ಬಳ್ಳಾರಿ, ಆ. 16; ಬಳ್ಳಾರಿಯ ಆರ್ಯ ವೈಶ್ಯ ಅಸೋಸಿಯೇಷನ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಜಂಟಿಯಾಗಿ ಬಳ್ಳಾರಿಯಲ್ಲಿ ಆಗಸ್ಟ್ 18ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಾಸವಿ ಕಲ್ಯಾಣ ಮಂಟಪ, ಶ್ರೀ ಕನ್ನಿಕಾ ಪರಮೇಶ್ವರಿ ಟೆಂಪಲ್ ರಸ್ತೆ, ಬಳ್ಳಾರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದೆ.
ಹೃದ್ರೋಗ ತಜ್ಞ ಡಾ. ಮಲ್ಲಿಕಾರ್ಜುನ, ಮೂತ್ರಶಾಸ್ತ್ರ ತಜ್ಞ ಡಾ. ಪಾರ್ಥಸಾರಥಿ, ಕ್ಯಾನ್ಸರ್ ತಜ್ಞ ಡಾ. ಸರ್ವಣರೆಡ್ಡಿ, ಆರ್ಥೋ ವೈದ್ಯಕೀಯ ಮತ್ತು ನರವಿಜ್ಞಾನ ತಜ್ಞ ಡಾ. ಫೈಜ್ ಮತ್ತು ಜನರಲ್ ಸರ್ಜನ್ ಡಾ. ಹರಿಚರಣ್ ಅವರು ಆರೋಗ್ಯ ತಪಾಸಣೆ ಮಾಡಲಿದ್ದಾರೆ.
ಸಾರ್ವಜನಿಕರಿಗೆ ಉಚಿತ ಪ್ರವೇಶ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ, ಹೆಚ್ಚಿನ ವಿವರಗಳಿಗಾಗಿ : 94484 68676ಗೆ ಕರೆ ಮಾಡಿರಿ ಎಂದು ಶಿಬಿರದ ಆಯೋಕರು ತಿಳಿಸಿದ್ದಾರೆ.