ಬಳ್ಳಾರಿ,ಸೆ.೦೪ : ಬಳ್ಳಾರಿ ನಗರದ ಜಿಲ್ಲಾ ಪಂಚಾಯತ್ನ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯಲ್ಲಿ ಸಂಸದ ತುಕಾರಾಂ ಮತ್ತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ,ಎಸ್ಪಿ ಶೋಭಾರಾಣಿ,ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶರಣಪ್ಪ ಸಂಕನೂರು, ಸಿರುಗುಪ್ಪಶಾಸಕ ನಾಗರಾಜ್, ಕಂಪ್ಲಿ ಶಾಸಕ ಜೆ.ಎಸ್.ಗಣೇಶ್ ಮತ್ತು ಮೇಯರ್ ಮುಲ್ಲಂಗಿ ನಂದೀಶ್ ಭಾಗವಹಿಸಿದ್ದರು.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮೊದಲನೆ ತ್ರೆöÊಮಾಸಿಕ ಪ್ರಗತಿ ವರದಿಯನ್ನು ಸಂಸದ ತುಕಾರಾಂ ಅವರು ಪಡೆಯುತಿದ್ದರು. ಅಧಿಕಾರಿಗಳು ನೀಡಿದ ಅರ್ದಂ ಬರ್ದ ಮಾಹಿತಿಗೆ ಸಂಸದರು ಅಧಿಕಾರಿಗಳ ಮೇಲೆ ಆಗ್ರಹವನ್ನು ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕು ಇಲ್ಲದಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಂತರ ಊಟದ ಸಮಯವಾಯ್ತು ಊಟಕ್ಕೆ ತೆರಳಿದರು. ಊಟ ಮಾಡುವ ವಿಚಾರದಲ್ಲಿ ಕೂಡಾ ಪ್ರಜಾಪ್ರತಿನಿಧಿಗಳಿಗೆ ಹೋಳಿಗೆ ಊಟ, ಅಧಿಕಾರಿಗಳಿಗೆ ಮಾತ್ರ ರುಚಿ ಇಲ್ಲದ (ಉಪ್ಪು ಕಾರವಿಲ್ಲದ) ಚಿತ್ರನ್ನ ಮೊಸರನ್ನು ಒಂದು ಮಿರ್ಚಿ ನೀಡಿ ತಾರತಮ್ಯ ಮಾಡಿದ್ದಾರೆಂದು ಕೆಲ ಅಧಿಕಾರಿಗಳು ನುಂಗಿಕೊಳ್ಳದೇ, ಹೊರಗಡೆ ಹೇಳಿಕೊಳ್ಳದೇ ಬೇಸರವನ್ನು ವ್ಯಕ್ತ ಪಡಿಸಿದರು.
ಮೀಟಿಂಗ್ಗಳಿಗೆ ಇಂತಹಾ ಸಭೆಗಳಿಗೆ ಹೆಗ್ಗಿಲ್ಲದೇ ಖರ್ಚು ಮಾಡುತ್ತಾರೆ, ಊಟದ ವಿಷಯದಲ್ಲಿ ಈತರ ಮಾಡುತ್ತಾರೆ ಎಂದು ಆವೇದನವನ್ನು ವ್ಯಕ್ತ ಪಡಿಸಿದರು. ೨೩೫ ಮಂದಿ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಒಂದು ಊಟಕ್ಕೆ ೬೦ ರೂ ಅಂತೆ, ಲೋಕಸಭಾ ಸದಸ್ಯರು ಸೇರಿದಂತೆ ಶಾಸಕರಿಗೆ, ಉನ್ನತ ಮಟ್ಟದ ಅದಿಕಾರಿಗಳಿಗೆ ಹೋಳಿಗೆ ಊಟ ಒಂದಕ್ಕೆ ೧೩೫ ರೂ ಅಂತೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ನೋಡಿದ ಕೆಲ ಅಧಿಕಾರಿಗಳು ನೂತನ ಸಂಸದರು ಎಲ್ಲರೂ ಸೇರಿ ಅಭಿವೃದ್ಧಿಗೆ ಪಣ ತೊಡಬೇಕೆಂದು ಹೇಳಿದ್ದು ಸ್ವಾಗತಾರ್ಹ ಆದರೇ ಊಟದ ವಿಚಾರದಲ್ಲಿ ತಾರತಮ್ಯ ಮಾಡಿದ್ದು ಬೇಸರ ಉಂಟು ಮಾಡಿದೆ. ಈ ವಿಚಾರದ ಮೇಲೆ ನೂತನ ಸಂಸದರು ಗಮನಹರಿಸಿದ್ದರೇ ಚನ್ನಾಗಿರ್ತಿತ್ತು ಎಂದು ಬೇಸರ ವ್ಯಕ್ತ ಪಡಿಸಿದರು.