ಬಳ್ಳಾರಿ,ಆಗಸ್ಟ್. 12 : ಇಂದು ಜಿಲ್ಲೆಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಮಂತ್ರಾಲಯದ ಅಧಿಕಾರಿಗಳಾದ ಬೀಮ್ ಪ್ರಕಾಶ್ ಉಪ ಕಾರ್ಯದರ್ಶಿ ತಂಡದ ನಾಯಕ ಮತ್ತು ಬ್ರಿಜೇಶ್ ಕುಮಾರ ಯೋಜನಾ ಅಧಿಕಾರಿ ಮಹಾತ್ಮ ಗಾಂಧಿ ನರೇಗಾ ಇವರು ಜಿಲ್ಲಾ ಪಂಚಾಯತಿಯ ಸಬಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಕೇಂದ್ರ ಸರ್ಕಾರದ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಸಿದರು.
ನಂತರ ಬಳ್ಳಾರಿ ತಾಲೂಕಿನ ಹಲಕುಂದಿ ಮತ್ತು ಸಂಜೀವರಾಯನಕೋಟೆ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಯಾವ ರೀತಿಯಾಗಿ ಅನುಷ್ಠಾನಗೊಳಿಸಲಾಗಿದೆ, ಎಂಬುವುದರ ಬಗ್ಗೆ ತಿಳಿದುಕೊಳ್ಳಲು ನರೇಗಾ ಕಾಮಗಾರಿ ನಡೆದ ಸ್ಥಳ ಮತ್ತು ಕಾಮಗಾರಿಗೆ ಸಂಬಂಧಿಸಿದ ಕಡತಗಳ ಪರಿಶೀಲನೆ ಮಾಡಿ, ಫಲಾನುಭವಿಗಳ ಜೊತೆ ಸಂವಾದ ಮಾಡಿದರು.
ಹಲಕುಂದಿ ಮತ್ತು ಸಂಜೀವರಾಯನಕೋಟೆ ಸಾಮಾಜಿಕ ಅರಣ್ಯ ಇಲಾಖೆಯ ಕಾಮಗಾರಿಗಳು ,ರಸ್ತೆ ಬದಿ ನೆಡುತೋಪು,
ಕಾಂಟೂರು ಟ್ರೆಂಚಸ್, ಗ್ರಾಮ ಪಂಚಾಯಿತಿಯಿಂದ ಅನುಷ್ಠಾನ ಮಾಡಿದ ಕಾಮಗಾರಿಗಳು, ಅಮೃತ ಸರೋವರ,
ದನದಕೊಟ್ಟಿಗೆ, ಸಂಜೀವಿನಿ ಶೆಡ್, ಪ್ರದಾನ ಮಂತ್ರಿ ಅವಾಸ್ ಮನೆಗಳು ಸೇರಿದಂತೆ ಗ್ರಾಮ ಪಂಚಾಯತಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಕಡತಗಳನ್ನು ಪರಿಶೀಲನೆ ಮಾಡಿದರು. ವಿಶೇಷವಾಗಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ನರೇಗಾ ಕೂಲಿಕಾರರೊಂದಿಗೆ ಸಂವಾದವನ್ನು ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷರು, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳು ತೋಟಗಾರಿಕೆ ಇಲಾಖೆ,ಕೃಷಿ ಇಲಾಖೆ ಉಪನಿರ್ದೇಶಕರು ,ಸಾಮಾಜಿಕ ಅರಣ್ಯ ಇಲಾಖೆ ಆರ್ ಎಫ್,ಓ
ಎಡಿಪಿಸಿ ಜಿಲ್ಲಾ ಪಂಚಾಯತಿ ಬಳ್ಳಾರಿ, ಸಹಾಯಕ ನಿರ್ದೇಶಕರು (ಗ್ರಾ ಉ) TC, TMIS, TIEC, TAEs, DEOs, BFTs, GKMs ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.