ಸಾಂಕ್ರಾಮಿಕ ರೋಗ ಹರಡುವ ಮುನ್ನವೇ ಎಚ್ಚೆತ್ತುಕೊಳ್ಳಿ: ಕುಡಿಯುವ ನೀರಿನ ಕೆರೆಯನ್ನು ಸ್ವಚ್ಛಗೊಳಿಸಿ.
ಕುರುಗೋಡು : ರಾಜ್ಯದ ಗ್ರಾಮೀಣ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವವನ್ನು ನೀಡಿದೆ. ಸಾವಿರಾರು ಕೋಟಿ ರೂಪಾಯಿಗಳನ್ನು ಸಹ ಖರ್ಚು ಮಾಡಿದೆ.
ಆದರೆ ಕುರುಗೋಡು ತಾಲೂಕಿನ ಸಿಂದಿಗೇರಿ ಗ್ರಾಮದ ಕುಡಿಯುವ ನೀರಿನ ಕೆರೆ ಮಾತ್ರ ಸಾವಿರಾರು ಕೋಟಿ ರೂ ಅನುದಾನ ಇದ್ದರು ಅಸ್ವಚ್ಚತೆಯಿಂದ ಕೂಡಿದೆ.
ಸಿಂದಿಗೆರಿ ಗ್ರಾಮ ಸೇರಿದಂತೆ ಇತರೆ ನಾಲ್ಕು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು, ಗ್ರಾಮದ ವರವಲಯದಲ್ಲಿ ರಾಜೀವ್ ಗಾಂಧಿ ಗ್ರಾಮಾಂತರ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಕೆರೆ ನಿರ್ಮಾಣ ಮಾಡಿ ಕಾಲುವೆ ನೀರನ್ನು ಸಂಗ್ರಹಿಸಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಲಾಗಿದೆ.
ಕೆರೆಯ ಒಳಭಾಗದಲ್ಲಿ ನೀರು ಪಾಚಿ ಕಟ್ಟಿದ್ದು, ಮತ್ತು ಮಲಮೂತ್ರ ವಿಸರ್ಜನೆ, ಹಾಗೂ ಕುಡುಕರ ತಾಣವಾಗಿ ಮಾರುಪಟ್ಟಿದೆ, ಸಂಪೂರ್ಣ ಅಸ್ವಚ್ಚತೆಯಿಂದ ಕೂಡಿರುವ ಕೆರೆ ದುರ್ವಾಸನೆ ಬೀರುತ್ತಿದೆ. ಗ್ರಾಮ ಆಡಳಿತವಾಗಲಿ, ಸಂಬಂಧಪಟ್ಟ ಅಧಿಕಾರಿಗಳೇ ಆಗಲಿ ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಕೆರೆಯನ್ನು ಸ್ವಚ್ಛಗೊಳಿಸಿ, ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ.
ಗ್ರಾಮದ ಕುಡಿಯುವ ನೀರಿನ ಕೆರೆಯು ಪಾಚಿಗಟ್ಟಿ ದುರ್ವಾಸನೆ ಬೀರುತ್ತಿದೆ,ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ, ಆದಷ್ಟು ಬೇಗ ಗ್ರಾಮ ಆಡಳಿತವಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ವಚ್ಛಗೊಳಿಸಿ, ಜನರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಿ,
ಎಸ್ ಮಂಜುನಾಥ್. ಗ್ರಾ,ಪಂ ಸದಸ್ಯರು.
ಕೆರೆಯ ಅಂಗಳದಲ್ಲಿ ಮಲಮೂತ್ರ ವಿಸರ್ಜನೆ, ಹಾಗೂ ಕುಡುಕರ ತಾಣವಾಗಿ ಮಾರುಪಟ್ಟಿದ್ದು,ಕೆರೆಯ ಸುತ್ತಾ ತಡೆಗೋಡೆ ನಿರ್ಮಿಸಿ,ಕೆರೆಯನ್ನ ಶುದ್ಧಗೊಳಿಸಿ ಸಿಂದಗಿರಿ ಸೇರಿದಂತೆ ಸುತ್ತಲಿನ ನಾಲ್ಕು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು,
ವೀರೇಶ್.ನೂರ್ ಮೊಹಮ್ಮದ್,ಗ್ರಾಮದ ಮುಖಂಡರು.