ಬಳ್ಳಾರಿ,ಸೆ.04: ಇಲಾಖೆವಾರು ಅಂಕಿಅಂಶಗಳ ಪ್ರಕಾರ ಸರಿಯಾದ ಮಾಹಿತಿ ತರದೆ ಸಭೆಯಲ್ಲಿ ತಡಬಡಿಸಿದ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಂಸದ ತುಕಾರಾಂ.ನಗರದ ಕೋಟೆ ಪ್ರದೇಶದಲ್ಲಿರುವ ಜಿಲ್ಲಾ ಪಂಚಾಯತ್ ನ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ(ದಿಶಾ)ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಅಧಿಕಾರಿಗಳಿಗೆ ಚಳಿ ಬಿಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಆಯಾ ಇಲಾಖೆಗಳ ಮಾಹಿತಿಯನ್ನ ಸರಿಯಾಗಿ ನೀಡಿದೆ ಇರುವುದರಿಂದ ಸಂಸದ ಈ.ತುಕಾರಾಂ ರವರು ಅಧಿಕಾರಿಗಳ ವಿರುದ್ಧ ಗರಂ ಆಗಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರ ಹಾಕಿದರು.ತುಕಾರಾಂ ಸಂಸದರಾದ ಬಳಿಕ ಮೊದಲ ದಿಶಾ ಸಭೆಯನ್ನ ಇಂದು ನಡೆಸಿದರು.
ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಗರಂ ಆದ ಸಂಸದರು ನಾನು ನಾಲ್ಕು ಬಾರಿ ಶಾಸಕನಾಗಿ ಮಂತ್ರಿಯಾಗಿ ಸಂಸದನಾದವನು ಈ ರೀತಿಯ ಬೇಜವಾಬ್ದಾರಿತನ ಪ್ರರ್ಶಿಸಿದರು ನಾನು ನಿಮ್ಮಗಳ ಮೇಲೆ ಸರಕಾರಕ್ಕೆ ಬರೆಯುತ್ತೇನೆ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದರು.
ದಿಶಾ ಸಭೆಯ ಮುನ್ನ ಪೂರ್ವ ಭಾವಿಯಾಗಿ ಅಧಿಕಾರಿಗಳ ಸಭೆ ಕರೆದು ಇಲಾಖೆವಾರು ಸರಿಯಾದ ಮಾಹಿತಿ ತರಲು ಸೂಚಿಸದ ಜಿಲ್ಲಾ ಪಂಚಾಯತ ಸಿಇಓ ಮೇಲೂ ಸಂಸದ ತುಕಾರಾಂ ಗರಂ ಆದ ಘಟನೆಯು ನಡೆಯಿತು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚಂದ್ರಶೇಖರ್ ಗೆ ಹಿಗ್ಗಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ ಗಣೇಶ : ಚಂದ್ರಶೇಖರ ಆರುವರೆ ವರ್ಷದಲ್ಲಿ ನೀನು ನನಗೆ ಎಷ್ಟು ಬಾರಿ ಕರೆ ಮಾಡಿದೀಯಾ? ನಿಮ್ಮ ಕೆಳ ಅಧಿಕಾರಿಗಳಾದ ವಿಜಯಲಕ್ಷ್ಮಿಯವರು ಬಹಳ ಸೊಕ್ಕಿ ವರ್ತನೆ ಮಾಡ್ತಾರೆ. ಅವರಿಗೆ ಹೇಳಿ, ಚಂದ್ರಶೇಖರ ಅವರೇ ನೀವು ಎಲ್ಲಾರ ಮುಂದೆ ನನಗೆ ಬಳ್ಳಾರಿ ಜಿಲ್ಲೆ ಇಷ್ಟಲ್ಲ ಅಂತ ಹೇಳ್ತೀರಲ್ಲ ನಿನಗೆ ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಅಂದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ನಿಮ್ಮಂತ ಅಧಿಕಾರಿಗಳು ನಮಗೆ ಬೇಕಾಗಿಲ್ಲ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಏರು ಧ್ವನಿಯಲ್ಲೆ ಚಂದ್ರಶೇಖರಗೆ ನೀರಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.