ಬಳ್ಳಾರಿ: ನಗರದ ಸಂತ ಜಾನರ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ನಗರದ ಕೋಟೆ ಆವರಣದಲ್ಲಿರುವ ಸಂತ ಜಾನರ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ರೂಂ ನಂ.18 ರಲ್ಲಿ ಮಂಗಳವಾರ ನಡೆದ ಕೆಪಿಎಸ್ ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪೇಪರ್ ಪರೀಕ್ಷೆ ಪ್ರಾರಂಭವಾಗುವುದಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಓಪನ್ ಆಗಿತ್ತು ಇದರಿಂದಾಗಿ ಅನುಮಾನದಿಂದ ಈ ಬಗ್ಗೆ ಮೇಲ್ವಿಚಾರಕರನ್ನು ಪ್ರಶ್ನಿಸಿದರೆ ಸಮಂಜಸ ಉತ್ತರ ನೀಡದೆ ಹಾರಿಕೆಯ ಉತ್ತರ ನೀಡುದ್ದಾರೆ ಎಂದು ಆರೋಪಿಸಿದ್ದಾರೆ.
ಸಾಮಾನ್ಯವಾಗಿ ಪರೀಕ್ಷೆ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಯ ಓಪನ್ ಮಾಡುತ್ತಾರೆ ಆದರೆ ಮೇಲ್ವಿಚಾರಕರು ಈ ನಿಯಮ ಉಲ್ಲಂಘಿಸಿದ್ದಾರೆ ಇದು ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಉದ್ಯೋಗ ಆಕಾಂಕ್ಷಿಗಳಾದ ಜೇವರ್ಗಿಯ ಸಂತೋಷ ಮತ್ತು ಗುಲ್ಬರ್ಗದ ಕಲ್ಲಪ್ಪ ಅವರು ಪ್ರತಿಭಟನೆ ನಡೆಸಿದರು.