ಬಳ್ಳಾರಿ,ಆ.27 : ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದ ನಡೆಸುತ್ತಿರುವ ಮುಷ್ಕರಕ್ಕೆ ನ್ಯಾಯಾಲಯ ತಡೆಯಜ್ಞೆಯನ್ನು ನೀಡಿದೆ ಎಂದು ಸ್ಪಾಂಜ್ ಐರನ್ ಕಾರ್ಖಾನೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ. ನ್ಯಾಯಾಲಯ ನೀಡಿದ ತಡೆಯಾಜ್ಞೆಯ ಪ್ರತಿಯನ್ನು ಜಿಲ್ಲಾ ಪೋಲಿಸ್ವರಿಷ್ಠಾಧಿಕಾರಿಯರನ್ನು ಭೇಟಿ ಮಾಡಿ ಮಾತನಾಡಿ ಈ ಮುಷ್ಕರ ರಾಜ್ಯ ಮಟ್ಟದಲ್ಲಿ ನಡೆಯಬೇಕು, ಅದು ಆಗದೆ ಲಾರಿ ಮಾಲೀಕರ ಸಂಘವು ಜಿಲ್ಲೆಯಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ಕಾರ್ಖಾನೆಗಳನ್ನೇ ಗುರಿಯಾಗಿಸಿಕೊಂಡು ಮುಷ್ಕರ ನಡೆಸುತ್ತಿರುವುದು ಅಚ್ಚರಿ ತಂದಿದೆ.
ಇದರ ಮರ್ಮ ಮತ್ತು ರಹಸ್ಯ ಏನಿರಬಹುದು ಎಂದು ಶ್ರೀನಿವಾಸರಾವ್ ಅನುಮಾನವನ್ನು ವ್ಯಕ್ತಪಡಿಸಿದರು. ರಾಜ್ಯದ ಯಾವ ಜಿಲ್ಲೆಯಲ್ಲಿಯು ಇಲ್ಲದ ಮುಷ್ಕರ ಕೇವಲ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಯಾಕೆ? ಬೇರೆ ಬೇರೆ ಜಿಲ್ಲೆಯಲ್ಲಿ ಕಾರ್ಖಾನೆಗಳಿಲ್ಲವಾ? ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಲಾರಿ ಅಸೋಸಿಯೇಷನ್ ಮುಷ್ಕರಕ್ಕೆ ನ್ಯಾಯಲಯ ಕೆಲ ಷರತ್ತು ಬದ್ಧ ತಡೆಯಾಜ್ಞೆಯನ್ನು ನಿಡೀದೆ ಎಂದು ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
೨೦೨೧ ರಲ್ಲಿ ಕೂಡ ಇಂತಹ ಮುಷ್ಕರ ಮಾಡಿದಾಗ ಫ್ಯಾಕ್ಟರಿ ಗಳಿಗೆ ಯಾವುದೇ ಅಡಚಣೆ ಮಾಡಬಾರದು ಎಂದು ಇಂಜೆಕ್ಷನ್ ಆರ್ಡರ್ ಕೊಡಲಾಗಿ ಇತ್ತು.ಅದನ್ನೇ ಮತ್ತೆ ಮುಂದು ವರಿಸಲಾಗಿದೆ. ಫ್ಯಾಕ್ಟರಿಗಳಿಗೆ ಬರುವ ಹೊಗುವ ವಾಹನಗಳಿಗೆ ತೊಂದರೆ ಮಾಡದಂತೆ ಶಾಂತಿಯುತ ಮುಷ್ಕರಕ್ಕೆ ಯಾವುದೇ ಅಡಚಣೆ ಇಲ್ಲವೆಂದು, ಆ
ಆ ೆÃಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು.
ಹಿಂದಿನAತೆ ಲಾರಿ ಮಾಲೀಕರ ಸಂಘದಿAದ ಹಳೆ ಚಾಳಿ ಮುಂದುವರೆದಿರುವುದು ಖಂಡನೀಯ ಎಂದರು. ಕಾರ್ಖಾನೆಗಳ ಮಾಲೀಕರಿಗೆ ನ್ಯಾಯಾಲಯ ಇಂಜೆಕ್ಷನ್ ಆರ್ಡರ್ ನೀಡಿದ ಹಿನ್ನೆಲೆಯಲ್ಲಿ ಡಿಸಿ, ಮತ್ತು ಎಸ್ಪಿ ಅವರನ್ನು ಭೇಟಿ ಮಾಡಿದ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರು ನ್ಯಾಯಾಲಯದ ಪ್ರತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸ್ಪಾಂಜ್ ಐರನ್ ಅಸೋಸಿಯೇಷನ್ ಅಧ್ಯಕ್ಷರಾದ ವಿ.ಶ್ರೀನಿವಾಸರಾವ್ ಅವರು ತಮ್ಮನ್ನು ಭೇಟಿ ಮಾಡಿದ ವರದಿಗಾರರ ಜೊತೆ ಮಾತನಾಡುತ್ತಾ, ಈಗಾಗಲೇ ಈ ಹಿಂದೆ ಮಾರಿ ಮಾಲೀಕರ ಹಲವಾರು ಡಿಮ್ಯಾಂಡ್ ಗಳಿಗೆ ಒಪ್ಪಿಕೊಂಡು ಕೆಲವನ್ನು ಬಗೆºರಿಸಲು ತೀರ್ಮಾನ ಮಾಡಲಾಗಿತ್ತು, ಆದರೆ ಮತ್ತೆ ಮುಷ್ಕರ ಮಾಡುತ್ತಿರುವು ಅರ್ಥಹೀನ ಎಂದರು, ಈ ಮುಷ್ಕರದಲ್ಲಿ ಸೀಮಿತ ಲಾರಿ ಮಾಲೀಕರು ಮಾತ್ರವೇ ಪಾಲ್ಗೊಂಡಿದ್ದಾರೆ. ಜಿಂದಾಲ್ ಬಿ.ಎಂ. ಎಂ.ಕಿರ್ಲೋಸ್ಕರ್ ಇನ್ನೂ ಮುಂತಾದ ಫ್ಯಾಕ್ಟರಿಗಳಲ್ಲಿ ಯಾವುದೇ ಮುಷ್ಕರ ಇಲ್ಲ, ಲೋಡಿಂಗ್ ಅನ್ ಲೋಡಿಂಗ್ ನಡೆಯುತ್ತಿದೆ. ಅಲ್ಲಿ ಲಾರಿಗಳು ಕಾಮನ್ ಆಗಿ ಓಡಾಡುತ್ತಿವೆ. ಇದೇ ಮುಷ್ಕರದಲ್ಲಿ ಭಾಗಿಯಾಗಿರುವ ಕೆಲ ಲಾರಿ ಮಾಲೀಕರ ವಾಹನಗಳು ಸಹ ಫ್ಯಾಕ್ಟರಿಗಳಲ್ಲಿ ಓಡಾಡುತ್ತಿವೆ, ಆzರೆ ನಮ್ಮ ಫ್ಯಾಕ್ಟರಿಗಳ ಮುಂದೆ ಅಲ್ಪಸ್ವಲ್ಪ ಲಾರಿ ಮಾಲೀಕರು ಮಾತ್ರ ಮುಷ್ಕರ ಮಾಡುತ್ತಿದ್ದಾರೆ ಎಂದು ಶ್ರೀನಿವಾಸರಾವ್ ಆರೋಪಿಸಿದ್ದಾರೆ. ಈಗಾಗಲೇ ಫ್ಯಾಕ್ಟರಿಗಳು ನಷ್ಟದಲ್ಲಿವೆ. ಸ್ಪಾಂಜ್, ಕೊಲ್, ರಾ ಮೇಟಿ ರಿಯಲ್ ಕೂಡ ಕಾರ್ಖಾನೆಗಳಿಗೆ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಆದರೂ ಕೂಡ ನಮ್ಮ ಕಾರ್ಖಾನೆಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳನ್ನು
ಒದಗಿಸುತ್ತ ಸ್ಥಳೀಯರಿಗೆ ಆಧ್ಯತೆ ನೀಡುತ್ತಾ ಬರಲಾಗಿದೆ.
೨೦ ಫ್ಯಾಕ್ಟರಿಗಳಿಗೆ ೬೦೦೦ ಸಾವಿರ ಲಾರಿಗಳು ಇವೆ, ನಾವು ಎನು ಮಾಡಲು ಸಾಧ್ಯವಾಗುತ್ತಿಲ್ಲ, ನಾವು ಯಾರೊಂದಿಗೂ ಸಹ ಅಗ್ರಿಮೆಂಟ್ ಮಾಡಿಕೊಂಡಿರುವುದಿಲ್ಲ. ಹೀಗೆ ಯಾಕೆ ನಮ್ಮನ್ನು ಕಾಡುತ್ತಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದರು. ಈ ಮುಷ್ಕರದ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಆರೋಪಿಸಿದ ಶ್ರೀನಿವಾಸ ರಾವ್, ಜಿಲ್ಲೆಯಲ್ಲಿ ಕೈಗಾರಿಕೆಗಳುಬೆಳೆಯಬೇಕು ಅವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಸೃಷ್ಟಿ ಮಾಡಬಾರದು, ಹಾಗೆ ಮಾಡಿದಲ್ಲಿ ಫ್ಯಾಕ್ಟರಿಗಳು ನಮ್ಮ ಜಿಲ್ಲೆಗೆ ಬರಲು ಸಾಧ್ಯವಿಲ್ಲ, ಈಗಾಗಲೇ ಎಲ್ಲವೂ ಅನ್ ಲೈನ್ ಟೆಂಡರ್ ಮೇಟೆರಿಯಲ್ ಸಿಗುತ್ತಾ ಇಲ್ಲ, ಈ ನಮ್ಮ ಕಷ್ಟವನ್ನು ಯಾರು ಆರ್ಥ ಮಾಡಿಕೊಳ್ಳತ್ತಾ ಇಲ್ಲ ಎಂದು ಶ್ರೀನಿವಾಸರಾವ್ ಬೇಸರ ವ್ಯಕ್ತಪಡಿಸಿದರು. ಇದೇ ಮುಷ್ಕರವನ್ನು ರಾಜ್ಯ ಮಟ್ಟದಲ್ಲಿ ಮಾಡಿ ತಮ್ಮ ಏನೇ ಬೇಡಿಕೆಗಳಿದ್ದರು ಬಗೆಹರಿಸಿಕೊಳ್ಳಬಹುದು, ನಮ್ಮ ದೇನೂ ತಕರಾರಿಲ್ಲ ಎಂದರು. ಪ್ರಸ್ತುತ ಬಾಡಿಗೆ ವಿಷಯವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು. ಇದು ಯಾವುದನ್ನು ಮಾಡದೆ ಮಾಲೀಕರು ಮುಷ್ಕರಕ್ಕೆ ಕರೆ ಕೊಟ್ಟು ಗೊಂದಲ ಮೂಡಿಸುತ್ತಿದ್ದಾರೆ. ಇನ್ನು ಲಾರಿ ಮಾಲೀಕರ ಸಂಘದಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ತೋರಿಸುತ್ತದೆ. ಇದು ಮುಂದೆ ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದು ತಿಳಿಯದಾಗಿದೆ ಎಂದು ಶ್ರೀನಿವಾಸರಾವ್ ಆತಂಕ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿದ್ದ ಸಂಸದ ತುಕಾರಂ ಅವರಿಗೆ ಮನವಿ ಪತ್ರವನ್ನು ಸ್ಪಾಂಜ್ ಐರನ್ ಕಾರ್ಖಾನೆ ಮಾಲೀಕರು ನೀಡಿ ತಮ್ಮ ಅಳಲು ತೋಡಿಕೊಂಡರು.