿಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಿರುವುದು ತುಂಬಾ ಉಪಯುಕ್ತವಾದುದ್ದು. ಈ ಹಿಂದೆ ಶರಣರು ಅನೇಕ ಜ್ಞಾನವನ್ನು ನಮಗೆ ಕೊಟ್ಟು ಹೋಗಿದ್ದಾರೆ ಗೌತಮ ಬುದ್ಧನ ಹಿಂದಿ ಹಿಡಿದು ಬಸವಣ್ಣನವರು ಅಂಬೇಡ್ಕರ್ ಅವರು ಪ್ರಸ್ತುತ ಸತಿಶ್ ಜಾರಕಿಹೊಳಿ ರವರು ಮುಂದುವರಿಸಿಕೊಂಡು ಹೋಗುತ್ತಿರುವುದು ಈ ಕಾಲದ ಸತ್ಯ ಅದು.
ವಿದ್ಯಾರ್ಥಿ ಬಂಧುತ್ವ ವೇದಿಕೆ ಸಂಚಾಲಕ ಶಿವಪುತ್ರ ಮಾತನಾಡಿ ನಾವು ಬುದ್ಧನ ಮಾತುಗಳನ್ನು ಕೇಳಬೇಕು ಮತ್ತು ಕೇಳಿಸಿಕೊಳ್ಳಬೇಕು ಅದನ್ನು ಬಸವಣ್ಣ ಅಂಬೇಡ್ಕರ್ ಮಾಡಿದ್ದಾರೆ ಈಗ ಮಾನವ ಬಂಧುತ್ವ ವೇದಿಕೆ ಸ್ಥಾಪನೆ ಮಾಡಿ ಅದರ ಮುಖ್ಯನಾ ಜನಗಳನ್ನು ಮೌಡ್ಯ ಮತ್ತು ಅಂಧಕಾರ ಇನ್ನಿತರ ಸಮಾಜವನ್ನು ಭಯಭೀತಿಗೊಳಿಸುತ್ತಿರುವ ಅಂಧಕಾರ ವಿಷಯಗಳ ವಿರುದ್ಧ ಸತೀಶ್ ಜಾರಕಿಹೊರ ಹೋರಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಮಾನವ ಬಂದುತ್ವ ವೇದಿಕೆ ಬಳ್ಳಾರಿ ಜಿಲ್ಲಾ ಸಂಚಾಲಕ ವಿಜಯಕುಮಾರ್ ಅವರು ಈ ದಿನ ಕರ್ನಾಟಕದ ಇಂದು ಕರ್ನಾಟಕದಲ್ಲಿ ಬಸವ ಪಂಚಮಿಯನ್ನು ಮಾನವ ಬಂದುತ್ವ ವೇದಿಕೆ ಆಚರಿಸುತ್ತದೆ. ಮೌಡ್ಯ ವಾಮಾಚಾರ ಜೋತಿಷ್ಯ ಪಂಚಾಂಗ ವಾಸ್ತು ಇನ್ನು ಮುಂತಾದ ವಿಷಯಗಳ ಕುರಿತು ಈಗಾಗಲೇ ಸತೀಶ್ ಜಾರಕಿಹೊಳಿ ರವರು ಆ ವಿಷಯಗಳ ವಿರುದ್ಧ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಇವತ್ತು ಮಕ್ಕಳು ಇಂದಿನ ಯುಗದಲ್ಲಿ ತಮ್ಮ ಜ್ಞಾನದಿಂದ ಇಂತಹ ಅಂಧಕಾರದ ವಿಚಾರಗಳ ವಿರುದ್ಧ ಹೋರಾಡಿದಾಗ ನಮ್ಮ ಭವಿಷ್ಯ ಸಮಾಜದ ವ್ಯವಸ್ಥೆ ಉತ್ತಮಗೊಳ್ಳುತ್ತದೆ ಅದರಿಂದ ಸಮಾಜದಲ್ಲಿ ಮುಕ್ತವಾದ ಶಾಂತಿ ಭದ್ರತೆ ಉಂಟಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪಿ ರಂಜಾನ್ ಬಾಷಾ ನಾಗರೆಡ್ಡಿ,ದಾಸಣ್ಣ ರಾಮಾಂಜನೇಯಲು, ದಿವಾಕರ್ ಬಾಬು, ಸಣ್ಣ ಭೀಮಪ್ಪ,ದಲಿತ ಸಂಘರ್ಷ ಸಮಿತಿ ಕಪ್ಪಗಲ್ ಓಂಕಾರಪ್ಪ, ಯು ಕೃಷ್ಣ, ಸುರೇಶ್ ಮಹಿಳಾ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕಿ ಕಲಾವತಿ ಸಂಗನಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಮೀಳಾ ವೀರೇಶ್, ಜೆಕೆ ಹೇಮರೆಡ್ಡಿ ಇನ್ನು ಮುಂತಾದ ಗಣ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.