ಬಳ್ಳಾರಿ,ಆಗಸ್ಟ್. 27 : ರಾಜ್ಯ ಸರ್ಕಾರವು ಅಧಿವೇಶನದಲ್ಲಿ ಜಿಂದಾಲ್ ಕಂಪನಿಗೆ 3667 ಎಕರೆ ಜಮೀನನ್ನು ಮಾರಾಟ ಮಾಡಲು ನಿರ್ಣಯವನ್ನು ಕೈಗೊಂಡಿರುವುದು ಸ್ವಾಗತ ಅರ್ಹ ಎಂದು ಮಾಜಿ ಸಂಸದ ಕೆ. ಸಿ. ಕೊಂಡಯ್ಯ ತಿಳಿಸಿದರು.
ಅವರು ನಗರದ ಬಾಲ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಜಿಂದಾಲ್ ಒಡೆತನದ ಉಕ್ಕಿನ ಕಾರ್ಖಾನೆಯನ್ನು ಪ್ರಾರಂಭಿಸಲು 1995ರ ಇಸವಿಯಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಅಕ್ಕಪಕ್ಕದಲ್ಲಿ ಪ್ರತಿ ಎಕರೆಗೆ 45,000 ರೂಪಾಯಿಗಳಂತೆ 3695 ಎಕರೆ ಜಮೀನನ್ನು ಹಂಚಿಕೆ ಮಾಡಿತು. ಮತ್ತು ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ ನ ಪೂರಕ ಕೈಗಾರಿಕಾ ಘಟಕಕ್ಕಾಗಿ 250 ಎಕರೆ ಭೂಮಿಯನ್ನು ಎಕರೆಗೆ 65,000 ಸಾವಿರ ರೂಪಾಯಿಗಳಂತೆ ಮಂಜೂರು ಮಾಡಿದ್ದು, ಮತ್ತು ಈ ಸಂದರ್ಭದಲ್ಲಿ ಕಾರ್ಖಾನೆಯು ಪ್ರತಿ ಎಕರೆಗೆ 5000 ರೂಪಾಯಿಗಳನ್ನು ಹೆಚ್ಚುವರಿ ಪರಿಹಾರ ಸಹ ನೀಡಿತ್ತು ಅಲ್ಲದೆ ಯೋಜನಾ ನಿರಾಶ್ರಿತರ ಕುಟುಂಬಕ್ಕೆ ಒಂದು ಉದ್ಯೋಗವನ್ನು ಸಹ ನೀಡಿತ್ತು.
ಮುಂದುವರೆದು ದಿನಾಂಕ 1996 ರಂದು 10 ವರ್ಷಗಳ ಅವಧಿಗೆ 3430 ಎಕರೆ ಭೂಮಿಯನ್ನು ಲೀಸ್ ಕಮ್ ಸೇಲ್ ಅಗ್ರಿಮೆಂಟ್ ಮಾಡಿಕೊಡಲಾಗಿತ್ತು, ಮುಂದೆ 2005ರಲ್ಲಿ ಇದನ್ನು ಅಬ್ಸಲ್ಯೂಟ್ ಸೇಲ್ ಡೀಡ್ ಆಗಿ ಪರಿವರ್ತಿಸಲಾಯಿತು.
ನಂತರ ಇದರಲ್ಲಿ ನಡೆದ ಸಂಪುಟದಲ್ಲಿ ಸೌತ್ ವೆಸ್ಟ್ ಐರನ್ ಅಂಡ್ ಸ್ಟೀಲ್ ಸಂಸ್ಥೆಗೆ ಒಂದು ಎಕರೆಗೆ 90 ಸಾವಿರ ರೂಪಾಯಿಗಳ ಪ್ರಕಾರ 2000 ಎಕರೆ ಭೂಮಿಯನ್ನು ಆರು ವರ್ಷದ ಅವಧಿಗೆ ಕೊಡಲಾಗಿತ್ತು. ಇದು ಸಹ 2012ಕ್ಕೆ ಲೀಸ್ ಕೊನೆಗೊಂಡಿತ್ತು. ಇದನ್ನು ಸಹ ಸರ್ಕಾರ ಲೀಸ್ ಕಮ್ ಸೇಲ್ ಡಿಡ್ ಆಗಿ ಪರಿವರ್ತಿಸಿತ್ತು. ಅದೇ ರೀತಿಯಾಗಿ 2017 ರಲ್ಲಿ 1666 ಎಕರೆ ಭೂಮಿಯ 10 ವರ್ಷದ ಮುಗಿದಿತ್ತು. ಇದನ್ನು ಸಹ ಸರ್ಕಾರ ಅಬ್ಸಲ್ಯೂಟ್ ಸೇಲ್ ಡೀಡ್ ಆಗಿ ಪರಿವರ್ತಿಸಿತ್ತು. ಈ ರೀತಿಯಾಗಿ ಒಟ್ಟು 3666 ಎಕರೆ ಭೂಮಿಯನ್ನು ಜೆ ಎಸ್ ಡಬ್ಲ್ಯೂ ಸ್ಟೀಲ್ ಸಂಸ್ಥೆಗೆ ನೀಡಲಾಗಿತ್ತು.
ಲೀಸ್ ಅವಧಿ ಮುಗಿದ ಕಾರಣ ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕುರೆ ಕುಪ್ಪ ಗ್ರಾಮದ 2000 ಎಕರೆ ಮೂಸಿ ನಾಯಕನಹಳ್ಳಿ ಮತ್ತು ಎರಬನಹಳ್ಳಿ ಗ್ರಾಮಗಳ 1666 ಎಕರೆ ಸೇರಿದಂತೆ ಒಟ್ಟು ರೂ.3666 ತಾಲೂಕಿನ ಜಮೀನನ್ನು ಶುದ್ಧ ಕ್ರಯ ಪತ್ರ ಜಾರಿಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಇದು ನಿಜಕ್ಕೂ ಸ್ವಾಗತ ಅರ್ಹ ಎಂದರು.
ಜೆ ಎಸ್ ಡಬ್ಲ್ಯೂ ಕೈಗಾರಿಕೆಗಳಿಂದ ಪ್ರತ್ಯಕ್ಷವಾಗಿ 25,000 ಪ್ರತ್ಯಕ್ಷವಾಗಿ 2 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದು ಇದು ಬಳ್ಳಾರಿ ಜಿಲ್ಲೆಯ ಕೈಗಾರಿಕೆಯಾಗಿದೆ, ಆದರೆ ವಿತ್ತಲ್ ಮತ್ತು ಏನ್ ಎಂ ಡಿ ಸಿ, ಭೂಷಣ್ ಸ್ಟೀಲ್ ಕಾರ್ಖಾನೆಗಳಿಗೆ 3,000 ಎಕರೆ ಭೂಮಿ ಮಂಜೂರು ಮಾಡಲಾಗಿರುತ್ತದೆ, ಆದರೆ ಈ ಕಂಪನಿಗಳು ಇಲ್ಲಿಯವರೆಗೆ ಕೈಗಾರಿಕೆಗಳನ್ನು ಸ್ಥಾಪಿಸಿರುವುದಿಲ್ಲ. ಈ ಭೂಮಿಯನ್ನು ಸರ್ಕಾರವು ಮರು ವಷಪಡಿಸಿಕೊಂಡಿರುತ್ತದೆ.
ಸರ್ಕಾರದ ನಿಯಮದಂತೆ ಜೆ ಎಸ್ ಡಬ್ಲ್ಯೂ ಕಾರ್ಖಾನೆಗೆ ಗುತ್ತಿಗೆ ಓದಿ ಮುಗಿದ ನಂತರ ನೇರ ಮಾರಾಟ ಮಾಡುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ ಆದ್ದರಿಂದಲೇ ಸರ್ಕಾರ ಅಧಿವೇಶನದಲ್ಲಿ ಜೆ ಎಸ್ ಡಬ್ಲ್ಯೂ ಕಂಪನಿಗೆ ಭೂಮಿಯನ್ನು ಮಾರಾಟ ಮಾಡುವ ತೀರ್ಮಾನ ತೆಗೆದುಕೊಂಡಿದೆ, ಇದು ಯಾವುದೇ ರೀತಿಯಲ್ಲಿ ಅಕ್ರಮವಾಗುವುದಿಲ್ಲ ಎಂದು ಅವರ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪಿ ಗಾದೆಪ್ಪ, ಮುಖಂಡರಾದ ಶ್ರೀ ರಾಮರಾಜು, ಅಯಾಜ್ ಅಹ್ಮದ್ ಸೇರಿದಂತೆ ಇತರ ಇದ್ದರು.